Connect with us

Dvgsuddi Kannada | online news portal | Kannada news online

ದಾವಣಗೆರೆ: ಎಲೆಕ್ಟ್ರಿಕ್ ಬಸ್‍ ಸೇವೆ ಆರಂಭ; ಮುಂಗಡ ಬುಕ್ಕಿಂಗ್ ಗೆ ಅವಕಾಶ

ದಾವಣಗೆರೆ

ದಾವಣಗೆರೆ: ಎಲೆಕ್ಟ್ರಿಕ್ ಬಸ್‍ ಸೇವೆ ಆರಂಭ; ಮುಂಗಡ ಬುಕ್ಕಿಂಗ್ ಗೆ ಅವಕಾಶ

ದಾವಣಗೆರೆ: ದಾವಣಗೆರೆ- ಬೆಂಗಳೂರು ಮಾರ್ಗದಲ್ಲಿ ನೂತನ ಹವಾ ನಿಯಂತ್ರಿತ ಎಲೆಕ್ಟ್ರಿಕ್ ಪವರ್ ಪ್ಲಸ್ ಬಸ್ ಗಳ ಸೇವೆ ಆರಂಭಿಸಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್​ಆರ್​ಟಿಸಿ) ಅಂತರ್ ನಗರ ನೂತನ ಹವಾ ನಿಯಂತ್ರಿತ ಎಲೆಕ್ಟ್ರಿಕ್ ಚಾಲಿತ ಇ.ವಿ. ಪವರ್ ಪ್ಲಸ್ ಬಸ್ ಗಳಿಗೆ ಮೊದಲ ಹಂತವಾಗಿ 25 ಬಸ್ ಗಳನ್ನು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದರು.

ಈ ಬಸ್ ಗಳಲ್ಲಿ ಪ್ರಯಾಣಿಸಲು www.ksrtc.in ಮೂಲಕ ಮುಂಗಡ ಆಸನ ಕಾಯ್ದಿರಿಸುವಿಕೆಗೆ ಲಭ್ಯವಿದ್ದು,ಪ್ರಯಾಣಿಕರು ಸಾರಿಗೆಗಳ ಸದುಪಯೋಗಪಡಿಸಿಕೊಳ್ಳಲು ದಾವಣಗೆರೆ ಕರಾರಸಾರಿಗೆ ನಿಗಮದ ವಿಭಾಗಿಯ ನಿಯಂತ್ರಣ ಅಧಿಕಾರಿಗಳು ತಿಳಿಸಿದ್ದಾರೆ.

ಇವಿ ಪವರ್ ಪ್ಲಸ್ ಬಸ್ ಗಳು ಬಸ್ ಗಳು 12 ಮೀಟರ್ ಉದ್ದವಾಗಿದ್ದು, ಪ್ರತಿ ಚಾರ್ಜ್ ಗೆ 300 ಕಿ.ಮೀ ಕ್ರಮಿಸುತ್ತದೆ. ಸುಧಾರಿತ Li-ion phosphate Battery ಹೊಂದಿದೆ. ಇದು 203 ಗಂಟೆಗಳಲ್ಲಿ ಫಾಸ್ಟ್ ಚಾರ್ಚಿಂಗ್ ಮೂಲಕ ಸಂಪೂರ್ಣವಾಗಿ ರೀಚಾರ್ಜ್ ಮಾಡಬಹುದು. ಚಾಲಕರು, ನಿರ್ವಾಹಕರು ಸೇರಿದಂತೆ 45 ಆಸನಗಳನ್ನು ಹೊಂದಿದೆ. ಬಸ್ ನಲ್ಲಿ ಸಿಸಿ ಕ್ಯಾಮೆರಾಗಳು, ಅಗ್ನಿಶಾಮಕ ಸಾಧನ, ಎಮರ್ಜೆನ್ಸಿ ಬಟನ್, ಪ್ರಥಮ ಚಿಕಿತ್ಸಾ ಕಿಟ್, ಗ್ಲಾಸ್ ಹ್ಯಾಮರ್ ಮತ್ತಿತರ ಸುರಕ್ಷಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top