Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆ, ಹಸು ಕಳವು ಮಾಡುತ್ತಿದ್ದ 6 ಮಂದಿ ಬಂಧನ

ಕ್ರೈಂ ಸುದ್ದಿ

ದಾವಣಗೆರೆ: ಅಡಿಕೆ, ಹಸು ಕಳವು ಮಾಡುತ್ತಿದ್ದ 6 ಮಂದಿ ಬಂಧನ

ದಾವಣಗೆರೆ : ಜಿಲ್ಲೆಯ ಬೇರೆ ಬೇರೆ ಪ್ರದೇಶದಲ್ಲಿ ಅಡಿಕೆ, ಹಸುಗಳನ್ನು ಕಳವು ಮಾಡುತ್ತಿದ್ದ 6 ಮಂದಿ ಆರೋಈಪಿಗಳನ್ನು   ಹರಿಹರ ತಾಲ್ಲೂಕಿನ ಕೋಮಾರನಹಳ್ಳಿ  ಬಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 6.44 ಲಕ್ಷ ಮೂಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಹಾವೇರಿ ಜಿಲ್ಲೆಯ ಹಿರೇಕೆರೂರು ಗ್ರಾಮ್ದ ರಾಜಾಸಾಬ್ (25), ಈರಾಪುರ ಗ್ರಾಮದ ಅಬ್ದುಲ್, ಹರಿಹರ ತಾಲ್ಲೂನಿಕ ಗಂಗನನರಸಿ ಗ್ರಾಮದ ಅಬ್ದುಲ್ ( 35) ಗುತ್ತೂರು ಕಾಲೋನಿಯ ರಫೀಕ್ (31) ಹಾಗೂ ಶೌಕತ್ ಅಲಿ (22) ಬಂಧಿಸಲಾಗಿದೆ.

ಹರಿಹರ ತಾಲ್ಲೂಕಿನ ನಂದಿತಾವರೆ ಗ್ರಾಮದ ಬಸವನಗೌಡ ಎಂಬುವರ ಮೆನೆಯಲ್ಲಿ ಕಳತನವಾಗಿದೆ ಎಂದು ಮೆಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.  ಈ ದೂರಿನ ಆಧಾರದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಗ್ರಾಮಾಂತರ ಪೊಲೀಸ್ ಠಾಣೆ ಡಿವೈಎಸ್ ಪಿ ನರಸಿಂಹ ತಾಮ್ರಧ್ವಜ ಮತ್ತು ಹರಿಹರ ಇನ್ ಸ್ಪೆಕ್ಟರ್ ಶಿವಪ್ರಸಾದ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಈ ತಂಡವು ಕಳ್ಳರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಂದಿತಾವರೆಯಲ್ಲಿ 95 ಕೆ.ಜಿ. ಅಡಿಕೆ, ದಾವಣಗೆರೆ ಸಮೀಪದ ಹೊನ್ನೂರು ಗ್ರಾಮದಲ್ಲಿ 4.5 ಕ್ವಿಂಟಾಲ್ ಅಡಿಕೆ  ಹರಿಹರ ನಗರದಲ್ಲಿ ಹಸು, ಕರು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ಧಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top
(adsbygoogle = window.adsbygoogle || []).push({});