Connect with us

Dvgsuddi Kannada | online news portal | Kannada news online

ಮಹಿಳೆಯರಿಗೆ ಲಿಂಗ ಅಸಮಾನತೆ, ಪಕ್ಷಪಾತ ತೊಡೆದು ಹಾಕುವ ಸವಾಲಿದೆ: ಜಿ.ಪಂ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ

ಪ್ರಮುಖ ಸುದ್ದಿ

ಮಹಿಳೆಯರಿಗೆ ಲಿಂಗ ಅಸಮಾನತೆ, ಪಕ್ಷಪಾತ ತೊಡೆದು ಹಾಕುವ ಸವಾಲಿದೆ: ಜಿ.ಪಂ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ

ದಾವಣಗೆರೆ:  ಮಹಿಳೆ ಎಲ್ಲ ಕ್ಷೇತ್ರದಲ್ಲಿ  ಸಾಧನೆ ಮಾಡಿದ್ದರೂ ಲಿಂಗ ಅಸಮಾನತೆ ಮತ್ತು ಪಕ್ಷಪಾತ ತೊಡೆದು ಹಾಕುವ ಸವಾಲಿದೆ.  ಇದನ್ನು  ದಿಟ್ಟತನದಿಂದ ಮೆಟ್ಟಿ ನಿಲ್ಲುವ ಶಕ್ತಿ ತೋರ್ಪಡಿಸಬೇಕಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ದಾವಣಗೆರೆ ತಾಲ್ಲೂಕು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ, ಒನ್ ಸ್ಟಾಪ್ ಸೆಂಟರ್(ಸಖಿ), ಮಹಿಳಾ ಶಕ್ತಿ ಕೇಂದ್ರ, ಸ್ತ್ರೀಶಕ್ತಿ ಒಕ್ಕೂಟ, ಮಹಿಳಾ ಸಹಾಯವಾಣಿ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2021 ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೊದಲೆಲ್ಲ ಮಹಿಳೆಯನ್ನು ಮಕ್ಕಳನ್ನು ಹೆರುವ ಯಂತ್ರದಂತೆ, ಆಳಿನಂತೆ ಕೀಳಾಗಿ ಕಾಣಲಾಗುತ್ತಿತ್ತು. ಆದರೆ ಇತ್ತೀಚಿಗೆ ಸ್ವಲ್ಪ ಬದಲಾವಣೆ ಕಾಣುತ್ತಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂತಹ ನಿರ್ಣಯಗಳು, ಸಂವಿಧಾನದ ಮೂಲಕ ಸಮಾನ ಅವಕಾಶ, ಶಿಕ್ಷಣದಿಂದಾಗಿ ಇಂದು ಹೆಣ್ಣು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದರೂ ಅನೇಕ ಸವಾಲುಗಳು ಹಾಗೂ ಜವಾಬ್ದಾರಿಗಳಿವೆ.ಸರ್ಕಾರದ ಮುಖ್ಯ ಅಂಗಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳಲ್ಲಿ ಮಹಿಳೆಯರು ಇಂದು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ  ಎಂದರು.

ಜಿ.ಪಂ ಸಿಇಓ ಡಾ.ವಿಜಯಮಹಾಂತೇಶ ಬಿ.ದಾನಮ್ಮನವರ ಮಾತನಾಡಿ, ಪುರಾತನ ಕಾಲದಿಂದಲೂ ಹೆಣ್ಣಿಗೆ ಪೂಜನೀಯ ಸ್ಥಾನ ನೀಡಲಾಗಿರುವ ಶ್ರೀಮಂತ ದೇಶ ನಮ್ಮದು. 12 ನೇ ಶತಮಾನದಲ್ಲಿ ಮಹಿಳೆಯರ ಸಮಾನತೆಗಾಗಿ ಬಸವಾದಿ ಶರಣದು ಹೋರಾಟ ಮಾಡಿದರು. 20 ನೇ ಶತಮಾನದಲ್ಲೂ ಈ ಹೋರಾಟ ಮುಂದುವರೆದಿದೆ. ನಮ್ಮ ನೆಲದ ಸಂವಿಧಾನದ ಆತ್ಮವಾಗಿರುವ ಮೂಲಭೂತ ಹಕ್ಕುಗಳ ಮೂಲಕ ಎಲ್ಲರಿಗೂ ಸಮಾನತೆ ಒದಗಿಸಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಣ್ಣು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಹಲವಾರು ಕಾಯ್ದೆ, ಕಾನೂನುಗಳನ್ನು ಜಾರಿಗೆ ತಂದಿದೆ. ಹೆಣ್ಣು ಸಾಮಾಜಿಕವಾಗಿ, ಆರ್ಥಿಕವಾಗಿ ರಾಜಕೀಯವಾಗಿ ಸಬಲೀಕರಣ ಹೊಂದಲು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ.

ಮನೆಯಲ್ಲಿ ನಾವು ಹೆಣ್ಣು ಗಂಡನ್ನು ಬೆಳೆಸುವಲ್ಲಿ ತಾರತಮ್ಯ ಧೋರಣೆಯೋ, ಸಾಮಾಜಿಕ ಧೋರಣೆಯೋ ಅಥವಾ ಮಹಿಳೆಯನ್ನು ಕಮರ್ಷಿಯಲ್ ವಸ್ತುವಿನಂತೆ ಬಳಕೆ ಮಾಡುತ್ತಿರುವುದೋ, ಶಾಲೆಗಳಲ್ಲಿ ಮಾನವೀಯ ಮೌಲ್ಯಗಳನ್ನು ಹೇಳುವ ಕಾರ್ಯಕ್ರಮಗಳ ಕೊರತೆಯೋ, ಕಾನೂನಿನ ಕಠಿಣ ನಿಲುವಿಲ್ಲದಿರುವುದೋ ಹೀಗೆ ಕಾರಣ ಹುಡುಕುವ ಕೆಲಸ ಆಗಬೇಕು. ಈ ಬಗ್ಗೆ ಚರ್ಚೆ ಆಗಬೇಕು ಎಂದರು.

ಮಹಿಳಾ ದಿನಾಚರಣೆಯನ್ನು ಕೇವಲ ಶುಭಾಶಯ, ಭಾಷಣಕ್ಕೆ ಸೀಮಿತವಾಗಿಸದೇ ಮಹಿಳಾ ಸಮಾನತೆ ಕುರಿತು ಚರ್ಚೆ, ವಿಮರ್ಶೆಗಳಾಗಬೇಕು. ಹೆಣ್ಣಿನ ಸುರಕ್ಷತೆ ಮತ್ತು ಭದ್ರತೆ ಬಗೆಗಿನ ಧ್ಯೇಯ ಮರು ನವೀಕರಣ ಆಗಬೇಕು. ಕೇವಲ ಕಾನೂನು ಕಾಯ್ದೆ ಮೂಲಕ ಹೆಣ್ಣನ್ನು ಮುಕ್ತಗೊಳಿಸಲು ಸಾಧ್ಯವಿಲ್ಲ. ನಾವೆಲ್ಲರೂ ಮಾನಸಿಕವಾಗಿ, ನೈತಿಕವಾಗಿ ಬದಲಾವಣೆಯಾಗಬೇಕು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ ಇಡೀ ಪ್ರಪಂಚ ನಿಂತಿರುವುದು ಹೆಣ್ಣೆಂಬ ಅಸ್ತಿತ್ವದ ಮೇಲೆ. ಸಮಾಜದಲ್ಲಿ ಸಮತೋಲನ ಇದೆ ಎಂದರೆ ಅದು ಹೆಣ್ಣಿನಿಂದ. ಇಂದು ಮಹಿಳೆ ಯಾವ ಕ್ಷೇತ್ರದಲ್ಲೂ ಹಿಂದಿಲ್ಲ ಎಂದು ಸಾಬೀತು ಪಡಿಸಿದ್ದಾಳೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಬೆಳಗಿನಿಂದ ರಾತ್ರಿವರೆಗೆ ಅವಿರತ ಶ್ರಮಿಸುವ ಈ ಹೆಣ್ಣು ಜೀವಗಳ ಕೆಲಸಕ್ಕೆ ಎಷ್ಟು ಸಂಬಳ ಕೊಟ್ಟರೂ ಸಾಲದು. ಇಂತಹ ಹೆಣ್ಣು ಮಕ್ಕಳನ್ನು ಇಂದು ಇಡೀ ಜಗತ್ತು ಸಾಂಕೇತಿಕವಾಗಿ ಗೌರವ ನೀಡಲು ಮಹಿಳಾ ದಿನಾಚರಣೆ ಆಚರಿಸುತ್ತಿದೆ ಎಂದ ಅವರು ಕೊರೊನಾ ವಾರಿಯರ್ ಆಗಿ ದುಡಿದ ಹೊನ್ನಾಳಿ ತಾಲ್ಲೂಕಿನ ಬಿದರಹಳ್ಳಿ ತಾಂಡಾದ ಅಂಗನವಾಡಿ ಕಾರ್ಯಕರ್ತೆ ಶಶಿಕಲಾರನ್ನು ಗುರುತಿಸಿ ದೆಹಲಿಯಲ್ಲಿ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿರುವು ಅಭಿನಂದನಾರ್ಹ ಎಂದರು.

ಸಂವಿಧಾನಕ್ಕೆ ತರಲಾದ 73 ಮತ್ತು 74 ನೇ ತಿದ್ದುಪಡಿ ಹೆಣ್ಣುಮಕ್ಕಳಿಗೆ ಅನೇಕ ಅವಕಾಶ ನೀಡಿದೆ. ಈ ಅವಕಾಶಗಳನ್ನು ಬಳಸಿಕೊಂಡು ಮಹಿಳೆಯರು ಒಳ್ಳೊಳ್ಳೆ ಕೆಲಸಗಳನ್ನು ಮಾಡುತ್ತಿದ್ದಾರೆ. ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಹೆಣ್ಣನ್ನು ಪೂಜಿಸುವ ದೇಶ ನಮ್ಮದಾಗಿದ್ದು, ಹೆಣ್ಣು ನೀಡುವ ಪ್ರೀತಿ, ಮಮಕಾರ, ಅಪ್ಯಾಯತೆ ಮತ್ತೊಬ್ಬರಿಂದ ಸಾಧ್ಯವಿಲ್ಲ. ಇಂತಹ ಮಹಿಳೆಯರೇ ಆಸ್ತಿಯಾಗಿದ್ದು, ಇವರು ಇ ನ್ನೂ ಅತ್ಯುತ್ತಮ ಆಸ್ತಿಯನ್ನು ತಯಾರಿಸುತ್ತಾರೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ನಿರುದ್ಯೋಗಿ ಪುರುಷ ಇರಬಹುದು. ಆದರೆ ನಿರುದ್ಯೋಗಿ ಮಹಿಳೆ ಇರುವುದಿಲ್ಲ. ಎಲ್ಲ ಮಹಿಳೆಯರೂ ಕೆಲಸದಲ್ಲಿ ನಿರತರಾಗಿರುತ್ತಾರೆ. ಆದರೆ ಕೆಲವರಿಗೆ ಮಾತ್ರ ಸಂಬಳ ಬರುತ್ತದೆ ಎನ್ನುವ ಮೂಲಕ ಹೆಣ್ಣಿನ ಅವಿರತ ಪರಿಶ್ರಮದ ಬಗ್ಗೆ ಹೇಳಿದ ಅವರು ಶಿಕ್ಷಣ ಮತ್ತು ಮಾಹಿತಿ ಹೆಣ್ಣನ ಸಬಲೀಕರಣಕ್ಕೆ ರಹದಾರಿಗಳಾಗಿವೆ ಎಂದರು.

ಹೆಣ್ಣಿನ ರಕ್ಷಣೆ ಮತ್ತು ಸಬಲೀಕರಣಕ್ಕಾಗಿ ಅನೇಕ ಕಾಯ್ದೆ ಕಾನೂನುಗಳನ್ನು ತರಲಾಗಿದೆ. ಆದರೆ ಅವುಗಳ ಪರಿಣಾಮಕಾರಿ ಅನುಷ್ಟಾನದಿಂದ ಮಾತ್ರ ಉತ್ತಮ ಫಲಿತಾಂಶ ಸಾಧ್ಯ.ಜಿಲ್ಲೆಯಲ್ಲಿ ಒಂದು ಮಹಿಳಾ ಠಾಣೆ ಇದ್ದು, ಜಿಲ್ಲೆಯ ಯಾವುದೇ ಭಾಗದ ಮಹಿಳೆಯರು ಇಲ್ಲಿ ದೂರು ನೀಡಬಹುದು ಮತ್ತು ಪ್ರಕರಣಗಳ ತನಿಖೆ ಕೈಗೊಳ್ಳಬಹುದು. ಎಲ್ಲ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಹಾಯವಾಣಿ ಇದೆ. ಇದೀಗ ಜಿಲ್ಲೆಯಲ್ಲಿ ಸಹಾಯವಾಣಿ ಸಂಖ್ಯೆ 112 (ಇಎಸ್‍ಎಸ್‍ಆರ್-ಎಮರ್ಜೆನ್ಸಿ ರೆಸ್ಪಾನ್ಸಿವ್ ಸಪೋರ್ಟ್ ಸಿಸ್ಟಂ) ಗೆ ಕರೆ ಮಾಡಿದರೆ ತಕ್ಷಣ ನಿಯೋಜಿತ ಪೊಲೀಸರು ಸ್ಥಳಕ್ಕೆ ಧಾವಿಸಿ ಸಹಾಯ ಮಾಡುವರು. ಜಿಲ್ಲೆಯಾದ್ಯಂತ ಒಟ್ಟು 16 ಜೀಪ್ ಮತ್ತು ಅಧಿಕಾರಿಗಳು ಇದಕ್ಕೆ ನಿಯೋಜನೆಗೊಂಡಿರದ್ದಾರೆ ಎಂದು ಮಾಹಿತಿ ನೀಡಿದರು.

ಮಹಿಳೆಯರ ರಕ್ಷಣೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಎನ್‍ಜಿಓ ಗಳು, ಸಾಂತ್ವನ ಕೇಂದ್ರ, ಒನ್ ಸ್ಟಾಪ್ ಸೆಂಟರ್ ಸಖಿ ಇದ್ದು ತೊಂದರೆಯಲ್ಲಿರುವ ಹೆಣ್ಣು ಮಕ್ಕಳು ಇವುಗಳ ಸದುಪಯೋಗ ಪಡೆಯಬಹುದು ಎಂದರು.

ಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ್ ಮಾತನಾಡಿ, ಮಹಿಳೆಯರು ಸರ್ಕಾರದ ಸೌಲಭ್ಯಗಳು ಮತ್ತು ತಮಗಾಗಿ ಇರುವ ಕಾನೂನು ಕಾಯ್ದೆಗಳ ಬಳಕೆ ಮಾಡಿಕೊಳ್ಳಬೇಕು. ಭಯದಿಂದಲೇ ಶೇ.90 ರಷ್ಟು ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯ, ಅನ್ಯಾಯವನ್ನು ಹೇಳಿಕೊಳ್ಳುತ್ತಿಲ್ಲ. ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ನೀಡಿದ್ದು ಮಹಿಳೆಯರು ದೌರ್ಜನ್ಯ, ಅನ್ಯಾಯವನ್ನು ಸಹಿಸಬಾರದು. ಇದರ ವಿರುದ್ದ ಪ್ರತಿಭಟಿಸಬೇಕು ಎಂದರು.

ಜಿ.ಪಂ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ತಾ.ಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ ಮಾತನಾಡಿದರು.ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ, ಜಿ ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಲೋಕೇಶ್ವರ, ಜಿ.ಪಂ ಸದಸ್ಯರಾದ ಉಮಾ ವೆಂಕಟೇಶ್, ಅರ್ಚನಾ ಬಸವರಾಜ್, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಜಿ.ಸಿ.ಮಂಗಳ, ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶಕುಂತಲ, ಶಾರದಮ್ಮ, ಜಿಲ್ಲಾ, ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

 

ಸನ್ಮಾನ : ಕರೋನಾ ಸಂದರ್ಭದಲ್ಲಿ ಜನರಿಗೆ ಸೇವೆ ಸಲ್ಲಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಹಾಗೂ ತಮ್ಮ ಸೇವೆಗೆ ಕೇಂದ್ರ ಸರ್ಕಾರದಿಂದ ಇತ್ತೀಚಿಗೆ ದೆಹಲಿಯಲ್ಲಿ ಪ್ರಶಸಿ ಪಡೆದ ಹೊನ್ನಾಳಿ ತಾಲ್ಲ್ಲೂಕಿನ ಬಿದರಿಹಳ್ಳಿ ತಾಂಡಾದ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ.ಎನ್ ಹಾಗೂ ಹರಿಹರದ ಭಾರತ್ ಪೆಟ್ರೋಲಿಯಂನ ಮಾಲೀಕರು, ಸಾಂತ್ವನ ಕೇಂದ್ರದ ಅಧ್ಯಕ್ಷೆಯಾ

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top