ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕ ಎಂ. ಎಸ್. ಶಿವಣ್ಣ ಇಂದು ಬೆಳಿಗ್ಗೆ ದೈವಾಧೀನರಾಗಿದ್ದಾರೆ.
ಶೈಕ್ಷಣಿಕ ರಂಗದಲ್ಲಿ ಸದಾ ಮುಂಚೂಣಿಯಲ್ಲಿದ್ದ , ಸಿದ್ದಗಂಗಾ ಶಿವಣ್ಣ ಎಂದೇ ಜನಪ್ರೀತಿ ಗಳಿಸಿದ್ದ ಎಂ. ಎಸ್. ಶಿವಣ್ಣ ಅವರು, ಇಂದು ಮುಂಜಾನೆ ನಿಧನರಾಗಿದ್ದಾರೆ. ಶಿಕ್ಷಣ, ಪತ್ರಿಕೋದ್ಯಮ, ಸಾಮಾಜಿಕ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ಶಿವಣ್ಣ ಅವರು, ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆ ಸ್ಥಾಪಿಸಿ ಲಕ್ಷಾಂತರ ಮಕ್ಕಳಿಗೆ ವಿದ್ಯಾ ದಾನ ಮಾಡಿದ ಹಿರಿಮೆ ಅವರಿಗೆ ಸಲ್ಲುತ್ತದೆ.

ದಾವಣಗೆರೆ ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಶಿವಣ್ಣ ಅವರು, ಪತ್ನಿ ಮುಖ್ಯೋಪಾಧ್ಯಾಯಿನಿ ಜಸ್ಟಿನ್ ಡಿಸೋಜ, ಪುತ್ರರಾದ ಬಿ.ಎಸ್. ಹೇಮಂತ್, ಡಾ. ಪ್ರಶಾಂತ್ ಸೇರಿದಂತೆ ಅನೇಕ ಬಂಧು ಬಳಗವನ್ನು ಅಗಲಿದ್ದಾರೆ.

ಸಂತಾಪ
ವಿದ್ಯಾನಗರಿ ದಾವಣಗೆರೆಯಲ್ಲಿ ಗುಣಮಟ್ಟ ಶಿಕ್ಷಣದ ಕನಸನ್ನು ಸಾಕಾರಗೊಳಿಸಿದಂತಹ ಅನೇಕ ಪ್ರಮುಖರಲ್ಲಿ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕ ಎಂ.ಎಸ್.ಶಿವಣ್ಣ ಅವರು ಕೂಡ ಒಬ್ಬರು. ಅವರು ಇಂದು ಬೆಳಗ್ಗೆ ದೈವಾಧೀನರಾಗಿದ್ದು ಅವರ ಆತ್ಮಕ್ಕೆ ಶಾಂತಿ ಕೋರಲಾಗಿದೆ.
-ಕನ್ನಡ ಸಾಹಿತ್ಯ ಪರಿಷತ್ , ದಾವಣಗೆರೆ ಜಿಲ್ಲಾ ಘಟಕ

ಶಿಕ್ಷಣ ಕ್ಷೇತ್ರದ ಭೀಷ್ಮ
ದಾವಣಗೆರೆಯ ಶ್ರೀಸಿದ್ಧಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕ ಎಂ. ಎಸ್. ಶಿವಣ್ಣ ಇಂದು ಬೆಳಿಗ್ಗೆ ದೈವಾಧೀನರಾದರು.ಕಲಾಕುಂಚ ಸ್ಥಾಪನೆಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ಕೊಡುವುದರ ಜತೆಯಲ್ಲಿ ಸುಮಾರು ಒಂದು ದಶಕಗಳ ಕಾಲ ಕನ್ನಡ ಮಕ್ಕಳ ಕಾರ್ಯಕ್ರಮಕ್ಕೆ ಮತ್ತು ಯಕ್ಷಗಾನ ಪ್ರದರ್ಶನಕ್ಕೆ ಸ್ಥಳಾವಕಾಶದೊಂದಿಗೆ ಪೂರ್ಣ ಪ್ರಮಾಣದಲ್ಲಿ ಸಹಕಾರ, ಸಹಯೋಗ ನೀಡಿ ಸಂಸ್ಥೆಗಳ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಿದ ದಾವಣಗೆರೆ ಶಿಕ್ಷಣ ಕ್ಷೇತ್ರದ ಭೀಷ್ಮ ಶಿವಣ್ಣ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ.
-ಸಾಲಿಗ್ರಾಮ ಗಣೇಶ್ ಶೆಣೈ, ಸಂಸ್ಥಾಪಕರು ಕಲಾಕುಂಚ, ಯಕ್ಷರಂಗ, ದಾವಣಗೆರೆ

ಶಿಕ್ಷಣ ತಜ್ಞ
ಶಿವಣ್ಣನವರು ಶಿಕ್ಷಣ ತಜ್ಞರಾಗಿ ಸೇವೆ ಸಲ್ಲಿಸಿದ್ದು, ಹೋರಾಟಗಾರರು ಆಗಿದ್ದರು. ಅವರಿಗೆ ರಂಭಾಪುರಿ ಪೀಠ `ಶಿಕ್ಷಣ ಶಿಕ್ಷಣ ತಜ್ಞ’, ದಾವಣಗೆರೆಯ ಅನ್ನದಾನೀಶ್ವರ ಮಠದ `ಶಿಕ್ಷಣ ಸಿರಿ’ ಎಂಬ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದ್ದರು. ಶಿವಣ್ಣನವರು ಪ್ರಜಾಭಿಮತ , ಸೌರಭ ಪತ್ರಿಕೆಯನ್ನು ನಡೆಸಿದ್ದರು.
– ವೀರಪ್ಪ ಎಂ ಭಾವಿ , ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ , ಇ.ಎಂ. ಮಂಜುನಾಥ ಕಾರ್ಯದರ್ಶಿ, ಮಂಜಪ್ಪ ಮಾಗನೂರು ಖಜಾಂಚಿ



