Connect with us

Dvgsuddi Kannada | online news portal | Kannada news online

ದಾವಣಗೆರೆ: ಹಿಂದೂ ಮಹಾ ಗಣಪತಿ ವಿಸರ್ಜನೆ; ಸೆ.24 ರಂದು ತಾತ್ಕಾಲಿಕವಾಗಿ ಬಸ್‍ ನಿಲ್ದಾಣದ ಸ್ಥಳ ಬದಲಾವಣೆ

ದಾವಣಗೆರೆ

ದಾವಣಗೆರೆ: ಹಿಂದೂ ಮಹಾ ಗಣಪತಿ ವಿಸರ್ಜನೆ; ಸೆ.24 ರಂದು ತಾತ್ಕಾಲಿಕವಾಗಿ ಬಸ್‍ ನಿಲ್ದಾಣದ ಸ್ಥಳ ಬದಲಾವಣೆ

ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿರುವ ಹಿಂದೂ ಮಹಾ ಗಣಪತಿ ವಿಸರ್ಜನೆ ಸೆ.24 ರಂದು ನಡೆಯಲಿದ್ದು, ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಹೆಚ್ಚಿನ ಜನ ಸೇರುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಕೆಎಸ್ ಆರ್ ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣ ತಾತ್ಕಾಲಿಕವಾಗಿ ಸ್ಥಳ ಬದಲಾವಣೆ ಮಾಡಲಾಗಿದೆ.

ಸಾರ್ವಜನಿಕರಿಗೆ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯುಂಟಾಗುವ ಕಾರಣ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾವಾಡುವ ಸಲುವಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಸೆ.24 ರಂದು ಬೆಳಗ್ಗೆ 6.00 ರಿಂದ ರಾತ್ರಿ 10.00 ಗಂಟೆಯವರೆಗೆ ಮಾತ್ರ ದಾವಣಗೆರೆ ನಗರದ ಕೆಎಸ್‍ ಆರ್ ಟಿಸಿ ಮತ್ತು ಖಾಸಗಿ ಬಸ್‍ನಿಲ್ದಾಣಗಳಿಗೆ ಬರುವ ಬಸ್‍ಗಳನ್ನು ಈ ಕೆಳಕಂಡ ಸ್ಥಳಗಳಲ್ಲಿ ನಿಲುಗಡೆ ಮಾಡಿಕೊಂಡು ಅಲ್ಲಿಂದಲೇ ವಾಪಸ್ ತೆರಳಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳಾದ ಶಿವಾನಂದ ಕಾಪಶಿ ರವರು ಆದೇಶಿಸಿದ್ದಾರೆ.

ಚನ್ನಗಿರಿ ರಸ್ತೆ ಕಡೆಯಿಂದ ಬರುವ ಬಸ್‍ಗಳು – ಹದಡಿ ರಸ್ತೆಯಲ್ಲಿರುವ ಶ್ರೀ ಮಾಗನೂರು ಬಸಪ್ಪ ಮೈದಾನದಲ್ಲಿ ನಿಲುಗಡೆ ಮಾಡಿಕೊಂಡು ನಿರ್ಗಮಿಸುವುದು. ಜಗಳೂರು ಕಡೆಯಿಂದ ಬರುವ ಬಸ್‍ಗಳು- ಕೆ.ಆರ್.ರಸ್ತೆ ಗಣೇಶಗುಡಿ ಪಕ್ಕದಲ್ಲಿರುವ ಜಗಳೂರು ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಿಕೊಂಡು ನಿರ್ಗಮಿಸುವುದು. ಬೆಂಗಳೂರು ಮತ್ತು ಸಂತೆಬೆನ್ನೂರು ಕಡೆಯಿಂದ ಬರುವ ವಾಹನಗಳು, ಬಾಡಾ ಕ್ರಾಸ್‍ನಲ್ಲಿ ನಿಲುಗಡೆ ಮಾಡಿಕೊಂಡು ನಿರ್ಗಮಿಸುವುದು. ಹರಿಹರ ಮತ್ತು ಶಾಮನೂರು ಕಡೆಯಿಂದ ಬರುವ ವಾಹನಗಳನ್ನು ದಾವಣಗೆರೆ ನಗರದ ಎಸಿಬಿ ಕಛೇರಿ ಎದುರುಗಡೆ ರಿಂಗ್ ರಸ್ತೆಯಲ್ಲಿರುವ ಎರಡು ಖಾಲಿ ಜಾಗದಲ್ಲಿ ನಿಲುಗಡೆ ಮಾಡಿಕೊಂಡು ನಿರ್ಗಮಿಸಬೇಕೆಂದು ತಿಳಿಸಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top