Connect with us

Dvgsuddi Kannada | online news portal | Kannada news online

ದಾವಣಗೆರೆ: ನಿಷೇಧಿತ ಪ್ಲಾಸ್ಟಿಕ್ ಬಳಸಿದ್ರೆ ದಂಡ.. ! ಪರಿಸರಸ್ನೇಹಿ ಬ್ಯಾಗ್ ಬಳಕೆ ಸೂಚನೆ

ದಾವಣಗೆರೆ

ದಾವಣಗೆರೆ: ನಿಷೇಧಿತ ಪ್ಲಾಸ್ಟಿಕ್ ಬಳಸಿದ್ರೆ ದಂಡ.. ! ಪರಿಸರಸ್ನೇಹಿ ಬ್ಯಾಗ್ ಬಳಕೆ ಸೂಚನೆ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ (SUP) ಗಳ ಸಂಗ್ರಹಣೆ, ಮಾರಾಟ ಹಾಗೂ ಬಳಕೆಯನ್ನು ಜುಲೈ 01 ರಿಂದ ನಿಷೇಧಿಸಿದ್ದು, ನಿಷೇಧಿತ ಪ್ಲಾಸ್ಟಿಕ್ ಬಳಸಿದ್ರೆ ದಂಡ ವಿಧಿಸಲಾಗುವುದು ಎಂದು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ತ್ಯಾಜ್ಯ ಸಂಗ್ರಹಣಾ ವಾಹನಗಳ ಮೂಲಕ ವ್ಯಾಪಕವಾಗಿ ಪ್ರಚಾರ ನೀಡಲಾಗಿರುತ್ತದೆ. ಅಲ್ಲದೇ ಜುಲೈ ಮಾಹೆಯಲ್ಲಿ ಹಲವಾರು ಉದ್ದಿಮೆಗಳ ಪರಿವೀಕ್ಷಣೆ ನಡೆಸಿ, ಉಲ್ಲಂಘನೆದಾರರಿಂದ ಒಟ್ಟು ರೂ.3 ಲಕ್ಷ ದವರೆಗೆ ದಂಡ ವಸೂಲಿ ಮಾಡಲಾಗಿದೆ.ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ನಾನ್ ಓವನ್ ಪಾಲಿ ಪ್ರೊಪಿಲೀನ್ ಬ್ಯಾಗ್‍ಗಳನ್ನು ಮಾರಾಟ ಮಾಡುತ್ತಿರುವುದು ಹಾಗೂ ಉಪಯೋಗಿಸುತ್ತಿರುವುದು ಕಂಡುಬಂದಿರುತ್ತದೆ.

ಒಂದು ಸಾರಿ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ಕಪ್, ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ನಾನ್ ಓವನ್ ಪಾಲಿ ಪ್ರೊಪಿಲೀನ್ ಬ್ಯಾಗ್, ಪ್ಲಾಸ್ಟಿಕ್ ಚಮಚ, ಪ್ಲಾಸ್ಟಿಕ್ ಪ್ಲೇಟ್, ಕ್ಲಿಂಗ್ ಫಿಲ್ಮ್ಸ್ ಇತ್ಯಾದಿಗಳಿಂದ ಚರಂಡಿಗಳು, ಒಳಚರಂಡಿಗಳು ಬ್ಲಾಕ್ ಆಗಿ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೇ, ಸೊಳ್ಳೆಗಳ ಅಭಿವೃದ್ಧಿಗೆ ಕಾರಣವಾಗಿ ಡೆಂಗ್ಯೂ, ಚಿಕನ್‍ಗುನಿಯಾ, ಮಲೇರಿಯಾದಂತಹ ಅಪಾಯಕಾರಿ ರೋಗಗಳಿಗೂ ಕಾರಣವಾಗುತ್ತಿವೆ.

ಇಂತಹ ಪ್ಲಾಸ್ಟಿಕ್ ವಸ್ತುಗಳು ಮರುಬಳಕೆಗೂ ಸಾಧ್ಯವಾಗದೇ, ಸಹಸ್ರಾರು ವರ್ಷಗಳವರೆಗೆ ಕೊಳೆಯದೇ ಕಸ ನಿರ್ವಹಣೆಯಲ್ಲೂ ತೊಡಕುಂಟುಮಾಡುವ ಮೂಲಕ ಪರಿಸರದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತವೆ.
ಆದ್ದರಿಂದ ಸಾರ್ವಜನಿಕರು ತಮ್ಮ ದೈನಂದಿನ ವ್ಯವಹಾರಗಳಿಗೆ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್, ಜೂಟ್ ಬ್ಯಾಗ್‍ಗಳ ಬಳಕೆಯನ್ನು ರೂಢಿಸಿಕೊಳ್ಳುವ ಮೂಲಕ ನಮ್ಮ ಭವಿಷ್ಯದ ಪೀಳಿಗೆಗೆ ಉತ್ತಮ ಪರಿಸರ ನೀಡುವಲ್ಲಿ ಮಹಾನಗರ ಪಾಲಿಕೆಯೊಂದಿಗೆ ಕೈಜೋಡಿಸಬೇಕಾಗಿದೆ. ಇಲ್ಲವಾದಲ್ಲಿ ಮಹಾನಗರ ಪಾಲಿಕೆಯಿಂದ ದಂಡದ ಮೊತ್ತವನ್ನು ದ್ವಿಗುಣಗೊಳಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top