Connect with us

Dvgsuddi Kannada | online news portal | Kannada news online

ವಚನಗಳು ಬದುಕಿನ ದಾರಿ ದೀಪ: ಶ್ರೀ ಬಸವಪ್ರಭು ಸ್ವಾಮೀಜಿ

ದಾವಣಗೆರೆ

ವಚನಗಳು ಬದುಕಿನ ದಾರಿ ದೀಪ: ಶ್ರೀ ಬಸವಪ್ರಭು ಸ್ವಾಮೀಜಿ

ಡಿವಿಜಿಸುದ್ದಿ.ಕಾಂ

ದಾವಣಗೆರೆ: ವಚನಗಳು ಬದುಕಿನ ದಾರಿ ದೀಪವಾಗಿದ್ದು, ಪ್ರತಿಯೊಬ್ಬರು ತಮ್ಮ ಜೀನದಲ್ಲಿ ವಚನ ಸಾರ ಅಳವಡುಸಿಕೊಳ್ಳುವ ಮೂಲಕ ಬದುಕನ್ನು ಇನ್ನಷ್ಟು ಸುಂದರವಾಗಿ ರೂಪಿಸಿಕೊಳ್ಳಿ ಎಂದು ವಿರಕ್ತ ಮಠದ  ಶ್ರೀ ಬಸವಪ್ರಭು ಸ್ವಾಮೀಜಿ ಆರ್ಶಿವಚನ ನೀಡಿದರು.

ಶ್ರಾವಣ ಮಾಸದ ಪ್ರಯುಕ್ತ ಬಸವ ಕೇಂದ್ರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಚನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಈ ಶತಮಾನದ ದುರಂತವೆಂದರೆ ಕೊಲೆ,ಸುಲಿಗೆ,ದರೋಡೆ, ಭ್ರಷ್ಟಾಚಾರ, ಮೋಸ, ಅಪ್ರಮಾಣಿಕತೆಯಿಂದ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಈ ಮಾನವೀಯ ಮೌಲ್ಯಗಳನ್ನು ಪುನರ್ ಸ್ಥಾಪಿಸಿಕೊಳ್ಳಬೇಕಾದರೆ ಬಸವಣ್ಣ ನವರ ವಚನಗಳನ್ನು ಮೈಗೂಡಿಸಿಕೊಳ್ಳಬೇಕಿರುವುದು ಅವಶ್ಯಕವಾಗಿದೆ. ಈ ಮೂಲಕ ಅಂತರಂಗ ಮತ್ತು ಬಹಿರಂಗ ಶುದ್ಧಿಯಾಗಿ ಸಮಾಜದಲ್ಲಿ ಶಾಶ್ವತ ನೆಮ್ಮದಿ ನೆಲೆಸಲು ಸಾಧ್ಯವಿದೆ ಎಂದರು.

ಬಸವಕೇಂದ್ರ ಆಯೋಜಿಸಿದ್ದ ವಚನ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ವಿತರಣೆ ಸಂದರ್ಭ

ಇಡೀ ವಿಶ್ವವೇ ವಚನ ಸಾಹಿತ್ಯಕ್ಕೆ ಮನ ಸೋತಿದ್ದು, ಇಡೀ ಜಗತ್ತೇ ಬಸವಣ್ಣನವರ 12 ಶತಮಾನದ ಕಡೆ ನೋಡುವಂತಾಗಿದೆ. ಈಗಿನ ಮನೋಶಾಸ್ತ್ರ, ಅರ್ಥಶಾಸ್ತ್ರರನ್ನು ಮೀರಿಸುವ ಉತ್ಕೃಷ್ಟ ಮಾರ್ಗದರ್ಶನವನ್ನು ಬಸವಣ್ಣನವರು ಜಗತ್ತಿಗೆ ನೀಡಿದ್ದಾರೆ. ಇಂತಹ ವಚನದ ಸಾರವನ್ನು ದಿನ ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಶಾಂತಿ , ನೆಮ್ಮದಿ, ಸ್ನೇಹ , ಸಹಬಾಳ್ವೆಯಿಂದ ಸಚ್ಚಾರಿತ್ರ್ಯ ಹಾಗು ಕಾಯಕ ನಿಷ್ಟರಾಗಿ ಬಾಳಿ ಎಂದು ಆರ್ಶಿವಚನ ನೀಡಿದರು.

ಜಾಹೀರಾತು

 

ವಚನ ಸ್ಪರ್ಧೆಯ ಪ್ರಶಸ್ತಿ ವಿಜೇತರು

ವೇಶಭೂಷಣ ಸ್ಪರ್ಧೆ

 

1ರಿಂದ 4 ನೇ ತರಗತಿ ವರೆಗೆ

ಪ್ರಥಮ: ಧ್ರುವ ಜಿ.ಎಸ್. – ಬಕ್ಕೇಶ್ವರ ಪ್ರೌಢಶಾಲೆ
ದ್ವೀತಿಯ: ಕುಸುಮಾ ಕೆ.ಎಂ – ಜೆಜೆಎಂ ,ವಿರಕ್ತಮಠ
ತೃತೀಯ: ಸಮೃದ್, – ಜೆಜೆಎಂ , ವಿರಕ್ತಮಠ
ಸಮಾಧಾನಕರ: ಭಾಗ್ಯ, ಕುಮಾರೇಶ್

 

5 ನೇ ತರಗತಿಯಿಂದ 7 ನೇ ತರಗತಿ ವರೆಗೆ

ಪ್ರಥಮ: ಮೇಘನಾ- ಸಿದ್ಧಗಂಗಾ ಪ್ರೌಢಶಾಲೆ
ದ್ವಿತೀಯ: ಶ್ರೇಯಾ ಎಂ – ಜೆಎಂಎಂ, ವಿರಕ್ತ ಮಠ
ತೃತೀಯ: ಭಾಗ್ಯ ವಿ. ಜೆಎಂಎಂ, ವಿರಕ್ತ ಮಠ
ಸಮಾಧಾನಕರ: ನಳಿನಿ, ಭಾವನ

 

ಜಾಹೀರಾತು

 

ವಚನ ಕಂಠಪಾಠ ಸ್ಪರ್ಧೆ

8 ರಿಂದ 10 ನೇ ತರಗತಿ ವರೆಗೆ

ಪ್ರಥಮ:ಮಾನಸ ಎಕೆ. ಚಂದ್ರಕಲಾ -ಜೆಜೆಎಂ, ವಿರಕ್ತಮಠ
ದ್ವಿತೀಯ:ಮನೋಜ್ -ಜೆಜೆಎಂ, ವಿರಕ್ತ‌ಮಠ
ತೃತೀಯ: ಕೊಟ್ರೇಶ್ ಜೆಜೆಎಂ ವಿರಕ್ತ ಮಠ
ಸಮಾಧಾನಕರ: ಪೂಜಾ, ದತ್ತಾ

1-4 ನೇ ತರಗತಿ ವರೆಗೆ

ಪ್ರಥಮ :ಧ್ರುವ ಜಿ.ಎಸ್ – ಬಕ್ಕೇಶ್ವರ ಪ್ರೌಢಶಾಲೆ
ದ್ವೀತಿಯ: ಸಮೀಕ್ಷಾ – ಬಕ್ಕೇಶ್ವರ ಪ್ರೌಢಶಾಲೆ
ತೃತೀಯ:ವಿ.ಸಿಂಧೂ -ಜೆಎಂಎಂ , 

 

5 ರಿಂದ 7 ನೇ ತರಗತಿ ವರೆಗೆ

ಪ್ರಥಮ:ಶ್ರೇಯಾ ಎಂ – ವಿರಕ್ತಮಠ
ದ್ವಿತೀಯ:ಯಶಸ್ವಿನಿ
ತೃತೀಯ:ಶಿವಕುಮಾರ್ , ಎಂ.ವಿ.
ಸಮಾಧಾನಕರ: ತನುಜಾ , ಸಂಜನ

ಈ ಸಂದರ್ಭದಲ್ಲಿ ಆಧ್ಯಾತ್ಮಿಕ ಚಿಂತಕರಾದ ಚನ್ನಬಸವ ಗೂರುಜಿ, ಪ್ರಗತಿಪರ ಚಿಂತಕ ಆರ್. ಶೇಷಣ್ಣ ಕುಮಾರ್, ಓಂಕಾರಪ್ಪ, ಸತೀಶ್ ಉಪಸ್ಥಿತರಿದ್ದರು.

 

ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ನಂಬರ್ : 9844460336 ,7483892205

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top