Connect with us

Dvgsuddi Kannada | online news portal | Kannada news online

ದಾವಣಗೆರೆ: ಇಂದು ನಡೆಯಬೇಕಿದ್ದ ಬಾಲ್ಯ ವಿವಾಹ ತಡೆದ ಅಧಿಕಾರಿಗಳು

ದಾವಣಗೆರೆ

ದಾವಣಗೆರೆ: ಇಂದು ನಡೆಯಬೇಕಿದ್ದ ಬಾಲ್ಯ ವಿವಾಹ ತಡೆದ ಅಧಿಕಾರಿಗಳು

ದಾವಣಗೆರೆ: ತಾಲ್ಲೂಕಿನ ಹಳೆಬಾತಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಇಂದು (ಮಾ.27) ನಿಶ್ವಯವಾಗಿದ್ದ ಅಪ್ರಾಪ್ತ ಬಾಲಕಿಯ ಬಾಲ್ಯ ವಿವಾಹವನ್ನು ತಡೆಯುವಲ್ಲಿ ಸರ್ಕಾರಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ವ್ಯಕ್ತಿಯೊಬ್ಬರು ನೀಡಿದ ಮಾಹಿತಿ ಆಧರಿಸಿ ಅಧಿಕಾರಿಗಳು, ಇತರೆ ಸಿಬ್ಬಂದಿ ತೆರಳಿ, ಅಪ್ರಾಪ್ತಿಯಬಾಲ್ಯ ವಿವಾಹ ತಡೆದಿದ್ದಾರೆ.

ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ತಂಡ, ಗ್ರಾಪಂ ಕಾರ್ಯದರ್ಶಿಗಳು,ಕರ್ನಾಟಕ ಪಬ್ಲಿಕ್ ಶಾಲೆಯ ಸಹ ಶಿಕ್ಷಕರು, ಅಂಗನವಾಡಿ ಮೇಲ್ವಿಚಾರಕರು, ಕಂದಾಯ
ಇಲಾಖೆ ಗ್ರಾಮ ಆಡಳಿತಾಧಿಕಾರಿ, ಕ್ರೀಡಾಂ ಯೋಜನೆ ಸಂಯೋಜಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಸೇವಕರು, ಪೊಲೀಸ್ ಅಧಿಕಾರಿಗಳ ತಂಡ‌ ದಾಳಿ ಮಾಡಿ ಬಾಲಕು ರಕ್ಷಣೆ ಮಾಡಿದೆ.

ಹರಿಹರ ತಾಲೂಕಿನ ಕೆ.ಬೇವಿನಹಳ್ಳಿ ಗ್ರಾಮದ 30 ವರ್ಷದ ವರನೊಂದಿಗೆ ಸೋಮವಾರ ಬೆಳಿಗ್ಗೆ ಅಪ್ರಾಪ್ತಿಯ ಮದುವೆಯಾಗಬೇಕಿತ್ತು. 17 ವರ್ಷ 4 ತಿಂಗಳಷ್ಟೇ ಆಗಿದ್ದ ಅಪ್ರಾಪ್ತ ಯ ಜನ್ಮದಿನಾಂಕ ದೃಢೀಕರಣ ಪತ್ರವನ್ನು ಶಾಲೆಯಲ್ಲಿ ಪರಿಶೀಲಿಸಿದ ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್‌ ಬಾಸ್ಕೋದ ಸಂಯೋಜಕ ಟಿ.ಎಂ.ಕೊಟ್ರೇಶ್, ಕಾರ್ಯಕರ್ತರಾದ ವಿ.ಮಂಜುಳಾ ಇತರರು ತಂಡವು ಗ್ರಾಪಂಕಾರ್ಯದರ್ಶಿ ಎನ್.
ಸೋಮಶೇಖರ, ಗ್ರಾಪಂ ಕರ ವಸೂಲಿಗಾರ ರುದ್ರೇಶ, ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರಾದ ನಾಸೀರ್ ಅಹಮ್ಮದ್, ಅಂಗನವಾಡಿ ಮೇಲ್ವಿಚಾರಕಿ ಸುಮಂಗಲಾ,
ಕಂದಾಯ ಇಲಾಖೆ ಗ್ರಾಮ ಆಡಳಿತಾಧಿಕಾರಿ ಬಿ.ಪಿ.ಅರುಣಕುಮಾರ, ಕ್ರೀಮ್ ಯೋಜನೆ ಸಂಯೋಜಕ ಬಿ.ಮ೦ಜಪ್ಪ, ಮಕ್ಕಳರಕ್ಷ ಘಟಕದ ಸಮಾಜ ಸೇವಕ ಕೆ.ವೀರೇಶ,ಹರಿಹರದ ಹೊಯ್ಸಳ ತ೦ಡದ ಅಧಿಕಾರಿ ಮೈಕಲ್ ಅಂಥೋನಿ, ಕೆ.ಎಂ.ಕೊಟ್ರೇಶ್‌ ತಂಡವು ಬಾಲಕಿಯ ಮನೆಗೆ ಭೇಟಿ ನೀಡಿತ್ತು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top