Connect with us

Dvgsuddi Kannada | online news portal | Kannada news online

ದಾವಣಗೆರೆ: ಕಂದನಕೋವಿ ಗ್ರಾಮದಲ್ಲಿ ಚಿರತೆ ಪತ್ತೆ

ದಾವಣಗೆರೆ

ದಾವಣಗೆರೆ: ಕಂದನಕೋವಿ ಗ್ರಾಮದಲ್ಲಿ ಚಿರತೆ ಪತ್ತೆ

ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಕಂದನಕೋವಿ ಗ್ರಾಮದ ಜಮೀನೊಂದರಲ್ಲಿ ಚಿರತೆ ಪತ್ತೆಯಾಗಿದ್ದು, ಗ್ರಾಮಸ್ಥರು ಭಯಗೊಂಡಿದ್ದಾರೆ. ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗಿದ್ದು, ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಕಂದನಕೋವಿ ಗ್ರಾಮ ಪಂಚಾಯತಿ ಕಾರ್ಯಾಲಯ ಅರಣ್ಯ ಇಲಾಖೆಗೆ ಕೋರಿದೆ.

ಸೆ.21 ರಂದು ಕಂದನಕೋವಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಪಾವಡರಂಗವ್ವನಹಳ್ಳಿ ರಸ್ತೆಯ ಆಲದ ಮರ‌ ಬಳಿ ಹಾಗೂ ರಾತ್ರಿ 8 ಗಂಟೆಗೆ ರುದ್ರನಕಟ್ಟೆ ಗ್ರಾಮದ ಸರ್ವೆ ನಂ. 28 ರಲ್ಲಿನ ಲೋಕೇಶ್ ಎಂಬುವರ ಜಮೀನಲ್ಲಿ ಚಿರತೆ ಕಂಡು ಬಂದಿದೆ. ಈ ಬಗ್ಗೆ ದಾವಣಗೆರೆ ಅರಣ್ಯ ‌ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಬೇಕು ಎಂದು ಕಂದನಕೋವಿ ಗ್ರಾಮ ಪಂಚಾತಿ ಕಾರ್ಯಾಲಯ ಪತ್ರ ಬರೆದಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top