Connect with us

Dvgsuddi Kannada | online news portal | Kannada news online

ಸಾರ್ವಜನಿಕರಿಗೆ ನಿವೇಶನ ಕಲ್ಪಿಸಲು ದಾವಣಗೆರೆ, ಹರಿಹರ ಸುತ್ತಮುತ್ತ ಭೂಮಿ ಖರೀದಿಗೆ ದೂಡಾ ಸಿದ್ಧ; 45 ಗ್ರಾಮಗಳಲ್ಲಿ ಸಿಡಿಪಿ ಯೋಜನೆಗೆ ಅನುಮೋದನೆ; ಅಧ್ಯಕ್ಷ ಎ.ವೈ.ಪ್ರಕಾಶ

ದಾವಣಗೆರೆ

ಸಾರ್ವಜನಿಕರಿಗೆ ನಿವೇಶನ ಕಲ್ಪಿಸಲು ದಾವಣಗೆರೆ, ಹರಿಹರ ಸುತ್ತಮುತ್ತ ಭೂಮಿ ಖರೀದಿಗೆ ದೂಡಾ ಸಿದ್ಧ; 45 ಗ್ರಾಮಗಳಲ್ಲಿ ಸಿಡಿಪಿ ಯೋಜನೆಗೆ ಅನುಮೋದನೆ; ಅಧ್ಯಕ್ಷ ಎ.ವೈ.ಪ್ರಕಾಶ

ದಾವಣಗೆರೆ: ಸಾರ್ವಜನಿಕರಿಗೆ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ದಾವಣಗೆರೆ, ಹರಿಹರ ಸುತ್ತಮುತ್ತ ನೇರವಾಗಿ ಭೂಮಿ ಖರೀದಿಗೆ ದಾವಣಗೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ದೂಡಾ) ಸಿದ್ಧವಾಗಿದ್ದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದೇವೆ ಎಂದು ಪ್ರಾಧಿಕಾರದ ಅಧ್ಯಕ್ಷ ಎ.ವೈ.ಪ್ರಕಾಶ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕುಂದುವಾಡ ಗ್ರಾಮದ ರೈತರು ಭೂಮಿ ನೀಡಿದರೆ ಲೇಔಟ್ ಮಾಡಲು ಸಿದ್ಧರಿದ್ದೇವೆ. ಹೊಸದಾಗಿಯೂ ಜಾಗ ಹುಡುಕುತ್ತಿದ್ದೇವೆ. ಶೇ.50-50 ಸೂತ್ರಕ್ಕೆ ಯಾವುದೇ ರೈತರು ಬ೦ದರೂ ಪ್ರಾಧಿಕಾರ ಸಿದ್ಧವಿದೆ ಎಂದರು.

ಹೊಸ ಸಿಡಿಪಿ (ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ) ಪ್ಲಾನ್‌ಗೆ ಒಟ್ಟು 938 ಆಕ್ಷೇಪಣೆಗಳು ಬಂದಿದ್ದು, ಈ ಪೈಕಿ419 ಪರಿಗಣಿಸಲಾಗಿತ್ತು.ಇದೀಗ ಹೊಸ ಸಿಡಿಪಿ ಪ್ಲಾನ್ ಪ್ರಕಾರ ದಾವಣಗೆರೆ ತಾ. 6ನೇ ಮೈಲಿಕಲ್ಲು ಶಿರಮಗೊಂಡನಹಳ್ಳಿ,ಕಲ್ಪನಹಳ್ಳಿ ತೋಳಹುಣಸೆ, ಪಾಮೇನಹಳ್ಳಿ, ನಾಗನೂರು, ತುಂಗಭದ್ರಾ ಹೌಸಿಂಗ್ ಬೋರ್ಡ್ ಬಡಾವಣೆ, ಹಳೆ ಬಾತಿ, ಬಸಾಪುರ, ವಡ್ಡಿನಹಳ್ಳಿ, ಬೇತೂರು, ದೇವರಹಟ್ಟಿ, ಚಿತ್ತಾನಹಳ್ಳಿ,
ಆವರಗೊಳ್ಳಗಳು ನೂತನ ಹೊರ ವರ್ತುಲ ರಸ್ತೆಗೆ ವ್ಯಾಪ್ತಿಗೊಳಪಡಲಿವೆ ಎಂದು ಹೇಳಿದರು.

ದಾವಣಗೆರೆ-ಹರಿಹರ ನಗರ ಹಾಗೂ 45
ಗ್ರಾಮಗಳ ಒಳಗೊ೦ಡ೦ತೆ 2041ರ ಜನಸಂಖ್ಯೆ ಗಮನದಲ್ಲಿಟ್ಟು, ಸ್ಥಳೀಯ ಯೋಜನಾ ಪ್ರದೇಶದ ಮಹಾ ಯೋಜನೆ (ಸಿಡಿಪಿ) (ಪರಿಷ್ಕೃತ-2)ಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ದೂಡಾ
ಅಧ್ಯಕ್ಷ ಎ.ವೈ.ಪ್ರಕಾಶ ತಿಳಿಸಿದರು.

ಹಿಂದೆ 40ಹಳ್ಳಿಗಳ ಒಳಗೊಂಡಂತೆ ದಾವಣಗೆರೆ-ಹರಿಹರ ಸ್ಥಳೀಯ ಯೋಜನಾ ಪ್ರದೇಶಕ್ಕೆ ಸರ್ಕಾರವು 2008ರ
ಮಹಾಜು.26ರಂದು ಯೋಜನೆ(ಪರಿಷ್ಕೃತ-1) ಹೈ ಅನುಮೋದನೆ ನೀಡಿದ್ದು, ಇದೀಗ ಸಿಡಿಪಿ ಪರಿಷ್ಕೃತ-2ಕ್ಕೆ ಅನುಮೋದನೆ ನೀಡಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆ ಆಹ್ವಾನಿಸಲಾಗಿದೆ ಎಂದರು.

ಪ್ರಾಧಿಕಾರವು ದಾವಣಗೆರೆ, ಹರಿಹರ ನಗರಗಳ ಒಳಗೊಂಡ 45 ಹಳ್ಳಿಗಳನ್ನು ಸೇರಿಸಿ, ನವೆಂಬರ್ 2020ರಲ್ಲಿ ಹರಿಹರ ತಾಲೂಕು ಕೆ.ಬೇವಿನಹಳ್ಳಿ, ಬನ್ನಿಕೋಡು, ಸಾಲಕಟ್ಟೆ, ಬೆಳ್ಳೂಡಿ, ಶಂಷೀಪುರ
ಒಳಗೊಂಡ ಯೋಜನಾ ಪ್ರದೇಶವನ್ನು ಪರಿಷ್ಕರಿಸಿ,ಅನುಮೋದನೆಗಾಗಿ ಸಲ್ಲಿಸಿತ್ತು.
ಅದರಂತೆ ಸರ್ಕಾರವು 2023ರ ಮಾ.16ರಂದುಅ೦ತಿಮ ಅನುಮೋದನೆ ನೀಡಿದೆ.

ಸರ್ಕಾರದದಾವಣಗೆರೆ-ಹರಿಹರದ ಜನಸಂಖ್ಯೆ 2011ರ ಜನಗಣತಿ ಪ್ರಕಾರ 5,47,943 ಇದ್ದು, 2041ರ
ವೇಳೆ 9.25 ಲಕ್ಷದಷ್ಟು ಬೆಳವಣಿಗೆಯಾಗುವ ಅಂದಾಜಿನಲ್ಲಿ ಮಹಾ ಯೋಜನೆ ತಯಾರಿಸಲಾಗಿದೆ.

ಯೋಜನಾ ಪ್ರದೇಶದ ಒಟ್ಟು 28304.80
ಹೆಕ್ಟೇರ್ ಪೈಕಿ 13505.37 ಹೆಕ್ಟೇರ್ ಪ್ರದೇಶವನ್ನುಪಟ್ಟಣದ ಅಭಿವೃದ್ಧಿಗಾಗಿ ನಗದೀಕರಣದಎಲ್ಲೆಯೆಂದು ಪ್ರಸ್ತಾಪಿಸಿ, ಪ್ರತಿ ಹೆಕ್ಟೇರ್‌ಗೆ 69ದಾವಣಗೆರೆ ಜಿ.ಎಚ್. ಪಟೇಲ್‌ ಬಡಾವಣೆಯಲ್ಲಿ ಪ್ರಾಧಿಕಾರದಿಂದ ನಿವೇಶನ ಮಂಜೂರಾದವರು 10 ವರ್ಷದಲ್ಲಿ ಮನೆ, ಕಟ್ಟಡ ಕಟ್ಟಬೇಕು. ಮನೆ ಕಟ್ಟಲು 2 ವರ್ಷಗಳ ಕಾಲಾವಕಾಶ ವಿಸ್ತರಿಸಿದ್ದೆವು. ಇನ್ನು ಮೂರು ತಿಂಗಳಲ್ಲೇ ಪಟೇಲ್
ಬಡಾವಣೆಯನ್ನು ಮಹಾನಗರ ಪಾಲಿಕೆಗೆ
ಹಸ್ತಾಂತರಿಸಲಾಗುವುದು ಎಂದರು.

ಜನರಂತೆ ಜನ ಸಾಂದ್ರತೆ ಪರಿಗಣಿಸಿ, ಮಹಾ
ಯೋಜನೆ ತಯಾರಿಸಲಾಗಿದೆ. 13505.37
ಹೆಕ್ಟೇರ್‌ನಲ್ಲಿ ವಸತಿಗಾಗಿ ಶೇ.55.38ರಷ್ಟು, ವಾಣಿಜ್ಯಕ್ಕಾಗಿ ಶೇ.5.75 ,ಕೈಗಾರಿಕೆಗಾಗಿ ಶೇ.5.66,ಸಾರ್ವಜನಿಕ, ಅರೆಸಾರ್ವಜನಿಕ ಉಪಯೋಗಕ್ಕಾಗಿ ಶೇ.5.08, ಪುರಾತತ್ವ ಪ್ರದೇಶ ಶೇ.00, ಉದ್ಯಾನವನ, ಬಯಲ ಜಾಗಕ್ಕಾಗಿ ಶೇ.7.74, ಸಾರ್ವಜನಿಕ ಉಪಯೋಗಕ್ಕಾಗಿ ಶೇ.0.52 ಹಾಗೂಸಾರಿಗೆ, ಸಂಪರ್ಕ ವಲಯಕ್ಕೆ ಶೇ.19.97ರಷ್ಟು ಪ್ರದೇಶ ಮೀಸಲಿತ್ತು, ಭೂ ಉಪಯೋಗಗಳನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಬೈಪಾಸ್ ರಸ್ತೆಗೆ 40ಮೀ. ನಿಗದಿ: ಖಾಸಗಿ ವಸತಿ ವಿನ್ಯಾಸ ಅನುಮೋದನೆ ನೀಡುವಾಗ ಶೇ.10 ಪಾರ್ಕ್, ಶೇ.5 ನಾಗರಿಕ ಸೌಲಭ್ಯ ನಿವೇಶನಕ್ಕೆ ನಿವೇಶನಕ್ಕೆಕಾಯ್ದಿರಿಸಿ, ರಸ್ತೆ ಪರಿಚಲನೆ ಅಳವಡಿಸಿ, ಗರಿಷ್ಠ 55ರವರೆಗೆ ವಸತಿಗೆ ಪರಿಗಣಿಸಿ, ಅನುಮೋದನೆನೀಡಬಹುದಾಗಿದೆ. ಮಹಾ ಯೋಜನೆ ರಸ್ತೆಹಾದು ಹೋಗಿದ್ದು, ರಸ್ತೆಯ ವಿಸ್ತೀರ್ಣ ಶೇ.40ಕ್ಕಿಂತ ಹೆಚ್ಚಾದಲ್ಲಿಶೇ.5 ನಾಗರಿಕಸೌಲಭ್ಯದ ನಿವೇಶನಕ್ಕೆ ಕಾಯ್ದಿರಿಸದೇ, ಅನುಮೋದನೆ
ನೀಡಬಹುದು.

ನಗರದ ಭವಿಷ್ಯದ ದೃಷ್ಟಿಯಿ೦ದ ಸಾರಿಗೆ ದಟ್ಟಣೆ ಕಡಿಮೆ ಮಾಡಲು 60 ಮೀ ಅಗಲದ ವರ್ತುಲ ರಸ್ತೆ ನಿರ್ಮಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ ನಿಯಮಾವಳಿಯಂತೆ ಬೈಪಾಸ್ ರಸ್ತೆಗೆ 40 ಮೀಟರ್‌ ನಿಗದಿಪಡಿಸಿದೆ ಎ೦ದು ವಿವರಿಸಿದರು. ಅಲ್ಲದೇ, ಖಾಸಗಿ ವಸತಿ ವಿನ್ಯಾಸದಅನುಮೋದನೆ ನೀಡುವಾಗ ಎಲ್ಲಾ ಮಾನದಂಡ‌ಅನುಸರಿಸುವಂತೆ ಮಹಾ ಯೋಜನೆ ಅನುಷ್ಠಾನಕ್ಕೆ ತರಲು ಅಗತ್ಯ ವಲಯ ನಿಯಮ ರೂಪಿಸಲಾಗಿದೆ.

ಸರ್ಕಾರದ ಮಹಾ ಯೋಜನೆ ಅನುಮೋದನೆ
ದಿನದಿಂದ ಮುಂದಿನ 2 ವರ್ಷಗಳವರೆಗೆ
ಯಾವುದೇ ಭೂ ಉಪಯೋಗ ಬದಲಾವಣೆ
ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬಾರದು
ಎ೦ಬ ಷರತ್ತಿನೊ೦ದಿಗೆ ಅ೦ತಿಮ ಅನುಮೋದನೆ ನೀಡಲಾಗಿದೆ ಎಂದು ಎ.ವೈ.ಪ್ರಕಾಶ ತಿಳಿಸಿದರು.

ಪ್ರಾಧಿಕಾರದ ಆಯುಕ್ತ ಬಸನಗೌಡ ಕೋಟೂರ, ಸದಸ್ಯರಾದ ಆರ್.ಲಕ್ಷ್ಮಣ, ಮಾರುತಿ ರಾವ್ ಘಾಟ್, ಬಾತಿ ಚಂದ್ರ ಶೇಖರ, ಗೌರಮ್ಮ ಇತರರು ಇದ್ದರು.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top