Connect with us

Dvgsuddi Kannada | online news portal | Kannada news online

ಇಂದಿರಾ ಕ್ಯಾಂಟೀನ್ ಗೆ ಚಾಲನೆ: ಸರ್ಕಾರದ ವಿರುದ್ಧ ಮತ್ತೆ ಗುಡುಗಿದ ಸಿದ್ದು

ಹರಿಹರ

ಇಂದಿರಾ ಕ್ಯಾಂಟೀನ್ ಗೆ ಚಾಲನೆ: ಸರ್ಕಾರದ ವಿರುದ್ಧ ಮತ್ತೆ ಗುಡುಗಿದ ಸಿದ್ದು

 ಡಿವಿಜಿಸುದ್ದಿ.ಕಾಂ, ಹರಿಹರ: ವಿಪಕ್ಷ ನಾಯಕ ಸಿದ್ದರಾಮಯ್ಯ ನಗರದ ಮಿನಿ ವಿಧಾನ ಸೌಧದ ಬಳಿ ನೂತನವಾಗಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಗೆ  ಇವತ್ತು ಚಾಲನೆ ನೀಡಿದರು. ನಂತರ ಶ್ರೀ ಮಹರ್ಷಿ ವಾಲ್ಮೀಕಿ ಭಾವ ಚಿತ್ರಕ್ಕ ಪುಷ್ಪ ನಮನ ಸಲ್ಲಿಸಿದ  ಸರ್ಕಾರದ ವಿರುದ್ಧ ತಮ್ಮದೇ ದಾಟಿಯಲ್ಲಿ ತರಾಟೆಗೆ ತಗೆದುಕೊಂಡರು.

ವಿಧಾನಸಭಾ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದ ಸಿದ್ಧರಾಮಯ್ಯ, ಹರಿಹರದ ಕಾರ್ಯಕ್ರಮದಲ್ಲಿಯೂ ಅದೇ ದಾಟಿಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇಂದಿರಾ ಕ್ಯಾಂಟೀನ್ ಗೆ  ಹಣ ಕೊಡಲು ಆಗದಿದ್ದರೆ, ಕುರ್ಚಿಬಿಟ್ಟು ಇಳಿಯಿರಿ.  ನಾವು ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವುದಿಲ್ಲ. ಬಿಜೆಪಿ ಅವರು ಈ  ದೇಶದ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಹೇಳಿಕೆ ಕೊಡುತ್ತಿದ್ದಾರೆ.  ಈ ದೇಶದ ಸಂವಿಧಾನದ ಏನಾದ್ರು  ಬದಲಾವಣೆಗೆ ಪ್ರಯತ್ನಿಸಿದರೆ ರಕ್ತಪಾತವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬೀದಿಗೆ ಇಳಿದು ಹೋರಾಟ 

ಹಸಿವು ಮುಕ್ತ ಕರ್ನಾಕ ಮಾಡುವ ಉದ್ದೇಶದಿಂದ ಇಂದಿರಾ ಕ್ಯಾಂಟಿನ್ ಮಾಡಬೇಕೆಂದು 2018 ರಲ್ಲಿ ನಿರ್ಧರಿಸಿದೆ.  ನಿನ್ನೆ ಸದನದಲ್ಲಿ, ಬಡವರಿಗೆ ಫ್ರೀ ಅಕ್ಕಿ ಕೊಡುವುದನ್ನು ನಿಲ್ಲಿಸಬಾರದು ಮತ್ತು 5 ಕೆ.ಜಿಯಿಂದ 7 ಕೆ.ಜಿಗೆ ಹೆಚ್ಚಿಸಬೇಕು ಎಂದು  ಹೇಳಿದ್ದೇನೆ.  ಇನ್ನು, ನಮ್ಮ ಸರ್ಕಾರ  ಅಧಿಕಾರಕ್ಕೆ ಬಂದ್ರೆ 10 ಕೆ ಜಿ ಅಕ್ಕಿ ಕೊಡುತ್ತೇನೆ. ತಾಲ್ಲೂಕ್  ಜಿಲ್ಲೆ  ಬೆಂಗಳೂರಿನ ಎಲ್ಲಾ ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟಿನ್ ತೆಗೆದ್ರೆ 300 ಕೋಟಿ ಖರ್ಚಾಗುತ್ತದೆ. ಮುನ್ಸಿಪಾಲಿಟಿ , ನಗರಸಭೆ ಯಿಂದ ಕೊಡುವ ಹಣದ ಮೇಲೆ ಅವಲಂಭನೆಯಾಗಿವೆ.   ಸರ್ಕಾರದಿಂದಲೇ ಇಂದಿರಾ ಕ್ಯಾಂಟಿನ್ ಗೆ ಹಣ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ನಿಮಗೆ 300 ಕೋಟಿ  ಖರ್ಚು ಮಾಡಲಿಕ್ಕೆ ಆಗಲಿಲ್ಲ ಅಂದ್ರೆ ಕುರ್ಚಿ ಬಿಡಿ. ಇನ್ನು ಇಂದಿರಾ ಕ್ಯಾಂಟಿನ್  ನಿಲ್ಲಿಸಿದ್ರೆ ಅನುದಾನ ಕಡಿತ ಮಾಡಿದ್ರೆ  ಬೀದಿಗಿಳಿದು  ಹೋರಾಟದ ಮಾಡುವುದು ಖಚಿತ ಎಂದರು.

3 ದಿನಕ್ಕೆ ಅಂಗಡಿ ಬಂದ್

ರಾಜ್ಯದ ಸಮಸ್ಯೆ ಬಗ್ಗೆ ಸದನದಲ್ಲಿ  5 ಗಂಟೆ ಮಾತನಾಡಿದೆ, ನೆರೆ ಪರಿಹಾರದ ಸಂಕಷ್ಟದ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟೆ. ಆದರೆ, ಗಿರಾಕಿಗಳು 3 ದಿನಕ್ಕೆ  ಅಂಗಡಿ ಬಂದ್  ಮಾಡಿಕೊಂಡು ಹೋದ್ರು. ಪ್ರವಾಹ ಪರಿಹಾರ ಸೂಕ್ತವಾಗಿ ಕೊಟ್ಟಿಲ್ಲ. ನಮ್ಮ ಸರ್ಕಾರದ ಐದು ವರ್ಷದಲ್ಲಿ ಒಂದೇ ಒಂದು ಚೆಕ್ ಬೋನ್ಸ್ ಇಲ್ಲ. ಖಜಾನೆ ಖಾಲಿಯಾಗಿದೇ ಏನ್ರೀ ಯಡಿಯೂರಪ್ಪ. ಖಜಾನೆ ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಹೇಳುತ್ತಾರೆ. ಲೂಟಿಯಾಗಿದೆಯಾ ಅಂತಾ ನಾನು, ಯಡಿಯೂರಪ್ಪ ಅವರಿಗೆ ಕೇಳಿದ್ರೆ, ಅವರು ಇಲ್ಲ, ಅಂತಾ ಕತ್ತು ಅಲ್ಲಾಡಿಸಿದ್ದಾರೆಂದ್ರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ರಾಮಪ್ಪ, ವಿಧಾನ ಪರಿಷತ್ ಸದಸ್ಯ  ಅಬ್ದುಲ್ ಜಬ್ಬಾರ್,  ಕೆಪಿಸಿಸಿ ಜಿಲ್ಲಾ ಘಟಕದ ಎಚ್.ಬಿ. ಮಂಜಪ್ಪ, ಕೆಪಿಸಿಸಿ ಡಿ. ಬಸವರಾಜ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಹರಿಹರ

To Top