Connect with us

Dvgsuddi Kannada | online news portal | Kannada news online

ಭಾಷಾ ವಿಧೇಯಕ ಶೀಘ್ರ ಮಂಡನೆಯಾಗಲಿ: ಎಲ್.ಜಿ.ಮಧುಕುಮಾರ್

ದಾವಣಗೆರೆ

ಭಾಷಾ ವಿಧೇಯಕ ಶೀಘ್ರ ಮಂಡನೆಯಾಗಲಿ: ಎಲ್.ಜಿ.ಮಧುಕುಮಾರ್

ದಾವಣಗೆರೆ: ನ್ಯಾಯಮೂರ್ತಿ ಎಸ್.ಆರ್.ಬನ್ನೂರಮಠ ನೇತೃತ್ವದ ಕರ್ನಾಟಕ ಕಾನೂನು ಆಯೋಗವು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ -2022 ರ ಕರಡನ್ನು ಈಗಾಗಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು ,ಈ ಅಧಿವೇಶನದಲ್ಲಿಯೇ ವಿಧೇಯಕ ಮಂಡನೆಯಾಗಬೇಕು ಎಂದು ಕನ್ನಡಪರ ಚಿಂತಕ ,ಚನ್ನಗಿರಿ ಕಸಾಪ ಅಧ್ಯಕ್ಷ ಬಸವಾಪಟ್ಟಣದ ಎಲ್.ಜಿ‌.ಮಧುಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕನ್ನಡ ಭಾಷೆಯ ವ್ಯಾಪಕ ಪ್ರಸಾರ/ಪ್ರಚಾರಕ್ಕಾಗಿ ಹಾಗೂ ಕನ್ನಡವನ್ನು ಅಧಿಕೃತ ಭಾಷೆಯನ್ನಾಗಿ ಅನುಷ್ಠಾನಗೊಳಿಸುವಲ್ಲಿ ಸೂಕ್ತ ಕ್ರಮಗಳನ್ನು ಮತ್ತು ಕಾರ್ಯಚಟುವಟಿಕೆಗಳನ್ನು ಸಂಯೋಜಿಸಲು ಸಮರ್ಪಕವಾದ ಕಾನೂನಿನ ಅಗತ್ಯವಿರುವುದನ್ನು ಮನಗಂಡ ಕರ್ನಾಟಕ ಕಾನೂನು ಆಯೋಗ, ಕನ್ನಡ ಅಭಿವೃದ್ಧಿ ಪ್ರಾಧಿಕಾರ , ಕನ್ನಡ ಸಾಹಿತ್ಯ ಪರಿಷತ್ತು , ಭಾಷಾ ತಜ್ಞರುಗಳ ಹಾಗೂ ಉನ್ನತಮಟ್ಟದ ಅಧಿಕಾರಿಗಳ ಒಳಗೊಂಡ ಸಮಿತಿಯು ಈ ವಿಧೇಯಕವನ್ನು ರೂಪಿಸಿದೆ.

ಈ ವಿಧೇಯಕವು ಜಾರಿಯಾದಲ್ಲಿ ಉನ್ನತ/ತಾಂತ್ರಿಕ/ವೃತ್ತಿ ಶಿಕ್ಷಣದಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಪರಿಚಯಿಸಲಾಗುತ್ತದೆ.ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ದೊರೆಯುತ್ತದೆ.ರಾಜ್ಯದಲ್ಲಿ ಭೂಮಿ, ತೆರಿಗೆ ವಿನಾಯಿತಿ, ಅನುದಾನ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯುತ್ತಿರುವ ಕೈಗಾರಿಕೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಲಭಿಸುತ್ತದೆ.ಅಧೀನ ನ್ಯಾಯಾಲಯಗಳಲ್ಲಿ ಮತ್ತು ನ್ಯಾಯಮಂಡಳಿಗಳಲ್ಲಿ ಕನ್ನಡ ಭಾಷೆಯ ಸಮರ್ಪಕ ಬಳಕೆ ಮಾಡಲು ಸಾಧ್ಯವಾಗುತ್ತದೆ. ಒಟ್ಟಾರೆಯಾಗಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಈ ವಿಧೇಯಕವು ಪೂರಕವಾಗಿದ್ದು,ಈ
ಅಧಿವೇಶನ ಮೂರು ದಿನಗಳಲ್ಲಿ ಮುಕ್ತಾಯವಾಗಲಿದೆ.ಆಗಾಗಿ ಶೀಘ್ರವೇ ಈ ವಿಧೇಯಕವನ್ನು ಅಧಿವೇಶನದಲ್ಲಿ ಮಂಡನೆ ಮಾಡುವುದರ ಜೊತೆಗೆ ಪಕ್ಷಾತೀತವಾಗಿ ಎಲ್ಲಾ ಶಾಸಕರು ಸಹರಿಸಬೇಕು ಎಂದು ಕನ್ನಡಪರ ಚಿಂತಕ ಬಸವಾಪಟ್ಟಣದ ಎಲ್.ಜಿ.ಮಧುಕುಮಾರ್ ಮನವಿ ಮಾಡಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top