Connect with us

Dvgsuddi Kannada | online news portal | Kannada news online

ಕ್ರೀಡಾ ಸಚಿವಾಲಯ ಆಯೋಜಿಸಿರುವ ಭಾಷಣ ಸ್ಫರ್ಧೆಯಲ್ಲಿ ಭಾಗವಹಿಸಿ 2 ಲಕ್ಷ  ಬಹುಮಾನ ಗೆಲ್ಲಿ..!

ದಾವಣಗೆರೆ

ಕ್ರೀಡಾ ಸಚಿವಾಲಯ ಆಯೋಜಿಸಿರುವ ಭಾಷಣ ಸ್ಫರ್ಧೆಯಲ್ಲಿ ಭಾಗವಹಿಸಿ 2 ಲಕ್ಷ  ಬಹುಮಾನ ಗೆಲ್ಲಿ..!

ದಾವಣಗೆರೆ: ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ  ವತಿಯಿಂದ ಜಿಲ್ಲೆಯ ಯುವಜನರಿಗಾಗಿ ಭಾಷಣ ಸ್ಪರ್ಧೆ ಏರ್ಪಡಿಸಿದ್ದು, ದೇಶಭಕ್ತಿ ರಾಷ್ಟ್ರ ನಿರ್ಮಾಣದ ಕುರಿತು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ವಿಷಯದ ಕುರಿತು ಭಾಷಣ ಸ್ಪರ್ಧೆ ನಡೆಯಲಿದೆ.

ಭಾಷಣ ಸ್ಪರ್ಧೆಯ ವಿಜೇತರಿಗೆ ಜಿಲ್ಲಾ ಮಟ್ಟದಲ್ಲಿ ರೂ.5000/-, ರೂ.2000/- ಮತ್ತು ರೂ.1000/- ರಾಜ್ಯಮಟ್ಟದಲ್ಲಿ ರೂ.25000/-, ರೂ.10000/-,ರೂ.5000/- ರಾಷ್ಟ್ರ ಮಟ್ಟದಲ್ಲಿ ರೂ.200000/-, ರೂ.100000/-, ರೂ.50000/-ಗಳಂತೆ ಪ್ರಥಮ, ದ್ವಿರೀಯ, ತೃತೀಯ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ.

ತಾಲ್ಲೂಕು ಮಟ್ಟದಲ್ಲಿ ವಿಜೇತರಾದವರಿಗೆ ಜಿಲ್ಲಾ ಮಟ್ಟದಲ್ಲಿ ಪಾಲ್ಗೊಳ್ಳÀಲು ಅವಕಾಶ ಇರುತ್ತದೆ. ತಾಲ್ಲೂಕು ಮಟ್ಟದಲ್ಲಿ ಭಾಗವಹಿಸಲು ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ನೆಹರು ಯುವ ಕೇಂದ್ರ ಕೊಠಡಿ ಸಂಖ್ಯೆ-42 ಅಥವಾ ಸಂಬಂಧಪಟ್ಟ ತಾಲ್ಲೂಕು ರಾಷ್ಟ್ರೀಯ ಯುವ ಕಾರ್ಯಕರ್ತರನ್ನು ಸಂಪರ್ಕಿಸಬಹುದು.

ತಾಲ್ಲೂಕು ಮಟ್ಟದಲ್ಲಿ ನ.20 ರವರೆಗೆ, ಜಿಲ್ಲಾಮಟ್ಟದಲ್ಲಿ ನ.21 ರಿಂದ ಡಿ.15 ರವರೆಗೆ ರಾಷ್ಟ್ರಮಟ್ಟದಲ್ಲಿ 2022 ಜನವರಿ 26 ರೊಲಗಾಗಿ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಹಿಂದಿ, ಇಂಗ್ಲೀಷ್ ಅಥವಾ ಕನ್ನಡ ಭಾಷೆ ಮತ್ತು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಗೆ ಆದ್ಯತೆ ನೀಡಲಾಗುತ್ತದೆ. 10 ನಿಮಿಷ ಸಮಯ ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವ ಅಧಿಕಾರಿಗಳು, ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ನೆಹರು ಯುವ ಕೇಂದ್ರ ಕೊಠಡಿ ಸಂಖ್ಯೆ-42, ಮೊ.ಸಂ:9901863789ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top