Connect with us

Dvgsuddi Kannada | online news portal | Kannada news online

ದೇಶದ 130 ಕೋಟಿ ಜನರು ಹಿಂದೂಗಳೇ: ಮೋಹನ್ ಭಾಗವತ್

ರಾಷ್ಟ್ರ ಸುದ್ದಿ

ದೇಶದ 130 ಕೋಟಿ ಜನರು ಹಿಂದೂಗಳೇ: ಮೋಹನ್ ಭಾಗವತ್

ಹೈದರಾಬಾದ್: ಸಂಘ ಪರಿವಾರಕ್ಕೆ ದೇಶದಲ್ಲಿ ವಾಸಿಸುವ 130 ಕೋಟಿ ಜನರೂ ಹಿಂದೂಗಳೇ ಎಂದು ಆರ್‌ಎಸ್ಎಸ್  ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಹೈದರಾಬಾದಿನಲ್ಲಿ ನಡೆಯುತ್ತಿರುವ ಆರ್‌ಎಸ್ಎಸ್ ನ ವಿಜಯ್ ಸಂಕಲ್ಪ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಯಾವುದೇ ಭಾಷೆ, ಧರ್ಮ ಆಚರಿಸಲಿ. ದೇಶದ  130. ಕೋಟಿ ಜನರು ಹಿಂದೂಗಳೇ.  ಅವರು ಹಿಂದೂ ಧರ್ಮ ಆಚರಿಸದಿದ್ದರೂ ಅವರೆಲ್ಲಾ ಸಂಘದ ಪಾಲಿಗೆ ಹಿಂದೂಗಳೇ ಎಂದರು.

ಭಾರತದ  ಸಾಂಪ್ರದಾಯಿಕತೆಯಲ್ಲಿ ಹಿಂದುತ್ವ ಅಡಕವಾಗಿದೆ. ಭಾರತದ ಮೋಕ್ಷ ರಾಜಕೀಯ ಮತ್ತು ರಾಜಕೀಯ ನಾಯಕರಿಂದ ಸಾಧ್ಯವಿಲ್ಲ. ಆದರೆ, ಹಿಂದುತ್ವದಿಂದ ಅದು ಸಾಧ್ಯವಿದೆ. ನಾನು ಹಿಂದೂ ಸಮಾಜ. ಭಾರತ ನನ್ನ ತಾಯಿನಾಡು ಎಂದು ಪರಿಗಣಿಸಿದಾಗ, ನೆಲ, ಜಲ, ಪಶು-ಪಕ್ಷಿ ಪ್ರೀತಿಸುವ ಜನರು ಯಾವುದೇ ಧರ್ಮ, ಭಾಷೆಯನ್ನು ಅನುಸರಿಸಲಿ ಅವರು ಭಾರತಾಂಭೆಯ ಮಕ್ಕಳು ಎಂದು ತಿಳಿಸಿದರು.

ದೇಶದಲ್ಲಿ ರಾಜಕೀಯದಿಂದ ಎಂದಿಗೂ ಬದಲಾವಣೆಯನ್ನು ತರಲು ಸಾಧ್ಯವಿಲ್ಲ. ಆದರೆ ದೇಶದ ಜನರಿಂದ ಬದಲಾವಣೆಯನ್ನು ತರಬಹುದು. ಆರ್‌ಎಸ್ಎಸ್ ಎಲ್ಲರ ಅಭಿವೃದ್ಧಿಯನ್ನು ಬಯಸುತ್ತದೆ. ಜನರನ್ನು ಒಂದುಗೂಡಿಸುವ ಕೆಲಸವನ್ನು ಸಂಘ ಮಾಡುತ್ತದೆ. ಕಾರ್ಯಕರ್ತರು ಪ್ರತಿದಿನ ಒಂದು ಗಂಟೆಯನ್ನು ಧರ್ಮ ವಿಜಯಕ್ಕಾಗಿ ಮೀಸಲಿಡಬೇಕು. ಕಾರ್ಯಕರ್ತರು ಮನೆ ಮನೆಗೆ ತೆರಳಿ ಸಂಘದ ಉದ್ದೇಶವನ್ನು ತಿಳಿಸಬೇಕು ಎಂದು ಹೇಳಿದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top