Connect with us

Dvg Suddi-Kannada News

ದಾವಣಗೆರೆಯಲ್ಲಿ ಪೋದರ್ ಇಂಟರ್ ನ್ಯಾಷನಲ್ ಸಿಬಿಎಸ್ ಇ ಸ್ಕೂಲ್ ಆರಂಭ

ದಾವಣಗೆರೆ

ದಾವಣಗೆರೆಯಲ್ಲಿ ಪೋದರ್ ಇಂಟರ್ ನ್ಯಾಷನಲ್ ಸಿಬಿಎಸ್ ಇ ಸ್ಕೂಲ್ ಆರಂಭ

ಡಿವಿಜಿ ಸುದ್ದಿ, ದಾವಣಗೆರೆ: ಪೋದರ್ ಎಜುಕೇಷನ್ ನೆಟ್ ವರ್ಕ್ ನ ಪೋದರ್ ಇಂಟರ್ ನ್ಯಾಷನಲ್ ಸ್ಕೂಲ್ ಮುಂಬರುವ 2020-21ನೇ ಸಾಲಿನ ಶೈಕ್ಷಣಿಕ ವರ್ಷದಿಂದ ದಾವಣಗೆರೆಯಲ್ಲಿ ಸಿಬಿಎಸ್ ಇ  ಸ್ಕೂಲ್ ಕಾರ್ಯಾರಂಭಗೊಳ್ಳಲಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೋದರ್ ಇಂಟರ್ ನ್ಯಾಷನಲ್ ಸ್ಕೂಲ್ ಮಾರ್ಕೆಟಿಂಗ್ ಜನರಲ್ ಮ್ಯಾನೇಜರ್ ವಿಷಾಲ್ ಷಾ, ಪೋದರ್ ಸಮೂಹ ಸಂಸ್ಥೆ 1927 ರಲ್ಲಿ ಪ್ರಾರಂಭವಾಗಿದ್ದು, ಗುಣಮಟ್ಟದ ಶಿಕ್ಷಣ ನೀಡಿದ ಹೆಗ್ಗಳಿಕೆ ಪಡೆದುಕೊಂಡಿದೆ.  ಕಳೆದ 92 ವರ್ಷದಲ್ಲಿ ದೇಶದಾದ್ಯಂತ 124 ಸ್ಕೂಲ್ ಗಳನ್ನು ಪ್ರಾರಂಭಿಸಿರುವ ಸಂಸ್ಥೆಯಲ್ಲಿ ಪ್ರಸ್ತುತ 1.55 ಲಕ್ಷ ವಿದ್ಯಾರ್ಥಿಗಳು, 7,600 ಸಿಬ್ಬಂದಿಗಳನ್ನು ಒಳಗೊಂಡಿದೆ. ದಾವಣಗೆರೆಯಲ್ಲಿ ನೂತನವಾಗಿ ಸಿಬಿಎಸ್ ಇ ಪೋದರ್ ಇಂಟರ್ ನ್ಯಾಷನಲ್ ಸ್ಕೂಲ್ ತೆರೆಯಲಿದ್ದು, ಮೊದಲ ಹಂತದಲ್ಲಿ ನರ್ಸರಿಯಿಂದ 5 ನೇ ತರಗತಿ ವರೆಗೆ ಮುಂಬರುವ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳಲಿದೆ ಎಂದರು.

ದೇಶದಾದ್ಯಂತ ಪ್ರತಿಯೊಂದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬುದು ನಮ್ಮ ಆಶಯವಾಗಿದೆ. ದಾವಣಗೆರೆಯಲ್ಲಿ ನಮ್ಮ ಇನ್ನೊಂದು ಶಾಖೆ ತೆರೆಯಲು ಉತ್ಸುಕವಾಗಿದ್ದೇವೆ. ಉತ್ತಮ ಗುಣ ಮಟ್ಟದ ಶಿಕ್ಷಕರು,  ಆಧುನಿಕ ಸೌಕರ್ಯ, ಸಾರಿಗೆ ವ್ಯವಸ್ಥೆ,ಮಕ್ಕಳ ಸುರಕ್ಷತೆ ಆದ್ಯತೆ ನೀಡುತ್ತಿದ್ದೇವೆ. ಇದಲ್ಲದೆ ಅತ್ಯುತ್ತಮವಾದ ಡಿಜಿಟಲ್ ಪ್ರೊಜೆಕ್ಟರ್, ವಿಷುವಲೈಸರ್, ಕಂಪ್ಯೂಟರ್, ಲ್ಯಾಬ್  ವ್ಯವಸ್ಥೆ ಇರಲಿದೆ.  ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪೋದರ್ ಇಂಟರ್ ನ್ಯಾಷನಲ್ ಸ್ಕೂಲ್ ಕೂಡ ಒಂದಾಗಿದೆ ಎಂದು ತಿಳಿಸಿದರು

ಕೇವಲ ಪಠ್ಯ ಚಟುವಟಿಕೆಗೆ ಸಿಮೀತವಾಗದೆ, ಪಠ್ಯೇತರ ಚಟುವಟಿಕೆಯಲ್ಲಿಯೂ ಮಕ್ಕಳನ್ನು ಕಾರ್ಯನ್ಮೂಖಗೊಳಿಸುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಸಂಗೀತ, ನೃತ್ಯ, ನಾಟಕ, ಯೋಗ, ಮತ್ತು ಕ್ರೀಡಾ ಕ್ಷೇತ್ರದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳು ಪ್ರೋತ್ಸಾಹ ನೀಡುತ್ತೇವೆ. ಮಕ್ಕಳ ಸುರಕ್ಷತೆ ಆದ್ಯತೆ ನೀಡಲಿದ್ದು, ಸಿಸಿ ಕ್ಯಾಮರಾ, ಮೆಡಿಕಲ್ ಕಿಟ್ ,ಅಗ್ನಿಶಾಮಕ ವ್ಯವಸ್ಥೆಯನ್ನು ಹೊಂಡಿರುವ ಬಸ್ಗಳನ್ನು ವಿನ್ಯಾಸಗೊಳಿಸಿದ್ದೇವೆ ಎಂದರು. ಸಂದರ್ಭದಲ್ಲಿ ಪೋದರ್ ಇಂಟರ್ ನ್ಯೂಷನಲ್ ಸ್ಕೂಲ್ ಆಡಳಿತಾಧಿಕಾರಿ ಸಾವನ್ ಆರ್ ಉಪಸ್ಥಿತರಿದ್ದರು.

 

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top