Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಭರ್ಜರಿ ಏರಿಕೆ; 46 ಸಾವಿರ ಗಡಿ ದಾಟಿದ ಬೆಲೆ..!

ಪ್ರಮುಖ ಸುದ್ದಿ

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಭರ್ಜರಿ ಏರಿಕೆ; 46 ಸಾವಿರ ಗಡಿ ದಾಟಿದ ಬೆಲೆ..!

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆ ಮತ್ತೆ ಏರಿಕೆ ಹಾದಿಗೆ ಮರಳಿದೆ. ಕಳೆದ ಒಂದು ವಾರದಲ್ಲಿ ಕ್ವಿಂಟಾಲ್ ಗೆ 1000 ರೂಪಾಯಿಗಳಷ್ಟು ಏರಿಕೆ ಕಂಡಿದ್ದು, ಮಾರ್ಚ್ ಆರಂಭದಿಂದ ಕುಸಿತದಲ್ಲಿದ್ದ ಬೆಲೆ ಈಗ ಏರಿಕೆಯತ್ತ‌ ಮುಖ ಮಾಡಿದೆ. ಇದರಿಂದ ಅಡಿಕೆ ಬೆಳೆದ ರೈತರಲ್ಲಿ ಸಂತಸ ಉಂಟು ಮಾಡಿದೆ.

ದಿನದ ವಹಿವಾಟಿನ ಏರಿಳಿತ ನಡುವೆಯೇ ಜಿಲ್ಲೆಯಲ್ಲಿ ಇಂದು (ಮಾ.29) ಪ್ರತಿ ಕ್ವಿಂಟಾಲ್ ಗೆ ಗರಿಷ್ಠ 46,021 ರೂ.ಗೆ ಮಾರಾಟವಾಗಿದೆ. ಈ ಮೂಲಕ ಒಂದು ವಾರದ ಹಿಂದಿನ ಬೆಲೆಗೆ ಹೊಲಿಸಿದ್ರೆ 1000 ರೂ.ಗಳಷ್ಟು ಏರಿಕೆ ಆಗಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ಉತ್ತಮ ರಾಶಿ ಅಡಿಕೆ ಪ್ರತಿ ಕ್ವಿಂಟಾಲ್ ಗೆ ದರ 46,021ಗರಿಷ್ಠ ಬೆಲೆ ದಾಖಲಾಗಿದೆ. ನಿನ್ನೆ ಕ್ವಿಂಟಾಲ್ ಗೆ ಗರಿಷ್ಠ 45,600ರೂ. ದಾಖಲಾಗಿತ್ತು. 2nd ಬೆಟ್ಟೆ ಅಡಿಕೆ ಗರಿಷ್ಠ 34,419 ಬೆಲೆಗೆ ಮಾರಾಟವಾಗಿದೆ.

ಮಾ.29 ರಂದು ಉತ್ತಮ ರಾಶಿಯ ಕನಿಷ್ಠ ಬೆಲೆ‌ 40,399 ಆಗಿದ್ದು, ಗರಿಷ್ಠ ಬೆಲೆ 46,000 ಹಾಗೂ ಸರಾಸರಿ ಬೆಲೆ 44,327 ಆಗಿದೆ. ಇನ್ನೂ 2nd ಬೆಟ್ಟೆ ಅಡಿಕೆ ಬೆಲೆ ಕನಿಷ್ಠ ಬೆಲೆ 31,029 ಗರಿಷ್ಠ ಬೆಲೆ 34,419 ಹಾಗೂ ಸರಾಸರಿ ಬೆಲೆ 32,640 ಆಗಿದೆ.

 

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top