Connect with us

Dvg Suddi-Kannada News

ಇರಾನ್ ಸೇನಾ ಮುಖ್ಯಸ್ಥ ಸುಲೇಮಾನಿ ಮೇಲಿನ ದಾಳಿ ಸಮರ್ಥಿಸಿಕೊಂಡ ಟ್ರಂಪ್

ಅಂತರಾಷ್ಟ್ರೀಯ ಸುದ್ದಿ

ಇರಾನ್ ಸೇನಾ ಮುಖ್ಯಸ್ಥ ಸುಲೇಮಾನಿ ಮೇಲಿನ ದಾಳಿ ಸಮರ್ಥಿಸಿಕೊಂಡ ಟ್ರಂಪ್

ಲಾಸ್ ಏಂಜಲೀಸ್:  ಏರ್ ಸ್ಟ್ರೈಕ್ ನಡೆಸಿ ಇರಾನ್ ಸೇನಾ ಮುಖ್ಯಸ್ಥ ಖಾಸೀಂ ಸುಲೇಮಾನಿಯನ್ನು  ಕೊಂದಿದ್ದೇವೆ. ಸುಲೇಮಾನಿ ಲಂಡನ್, ನವದೆಹಲಿಯಲ್ಲಿ ಸೇರಿದಂತೆ ಅನೇಕ ಕಡೆ  ಭಯೋತ್ಪಾದಕ  ದಾಳಿಗೆ ನೆರವು ನೀಡಿದ್ದ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂದು ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಟ್ರಂಪ್ ಹೇಳಿದ ಪ್ರಮುಖಾಂಶಗಳು

ಸುಲೇಮಾನಿ ಅನೇಕ ಭಯೋತ್ಪಾದಕ ದಾಳಿಗೆ ನೆರವು ನೀಡಿದ್ದ

ಲಂಡನ್ , ದೆಹಲಿ ಸೇರಿದಂತೆ ಅನೇಕ ಕಡೆ ಭಯೋತ್ಪಾದಕ ದಾಳಿ ನೆರವು

ಇತ್ತೀಚೆಗೆ ಇರಾಕ್ ಮೂಲಕ ಅಮೆರಿಕಾ ಸೇನಿಕರ ದಾಳಿ ಮಾಡಿದ್ದ

ಈ ದಾಳಿಯಿಂದ ನಾವು ಯುದ್ದಕ್ಕೆ ದಾರಿ ಮಾಡಿಕೊಡುವುದಿಲ್ಲ

ಸುಲೇಮಾನ್ ದಾಳಿ ಮೂಲಕ ಇರಾಕ್ ಗೆ ಎಚ್ಚರಿಕೆ ಕೊಟ್ಟ ಅಮೆರಿಕಾ

ಅಮೆರಿಕ ಸೇನೆ ಶುಕ್ರವಾರ  ವೈಮಾನಿಕ ದಾಳಿಯಲ್ಲಿ ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿ ಬಿಗಿ ಭದ್ರತೆಯಲ್ಲಿದ್ದ  ಸುಲೈಮಾನಿಯನ್ನು ಹತ್ಯೆ ಮಾಡಿತ್ತು. ಇರಾಕ್‍ನ ಮಿಲಿಟರಿ ಕಮಾಂಡರ್ ಅಬು ಮಹ್ದಿ ಅಲ್ ಮುಹಾಂದಿಸ್ ಜೊತೆ ಇರಾಕ್ ರಾಜಧಾನಿ ಬಾಗ್ದಾದ್‍ನ ಏರ್‍ಪೋರ್ಟಿಗೆ ಸುಲೇಮಾನಿ ಕಾರಿನಲ್ಲಿ ತೆರಳುತ್ತಿದ್ದರು. ಈ  ಕಾರನ್ನೇ ಟಾರ್ಗೆಟ್ ಮಾಡಿದ ಅಮೆರಿಕ ಸೇನೆ ಡ್ರೋನ್ ಮೂಲಕ ಕ್ಷಿಪಣಿ ಉಡಾಯಿಸಿ ಏರ್ ಸ್ಟ್ರೈಕ್ ಮಾಡಿತ್ತು. ಈ ಭೀಕರ ದಾಳಿಯಿಗೆ ಕಾರು ಛಿದ್ರವಾಗಿತ್ತು.

ಈ ಘಟನೆಯ ಕುರಿತು ಫ್ಲೋರಿಡಾದಲ್ಲಿ ಮಾತನಾಡಿದ್ದ ಟ್ರಂಪ್, ಅಮೆರಿಕವನ್ನು ಟಾರ್ಗೆಟ್ ಮಾಡಿ ಇರಾಕ್ ನಡೆಸಿದ ದಾಳಿಗಳಲ್ಲಿ ಅಮೆರಿಕಾ ಸೈನಿಕರು ಸಾವನ್ನಪ್ಪಿದ್ದರು. ಅಲ್ಲದೇ ರಾಕೆಟ್ ದಾಳಿಯಲ್ಲಿ ನಾಲ್ವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು. ಬಾಗ್ದಾದ್‍ನ ನಮ್ಮ ವಿದೇಶಾಂಗ ಕಚೇರಿಯ ಮೇಲೆ ಸುಲೇಮಾನಿ ನಿರ್ದೇಶನದಂತೆ ದಾಳಿ ನಡೆಸಲಾಗಿತ್ತು ಎಂದು ಹೇಳಿದ್ದಾರೆ.

ಸುಲೇಮಾನಿ ಕ್ರೂರ ದಾಳಿಗೆ ಅಮಾಯಕ ಜನರು ಸಾವನ್ನಪ್ಪಿದ್ದಾರೆ. ಲಂಡನ್ ಸೇರಿದಂತೆ ಭಾರತದ ದೆಹಲಿವರೆಗೂ ಭಯೋತ್ಪಾದಕ ದಾಳಿಗಳಿಗೆ ಸುಲೇಮಾನಿ ನೆರವು ನೀಡಿದ್ದಾನೆ. ಸುಲೇಮಾನಿ ಭಯೋತ್ಪಾದನೆಯ ಆಳ್ವಿಕೆ ಅಂತ್ಯವಾಗಿದೆ. ಕಳೆದ 20 ವರ್ಷದಗಳಿಂದ ಸುಲೇಮಾನಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಭಯೋತ್ಪಾದನ ದಾಳಿಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಅಮೆರಿಕ ಸೇನಾಪಡೆ ಇಂತಹ ದಾಳಿ ಬಹಳ ಹಿಂದೆಯೇ ನಡೆಸಬೇಕಿತ್ತು. ಇದರಿಂದ ಸಾವಿರಾರು ಜನರ ಜೀವವನ್ನು ರಕ್ಷಿಸಬಹುದಿತ್ತು ಎಂದಿದ್ದಾರೆ.

ಸುಲೇಮಾನಿ ಸಾವಿರಕ್ಕೂ ಹೆಚ್ಚು ಮಂದಿಯನ್ನು ಕ್ರೂರವಾಗಿ ಹಿಂಸಿಸಿ ಕೊಲೆ ಮಾಡಿದ್ದಾನೆ. ಆದರೆ, ಈತನ ಹತ್ಯೆಯೂ ಯುದ್ಧಕ್ಕೆ ದಾರಿ ಮಾಡಿಕೊಡುವುದಿಲ್ಲ. ಯುದ್ಧವನ್ನು ನಿಲ್ಲಿಸಲು ನಾವು ದಾಳಿಯನ್ನು ನಡೆಸಿದ್ದೇವೆ. ಇರಾನಿನ ಜನರ ಬಗ್ಗೆ ನನಗೆ ಅಪಾರ ಗೌರವಿದ್ದು, ಅವರು ವೈಭವದ ಪರಂಪರೆ  ಹೊಂದಿದ್ದಾರೆ. ಅಮೆರಿಕ ಅಲ್ಲಿನ ಆಡಳಿತ ಬದಲಾವಣೆಯನ್ನು ಬಯಸುವುದಿಲ್ಲ ಎಂದು  ಟ್ರಂಪ್ ತಿಳಿಸಿದ್ದಾರೆ.

ಅಮೆರಿಕದ ದಾಳಿಯನ್ನು ಇರಾನ್ ಉಗ್ರವಾಗಿ ಖಂಡಿಸಿ, ನಿಮ್ಮ ದುಸ್ಸಾಹಸಗಳಿಗೆ ತಕ್ಕ ಬೆಲೆ ತೆರಲಿದ್ದೀರಿ. ಕಟು ಪ್ರತೀಕಾರ ನಿಮಗೆ ಕಾದಿದೆ ಎಂದು ಎಚ್ಚರಿಕೆಯನ್ನು ರವಾನಿಸಿದೆ. ಇದರ ಬೆನ್ನಲ್ಲೇ  ಇರಾಕ್‍ನಲ್ಲಿ ಪ್ರಕ್ಷುಬ್ಧ ವಾತಾವರಣದಿಂದ ಅಮೆರಿಕ ತನ್ನ ಪ್ರಜೆಗಳಿಗೆ ವಾಪಸ್ ಬರುವಂತೆ ಸೂಚನೆ ನೀಡಿದೆ. ಇರಾಕ್‍ನಲ್ಲಿರುವ ತನ್ನ ಸೇನಾಪಡೆಗಳಿಗೂ ಎಚ್ಚರಿಕೆ ವಹಿಸಲು ಸೂಚಿಸಿದೆ.

ಈ ಎರಡು ರಾಷ್ಟ್ರಗಳ ಸಂಘರ್ಷ ಜಾಗತೀಕ ಮಟ್ಟದ ಮೇಲೆ ಬೀರುವ ಸಾಧ್ಯತೆ ಹೆಚ್ಚಿದೆ. ಇರಾನ್-ಇರಾಕ್‍ನಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುವಾದಲ್ಲಿ ಭಾರತದಲ್ಲೂ ತೈಲ ದರ ಮತ್ತಷ್ಟು ದುಬಾರಿಯಾಗುವ ಸಾಧ್ಯತೆಯಿದೆ.

2012ರಲ್ಲಿ ನವದೆಹಲಿಯ ಪ್ರಧಾನ ಮಂತ್ರಿಗಳ ನಿವಾಸ ಬಳಿ ಕಾರಿನಲ್ಲಿ ಸ್ಫೋಟ ನಡೆಸಲಾಗಿತ್ತು. ಈ ಕಾರು ಇಸ್ರೇಲ್ ರಾಯಭಾರಿ ಕಚೇರಿಗೆ ಸೇರಿದಾಗಿತ್ತು. ಘಟನೆಯಲ್ಲಿ ಇಸ್ರೇಲ್‍ನ ರಾಯಭಾರಿ ಕಚೇರಿಯ ಅಧಿಕಾರಿಯ ಪತ್ನಿ ಸೇರಿದಂತೆ ಇಬ್ಬರು ಭಾರತೀಯರು ಗಾಯಗೊಂಡಿದ್ದರು. ಇಸ್ರೇಲ್ ಅಧಿಕಾರಿಗಳಿದ್ದ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ ಮೇಟಾರು ಸೈಕಲ್‍ನಲ್ಲಿ ಸ್ಫೋಟಕ ಇರಿಸಿ ದಾಳಿ ನಡೆಸಲಾಗಿತ್ತು. ಈ ವೇಳೆ ಭಾರತದ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದ್ದ ಅಮೆರಿಕ ದಾಳಿಯ ಹಿಂದೆ ಇರಾನ್ ಪಾತ್ರವಿರುವ ಬಗ್ಗೆ ತಿಳಿಸಿತ್ತು. ದೆಹಲಿಯ ದಾಳಿಯ ದಿನವೇ ಜಾರ್ಜಿಯಾದಲ್ಲಿ ನಡೆದ ದಾಳಿಯಲ್ಲಿ ಇಸ್ರೇಲ್ ಅಧಿಕಾರಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಮರುದಿನ ಥೈಲ್ಯಾಂಡ್‍ನಲ್ಲಿ ನಡೆದ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದರು. ಈ ವೇಳೆ ಪೊಲೀಸರು ಇಬ್ಬರು ಇರಾನ್ ಪ್ರಜೆಗಳನ್ನು ಬಂಧಿಸಿತ್ತು. 2013ರಲ್ಲಿ ಇಬ್ಬರಿಗೂ ಶಿಕ್ಷೆ ವಿಧಿಸಲಾಗಿತ್ತು.

 

Click to comment

Leave a Reply

Your email address will not be published. Required fields are marked *

More in ಅಂತರಾಷ್ಟ್ರೀಯ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top