ಸಿಡ್ನಿ: ಡೆಡ್ಲಿ ಕೊರೊನಾ ವೈರಸ್ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಇದಕ್ಕೆ ಕ್ರೀಡೆಯೂ ಹೊರತಾಗಿಲ್ಲ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನದ ಪಂದ್ಯದಲ್ಲಿ ಖಾಲಿ ಮೈದಾನದಲ್ಲಿ ಕ್ರಿಕೆಟ್ ಆಡಿಸಲಾಯಿತು. ಇದರಿಂದ ಬೌಂಡರಿ, ಸಿಕ್ಸರ್ ಹೊಡೆದ ಬಾಲ್ ಕೊಡುವುದಕ್ಕೆ ಯಾರು ಇಲ್ಲದೇ ಆಟಗಾರರು ಪರದಾಟ ನಡೆಸಿದರು. ಹೀಗಾಗಿ ಏಕದಿನ ಸರಣಿಯನ್ನೇ ರದ್ದುಗೊಳಿಸಲಾಯಿತು.

ಸಿಡ್ನಿಯ ಮೈದಾನದಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 71 ರನ್‍ಗಳಿಂದ ಜಯ ಸಾಧಿಸಿತು. ಕೊರೊನಾ ವೈರಸ್ ಪರಿಣಾಮ ಖಾಲಿ ಮೈದಾನದಲ್ಲಿ ಮೊದಲ ಪಂದ್ಯ ನಡೆಯಿತು. ಸರಣಿ ರದ್ದಾದ ನಂತರ ಕಿವಿ ತಂಡವು ತಮ್ಮ ದೇಶಕ್ಕೆ ಮರಳಿತು.
https://twitter.com/kickstarkiran/status/1238342029744025602
ಆಸ್ಟ್ರೇಲಿಯಾ 7 ವಿಕೆಟ್‍ಗೆ 258 ರನ್ ಗಳಿಸಿತು. ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ 187 ರನ್‍ಗೆ ಸರ್ವಪತನ ಕಂಡಿತು. ಆಸೀಸ್ ವೇಗದ ಬೌಲರ್ ಮಿಚೆಲ್ ಮಾರ್ಷ್ 7 ಓವರ್ ಬೌಲಿಂಗ್ ಮಾಡಿ 27 ರನ್ ನೀಡಿ 3 ವಿಕೆಟ್ ಪಡೆದು ಪಂದ್ಯ ಶ್ರೇಷ್ಠಕ್ಕೆ ಭಾಜನರಾದರು.ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 67 ರನ್, ಆರನ್ ಫಿಂಚ್ 60 ರನ್ ನೆರವಿನಿಂದ 7 ವಿಕೆಟ್‍ಗೆ 258 ರನ್ ಗಳಿಸಿತು.
International + gully cricket#ausvsnz pic.twitter.com/gm9gJ5vdEv
— नवदीप कुमार (@_Oyegabbar) March 13, 2020
ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಬಹಳ ನಿಧಾನವಾಗಿ ಆಟ ಆರಂಭಿಸಿತು. ಮೊದಲ 10 ಓವರ್ ಗಳಲ್ಲಿ ಕೇವಲ 28 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿತು. ಮಾರ್ಟಿನ್ ಗುಪ್ಟಿಲ್ 40 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 96 ರನ್‍ಗಳಿಗೆ ಐದು ವಿಕೆಟ್‍ಗಳನ್ನು ಕಳೆದುಕೊಂಡಿದ್ದ ಕಿವೀಸ್ ಪಡೆಗೆ ಲಾಥಮ್ ಮತ್ತು ಗ್ರ್ಯಾಂಡ್‍ಹೋಮ್ ಆಸರೆಯಾದರು. ಅದರೆ , ಕೊನೆಯಲ್ಲಿ ನ್ಯೂಜಿಲೆಂಡ್ 41 ಓವರ್ ಗಳಲ್ಲಿ 187 ರನ್‍ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪೊಕೊಂಡಿತು.



