ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಚಿಕ್ಕಬಿದರಿ ಗ್ರಾಮದಲ್ಲಿ ಅಡಿಕೆ ತೋಟವೊಂದರಲ್ಲಿ ಯಾರೋ ದುಷ್ಕರ್ಮಿಗಳು ರಾತ್ರಿ ಸಮಯದಲ್ಲಿ 300 ಅಡಿಕೆ ಗಿಡಗಳನ್ನು ಕಡಿದು ಹಾಕಿದ ಘಟನೆ ನಡೆದಿದೆ.
ಈ ಬಗ್ಗೆ 112ಕ್ಕೆ ದೂರು ಬಂದಿದ್ದು, 112 ERV ಘಟನಾ ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಲಾಗಿ ಸುಮಾರು 300 ಅಡಿಕೆ ಗಿಡಗಳನ್ನು ಯಾರೋ ವ್ಯಕ್ತಿಗಳು ಕಡಿದಿರುವುದು ಕಂಡು ಬಂದಿದೆ. ದೂರುದಾರರಿಗೆ ಹರಿಹರ (ಗ್ರಾ) ಠಾಣೆಗೆ ತೆರಳಿ ದೂರು ನೀಡಲು ತಿಳಿಸಲಾಗಿದೆ ಮತ್ತು ಮಾಹಿತಿಯನ್ನು ಹರಿಹರ (ಗ್ರಾ) ಠಾಣೆಯ ಠಾಣಾಧಿಕಾರಿಗಳಿಗೆ ತಿಳಿಸಿದೆ.