Connect with us

Dvg Suddi-Kannada News

ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಚಾಕುವಿನಿಂದ ಇರಿದು ಕೊಲೆ

ಕ್ರೈಂ ಸುದ್ದಿ

ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಚಾಕುವಿನಿಂದ ಇರಿದು ಕೊಲೆ

ಡಿವಿಜಿ ಸುದ್ದಿ, ಧಾರವಾಡ: ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಯುವಕನಿಗೆ ಧರ್ಮದೇಟು ನೀಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಂತ್ರಸ್ಥೆಯ ಸಂಬಂಧಿ  ಚಾಕುವಿನಿಂದ ಇರಿದ ಪರಿಣಾಮ

ಸಾವನ್ನಪ್ಪಿರುವ  ಘಟನೆ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆ ಫಕ್ರುದ್ದೀನ್ ನದಾಫ್ (56) ಎಂಬಾತ ನವಲಗುಂದ ಪಟ್ಟಣದ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದನು. ಅತ್ಯಾಚಾರಕ್ಕೆ ಯತ್ನಿಸಿದ್ದನ್ನು ನೋಡಿದ್ದ ಜನರು ಫಕ್ರುದ್ದೀನ್ ನನ್ನು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದರು.

ಥಳಿತಕ್ಕೊಳಗಾಗಿ ಗಾಯಗೊಂಡಿದ್ದ ಫಕ್ರುದ್ದೀನ್ ನನ್ನು ನವಲಗುಂದ ತಾಲೂಕು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಹೀಗೆ ಆಸ್ಪತ್ರೆಯ ಬೆಡ್ ನಲ್ಲಿ ಮಲಗಿದ್ದಾಗ ಅತ್ಯಾಚಾರ ಪ್ರಕರಣದ ಬಾಲಕಿ ಸಂಬಂಧಿ ಭಾನುವಾರ ಫಕ್ರುದ್ದೀನ್ ಮೇಲೆ ಚಾಕುವಿನಿಂದ ಇರಿದು ಮತ್ತೆ ಗಂಭೀರ ಗಾಯಗೊಳಿಸಿದ್ದನು.

ಕೂಡಲೇ ಫಕ್ರುದ್ದೀನ್ ನನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಆತ ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ ಮೃತಪಟ್ಟಿದ್ದಾನೆ. ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸಂತೋಪ್ ಹುಲಗಪ್ಪ ವಡ್ಡರಗೆಯನ್ನು ನವಲಗುಂದ ಪೊಲೀಸರು ಮೊದಲೇ ವಶಕ್ಕೆ ಪಡೆದಿದ್ದರು. ಸಂತೋಷ್ ಮೇಲೆ ಕೊಲೆ ಪ್ರಕರಣ ದಾಖಲಾದರೆ, ಇತ್ತ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿ ಫಕ್ರುದ್ದೀನ್ ಕೊಲೆಯಾಗಿದ್ದಾನೆ.

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top