Connect with us

Dvgsuddi Kannada | online news portal | Kannada news online

ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ 180 ಅಡಿಗೆ ಏರಿಕೆ; ಭರ್ತಿಗೆ ಕೇವಲ 6 ಅಡಿ ಮಾತ್ರ ಬಾಕಿ; ಇಂದು ರಾತ್ರಿ ಕಾಲುವೆಗೆ ನೀರು ಬಿಡುಗಡೆ

ದಾವಣಗೆರೆ

ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ 180 ಅಡಿಗೆ ಏರಿಕೆ; ಭರ್ತಿಗೆ ಕೇವಲ 6 ಅಡಿ ಮಾತ್ರ ಬಾಕಿ; ಇಂದು ರಾತ್ರಿ ಕಾಲುವೆಗೆ ನೀರು ಬಿಡುಗಡೆ

ಭದ್ರಾವತಿ: ಭದ್ರಾ ಜಲಾಶಯ ಪ್ರದೇಶದಲ್ಲಿ ಮುಂಗಾರು ಮಳೆ ಮುಂದುವರೆದಿದೆ. 35 ಸಾವಿರ ಕ್ಯೂಸೆಕ್ ನೀರು ಒಳ ಹರಿವಿದ್ದು, ಇಂದಿನ ನೀರಿನ ಮಟ್ಟ 180.2 ಅಡಿಗೆ ಏರಿಕೆಯಾಗಿದೆ. ಡ್ಯಾಂ ಭರ್ತಿಗೆ ಕೇವಲ 6 ಅಡಿ ಮಾತ್ರ ಬಾಕಿ ಉಳಿದಿದೆ.

ಇಂದು (ಜು.13) 35.321 ಕ್ಯೂಸೆಕ್ ಒಳಹರಿವಿದ್ದು, ನಿನ್ನೆ 41,645 ಕ್ಯೂಸೆಕ್ ಒಳ ಹರಿವಿತ್ತು. ಇಂದು ಬೆಳಗ್ಗೆ 6 ಗಂಟೆ ವೇಳೆಗೆ ನೀರಿನ ಮಟ್ಟ 180.2 ಅಡಿಗೆ ತಲುಪಿದೆ. ಇದರಿಂದ ಡ್ಯಾಂ ಭರ್ತಿಗೆ ಇನ್ನು 6 ಅಡಿ ಬಾಕಿ ಉಳಿದಿದೆ. ಕಳೆದ ವರ್ಷ ಈ ದಿನ ಕೇವಲ 156.8 ಅಡಿಯಷ್ಟು ನೀರಿತ್ತು. ಈಗ ಕಳೆದ ವರ್ಷಕ್ಕಿಂತ 24 ಅಡಿಗೂ ಹೆಚ್ಚುವರಿ ನೀರು ಸಂಗ್ರಹವಾಗಿದೆ. ಹೀಗಾಗಿ ಇಂದು ಡ್ಯಾಂ ಕಾಲುವೆಗಳಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

  • ನೀರಿನ ಸಂಗ್ರಹದ ವಿವರ
  • ಇಂದಿನ ನೀರಿನ ಮಟ್ಟ 180.2 ಅಡಿ
  • ಪೂರ್ಣ ಮಟ್ಟ:186 ಅಡಿ
  • ಇಂದಿನ ಸಾಮರ್ಥ್ಯ: 64,378 ಟಿಎಂಸಿ
  • ಒಟ್ಟು ಸಾಮರ್ಥ್ಯ:71.535 ಟಿಎಂಸಿ
  • ಒಳಹರಿವು: 35,321 ಕ್ಯೂಸೆಕ್
  • ಒಟ್ಟು ಹೊರಹರಿವು: 159.ಕ್ಯೂಸೆಕ್
  • ಬಲದಂಡೆ ನಾಲೆ: 0.00 ಕ್ಯೂಸೆಕ್ಸ್
  • ಎಡದಂಡೆ ನಾಲೆ: 0.00ಕ್ಯೂಸೆಕ್ಸ್
  • ಕಳೆದ ವರ್ಷ ಈ ದಿನ : 156.8 ಅಡಿ

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top