Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಸ್ಥಿರತೆ; ಕಳೆದ 10 ದಿನದಿಂದ ಕ್ವಿಂಟಾಲ್ ಗೆ 45,600 ರೂ.ಗೆ ಮಾರಾಟ-ರೈತರಲ್ಲಿ ಸಂತಸ

ಪ್ರಮುಖ ಸುದ್ದಿ

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಸ್ಥಿರತೆ; ಕಳೆದ 10 ದಿನದಿಂದ ಕ್ವಿಂಟಾಲ್ ಗೆ 45,600 ರೂ.ಗೆ ಮಾರಾಟ-ರೈತರಲ್ಲಿ ಸಂತಸ

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆಯಲ್ಲಿ ಕಳೆದ 10 ದಿನದಿಂದ ಕ್ವಿಂಟಾಲ್ ಗೆ 600 ರೂಪಾಯಿಗಳಷ್ಟು ಏರಿಕೆ ಕಂಡಿದ್ದು, ಇದೇ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡು ಬಂದಿದೆ. ಮಾರ್ಚ್ ಆರಂಭದಿಂದ ಕುಸಿತದಲ್ಲಿದ್ದ ಬೆಲೆ ಈಗ ಸ್ಥಿರವಾಗಿರುವುದು ಅಡಿಕೆ ಬೆಳೆದ ರೈತರಲ್ಲಿ ಸಂತಸ ಉಂಟು ಮಾಡಿದೆ.

ದಿನದ ವಹಿವಾಟಿನ ಏರಿಳಿತ ನಡುವೆಯೇ ಜಿಲ್ಲೆಯಲ್ಲಿ ಇಂದು (ಮಾ.27) ಪ್ರತಿ ಕ್ವಿಂಟಾಲ್ ಗೆ ಗರಿಷ್ಠ 45,600 ರೂ.ಗೆ ಮಾರಾಟವಾಗಿದೆ. ಈ ಮೂಲಕ ಹಿಂದಿನ 10 ದಿನಕ್ಕೆ ಹೊಲಿಸಿದ್ರೆ ಬೆಲೆಯಲ್ಲಿ 600 ರೂ.ಗಳಷ್ಟು ಏರಿಕೆ ಆಗಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ಉತ್ತಮ ರಾಶಿ ಅಡಿಕೆ ಪ್ರತಿ ಕ್ವಿಂಟಾಲ್ ಗೆ ದರ 45,600ಗರಿಷ್ಠ ಬೆಲೆ ದಾಖಲಾಗಿದೆ. ನಿನ್ನೆ ಸಹ ಕ್ವಿಂಟಾಲ್ ಗೆ ಗರಿಷ್ಠ 45,600ರೂ. ದಾಖಲಾಗಿತ್ತು. 2nd ಬೆಟ್ಟೆ ಅಡಿಕೆ ಗರಿಷ್ಠ 35,039 ಬೆಲೆಗೆ ಮಾರಾಟವಾಗಿದೆ.

ಮಾ.27 ರಂದು ಉತ್ತಮ ರಾಶಿಯ ಕನಿಷ್ಠ ಬೆಲೆ‌ 37,299  ಆಗಿದ್ದು, ಗರಿಷ್ಠ ಬೆಲೆ 45,600 ಹಾಗೂ ಸರಾಸರಿ ಬೆಲೆ 44,013 ಆಗಿದೆ. ಇನ್ನೂ 2nd ಬೆಟ್ಟೆ ಅಡಿಕೆ ಬೆಲೆ ಕನಿಷ್ಠ ಬೆಲೆ 29,129 ಗರಿಷ್ಠ ಬೆಲೆ 35,039 ಹಾಗೂ ಸರಾಸರಿ ಬೆಲೆ 32,233 ಆಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top