Connect with us

Dvg Suddi-Kannada News

ಕೊರೊನಾ ವೈರಸ್ ಸಂಕಷ್ಟ:  ದಾವಣಗೆರೆಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಟಾಸ್ಕ್ ಫೋರ್ಸ್ ಸಭೆ

ಪ್ರಮುಖ ಸುದ್ದಿ

ಕೊರೊನಾ ವೈರಸ್ ಸಂಕಷ್ಟ:  ದಾವಣಗೆರೆಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಟಾಸ್ಕ್ ಫೋರ್ಸ್ ಸಭೆ

ಡಿವಿಜಿ ಸುದ್ದಿ, ದಾವಣಗೆರೆ: ಕಾರೋನ ವೈರಸ್ ನಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ಜನತೆಗೆ ಅಗತ್ಯ ಸೌಲಭ್ಯ ಹಾಗೂ ವೈದ್ಯಕೀಯ ನೆರವು ನೀಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು  ಬೆಂಗಳೂರು ವಿಭಾಗ ಮಟ್ಟದ ಕಾರ್ಯಪಡೆ ( ಟಾಸ್ಕ್ ಫೋರ್ಸ್) ರಚನೆ ಮಾಡಿದ್ದು, ಈ ಸಮಿತಿಯ ಸಭೆಯು ಇಂದು  ದಾವಣಗೆರರಯಲ್ಲಿ ನಡೆಯಲಿದೆ.

ನಗರದ ಶಾಮನೂರು ರಸ್ತೆಯಲ್ಲಿರುವ ಬಾಪೂಜಿ ಅತಿಥಿಗೃಹದಲ್ಲಿ ಸಂಜೆ 5 ಗಂಟೆಗೆ ಸಮಿತಿ ಅಧ್ಯಕ್ಷ ಮಾಜಿ ಸಚಿವ ಶ್ರೀ ಎಚ್. ಎಂ ರೇವಣ್ಣ ಅವರ  ನೇತೃತ್ವದಲ್ಲಿ ನಡೆಯಲಿದ್ದು, ಸಮಿತಿ ಸದಸ್ಯರಾದ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ,  ಎಸ್.ಎಸ್. ಮಲ್ಲಿಕಾರ್ಜುನ್, ಬಿ.ಎನ್. ಚಂದ್ರಪ್ಪ ಎಸ್. ಪಿ. ಮುದ್ದುಹನುಮೇಗೌಡ, ವಿ. ಮುನಿಯಪ್ಪ, ಶ್ರೀಮತಿ ರೂಪ ಶಶಿಧರ್ ,  ಶಾಸಕ ಎಸ್. ರಾಮಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್. ಬಿ ಮಂಜಪ್ಪ ಜಿಲ್ಲೆಯ ಮಾಜಿ ಶಾಸಕರು ಭಾಗಿಯಾಗಲಿದ್ದಾರೆ ಎಂದು  ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ ತಿಳಿಸಿದರು.

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top