ದಾವಣಗೆರೆ: ದಾವಣಗೆರೆ ವಿಭಾಗದ ಎಲ್ಲಾ ಪ್ರಧಾನ ಅಂಚೆ ಕಚೇರಿಗಳಲ್ಲಿ ಜೂನ್ 23 ರಿಂದ ಹೊಸ ತಂತ್ರಾಂಶ ಅಳವಡಿಕೆ ಮಾಡಬೇಕಾಗಿರುವುದರಿಂದ ಜೂನ್ 14 ,16ರ ಬದಲು ಜೂನ್ 20 ಮತ್ತು 21ರಂದು ಬಂದ್ ಇರಲಿದೆ.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಉಪಶಾಖಾ ಅಂಚೆ ಕಚೇರಿಗಳಲ್ಲಿ ಯಾವುದೇ ರೀತಿಯ ವ್ಯವಹಾರ, ವಹಿವಾಟು ಇರುವುದಿಲ್ಲ. ಈ ಮುಂಚೆ ತಿಳಿಸಿದಂತೆ ಜೂನ್ 14 ಮತ್ತು 16 ರಂದು ಎಂದಿನಂತೆ ಅಂಚೆ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ದಾವಣಗೆರೆ ವಿಭಾಗದ ಅಂಚೆ ಅಧೀಕ್ಷರು ತಿಳಿಸಿದ್ದಾರೆ.



