Connect with us

Dvgsuddi Kannada | online news portal | Kannada news online

ಆದಿಕವಿ ಪ್ರಶಸ್ತಿಗೆ ತರಳಬಾಳು ಶ್ರೀ ಆಯ್ಕೆ

ಪ್ರಮುಖ ಸುದ್ದಿ

ಆದಿಕವಿ ಪ್ರಶಸ್ತಿಗೆ ತರಳಬಾಳು ಶ್ರೀ ಆಯ್ಕೆ

ಡಿವಿಜಿ ಸುದ್ದಿ, ಸಿರಿಗೆರೆ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ನೀಡುವ ಆದಿಕವಿ ಪ್ರಶಸ್ತಿಗೆ ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿದೆ.

ಡಿಸೆಂಬರ್‌ನಲ್ಲಿ ಕಾರ್ಯಕ್ರಮ ಆಯೋಜಿಸಿ  ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪರಿಷತ್ತು  ಪ್ರಕಟಣೆಯಲ್ಲಿ ತಿಳಿಸಿದೆ. ತರಳಬಾಳು ಶ್ರೀಗಳು ಶಿಕ್ಷಣ, ಸಮಾಜಸೇವೆ, ಕೃಷಿ, ಸಾಹಿತ್ಯ ಹೀಗೆ ಎಲ್ಲ ರಂಗಗಳಲ್ಲಿ ಸಕ್ರಿಯವಾಗಿದ್ದಾರೆ.   ಅದರಲ್ಲೂ ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಸಂಸ್ಕೃತದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಶ್ರೀಗಳು 9ನೇ ಅಂತರರಾಷ್ಟ್ರೀಯ ಸಂಸ್ಕೃತೋತ್ಸವದ ಗೌರವಾಧ್ಯಕ್ಷರಾಗಿದ್ದರು. ಕೂಡಲಸಂಗಮದ ಅಳಿವು–ಉಳಿವು, ಬಿಸಿಲು ಬೆಳದಿಂಗಳು, ಯಮುನಾ ತೀರದಲ್ಲಿ, ಕಡಲಾಚೆಯಿಂದ, ಎತ್ತಣ ಮಾಮರ ಎತ್ತಣ ಕೋಗಿಲೆ ಕೃತಿಗಳನ್ನು ರಚಿಸಿದ್ದಾರೆ.ಇದಲ್ಲದೆ ಗಣಕ ಅಷ್ಟಾಧ್ಯಾಯಿನಿ ತಂತ್ರಜ್ಞಾನದಿಂದ  ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ವಚನಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸಂಸ್ಕೃತ, ಕನ್ನಡ, ಇಂಗ್ಲಿಷ್, ಪರ್ಷಿಯನ್ ಹಲವು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});