ಡಿವಿಜಿ ಸುದ್ದಿ, ಬೆಂಗಳೂರು : ರಾಜ್ಯದ ಕರಾವಳಿ,ದಕ್ಷಿಣ , ಉತ್ತರ ಒಳನಾಡು ಸೇರಿದಂತೆ ಎಲ್ಲಾ ಭಾಗದಲ್ಲಿ ಇನ್ನು ಮೂರು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂದಿನಿಂದ ರಿಂದ 20 ವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಕರಾವಳಿ ಭಾಗಗಳಲ್ಲಿ ಐದು ದಿನಗಳವರೆಗೆ ಹೆಚ್ಚು ಮಳೆಯಾಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ನಿರೀಕ್ಷೆ ಇರುವುದರಿಂದ ಮೂರು ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.
ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ವಿಜಯಪುರ, ಕಲಬುರ್ಗಿ, ಹಾವೇರಿ, ಬೀದರ್, ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ಶುಕ್ರವಾರ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.
ಆಗುಂಬೆಯಲ್ಲಿ ಗರಿಷ್ಠ 14 ಸೆಂ.ಮೀ ಮಳೆಯಾಗಿದೆ. ಕಲಬುರ್ಗಿ 11, ಕಾರ್ಕಳ 10, ಉಡುಪಿ 9, ಕುಂದಾಪುರ, ಭಾಗಮಂಡಲ 8, ಮಂಗಳೂರು, ಮಡಿಕೇರಿ 7, ಬೆಳ್ತಂಗಡಿ, ಮೂಡುಬಿದಿರೆ, ಭಟ್ಕಳ, ರಾಯಚೂರು, ಆಳಂದ, ಹೊಸನಗರ 6, ಮುದ್ದೇಬಿಹಾಳ, ತೀರ್ಥಹಳ್ಳಿ 5, ವಿಜಯಪುರ, ಚಿಂಚೋಳಿ 4, ಸೊರಬ, ವಿರಾಜಪೇಟೆ 3, ನಿಪ್ಪಾಣಿ, ಚಿಕ್ಕೋಡಿ, ಚಿಂತಾಮಣಿ, ಸಿಂಧನೂರು 2, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಮಾಲೂರು, ಪಾಂಡವಪುರ, ಅಥಣಿ, ಬೈಲಹೊಂಗಲ, ಹಾಸನ, ಕನಕಪುರ ಹಾಗೂ ಹುಣಸೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.



