Connect with us

Dvg Suddi-Kannada News

ಅಕ್ಟೋಬರ್ 23 ರಂದು ಕೆಜಿಎಫ್-2 ರಿಲೀಸ್;  ದಸರಾಗೆ ರಾಕಿಭಾಯ್ ಘರ್ಜನೆ

ಪ್ರಮುಖ ಸುದ್ದಿ

ಅಕ್ಟೋಬರ್ 23 ರಂದು ಕೆಜಿಎಫ್-2 ರಿಲೀಸ್;  ದಸರಾಗೆ ರಾಕಿಭಾಯ್ ಘರ್ಜನೆ

ಡಿವಿಜಿ ಸುದ್ದಿ, ಬೆಂಗಳೂರು:  ಇಡೀ ಭಾರತೀಯ ಚಿತ್ರರಂಗ ಕಾತುರದಿಂದ ಕಾಯುತ್ತಿರುವ ಕೆಜಿಎಫ್-2 ಚಿತ್ರದ ಬಿಡುಗಡೆಯ ದಿನಾಂಕ ರಿವೀಲ್ ಆಗಿದ್ದು, ಅಕ್ಟೋಬರ್ 23 ರಂದು ಕೆಜಿಎಫ್-2 ರಿಲೀಸ್ ಆಗಲಿದೆ.

2018 ರಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್-1 ದೇಶದಾದ್ಯಂತ ಸಖತ್  ಹಿಟ್ ಆಗಿತ್ತು. ಈ ಕಾರಣಕ್ಕೆ ಕೆಜಿಎಫ್-2 ಚಿತ್ರಕ್ಕೆ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಇದೀಗ  ಅಕ್ಟೋಬರ್ 23ರಂದು ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಲಿದೆ.

ಸಿನಿಮಾ ರಿಲೀಸ್ ವಿಚಾರವಾಗಿ ವಿಡಿಯೋವೊಂದನ್ನು ಟ್ವೀಟ್ ಮಾಡುವ ಮೂಲಕ ಯಶ್ ಅವರು ‘ಮೇ ಐ ಕಮ್ ಇನ್’ ಎಂದಿದ್ದಾರೆ.  ಅಕ್ಟೋಬರ್ ತಿಂಗಳ ದಸರಾ ಹಬ್ಬದಂದು ರಾಕಿಭಾಯ್ ಗನ್ ಹಿಡಿದು ಘರ್ಜಿಸಲು ಸಿದ್ಧವಾಗಿದ್ದಾನೆ.

ಎಂದು ಚಿತ್ರತಂಡ ಹೇಳಿದೆ. ಅಕ್ಟೋಬರ್ 23ರಂದು ತೆಲುಗು ನಟ ಪ್ರಭಾಸ್ ಹುಟ್ಟುಹಬ್ಬವಿದ್ದು, ಈ ದಿನವೇ ಕೆಜಿಎಫ್-2 ಚಿತ್ರ ಬಿಡುಗಡೆಯಾಗುತ್ತಿರುವುದಕ್ಕೆ ಪ್ರಭಾಸ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಕೆಜಿಎಫ್-1 ಚಿತ್ರ 2018 ಡಿಸೆಂಬರ್ 21ರಂದು ದೇಶ ವಿದೇಶದಲ್ಲಿ ಐದು ಭಾಷೆಗಳಲ್ಲಿ ರಿಲೀಸ್ ಅಗಿತ್ತು. ಈ ಚಿತ್ರ ಕನ್ನಡ ಸೇರಿದಂತೆ ಎಲ್ಲಾ  ಭಾಷೆಯಲ್ಲೂ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಇದರೊಂದಿಗೆ ಯಶ್ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಅಭಿಮಾನಿಗಳನ್ನು ಹುಟ್ಟು ಹಾಕಿದ್ದಾರೆ. ಇದೀಗ ಕೆಜಿಎಫ್-2 ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

 

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top