ಹೈದರಾಬಾದ್: ಸಂಘ ಪರಿವಾರಕ್ಕೆ ದೇಶದಲ್ಲಿ ವಾಸಿಸುವ 130 ಕೋಟಿ ಜನರೂ ಹಿಂದೂಗಳೇ ಎಂದು ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಹೈದರಾಬಾದಿನಲ್ಲಿ ನಡೆಯುತ್ತಿರುವ ಆರ್‌ಎಸ್ಎಸ್ ನ ವಿಜಯ್ ಸಂಕಲ್ಪ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಯಾವುದೇ ಭಾಷೆ, ಧರ್ಮ ಆಚರಿಸಲಿ. ದೇಶದ 130. ಕೋಟಿ ಜನರು ಹಿಂದೂಗಳೇ. ಅವರು ಹಿಂದೂ ಧರ್ಮ ಆಚರಿಸದಿದ್ದರೂ ಅವರೆಲ್ಲಾ ಸಂಘದ ಪಾಲಿಗೆ ಹಿಂದೂಗಳೇ ಎಂದರು.
हमारे देश में मातृशक्ति की सुरक्षा परिसर में,परिवार में सर्वत्र अक्षुण रहे।सरकार क़ानून बना चुकी है,क़ानून का पालन ठीक से हो।शासन-प्रशासन की ढिलाई ये सब अब चल नहीं चल सकता,लेकिन शासन-प्रशासन पर ही सब छोड़कर नहीं चलेगा…पुरुषों की मातृशक्ति की ओर देखने की दृष्टि शुद्ध होनी चाहिए। pic.twitter.com/F3INADujpx
— RSS (@RSSorg) December 1, 2019
ಭಾರತದ ಸಾಂಪ್ರದಾಯಿಕತೆಯಲ್ಲಿ ಹಿಂದುತ್ವ ಅಡಕವಾಗಿದೆ. ಭಾರತದ ಮೋಕ್ಷ ರಾಜಕೀಯ ಮತ್ತು ರಾಜಕೀಯ ನಾಯಕರಿಂದ ಸಾಧ್ಯವಿಲ್ಲ. ಆದರೆ, ಹಿಂದುತ್ವದಿಂದ ಅದು ಸಾಧ್ಯವಿದೆ. ನಾನು ಹಿಂದೂ ಸಮಾಜ. ಭಾರತ ನನ್ನ ತಾಯಿನಾಡು ಎಂದು ಪರಿಗಣಿಸಿದಾಗ, ನೆಲ, ಜಲ, ಪಶು-ಪಕ್ಷಿ ಪ್ರೀತಿಸುವ ಜನರು ಯಾವುದೇ ಧರ್ಮ, ಭಾಷೆಯನ್ನು ಅನುಸರಿಸಲಿ ಅವರು ಭಾರತಾಂಭೆಯ ಮಕ್ಕಳು ಎಂದು ತಿಳಿಸಿದರು.
ದೇಶದಲ್ಲಿ ರಾಜಕೀಯದಿಂದ ಎಂದಿಗೂ ಬದಲಾವಣೆಯನ್ನು ತರಲು ಸಾಧ್ಯವಿಲ್ಲ. ಆದರೆ ದೇಶದ ಜನರಿಂದ ಬದಲಾವಣೆಯನ್ನು ತರಬಹುದು. ಆರ್‌ಎಸ್ಎಸ್ ಎಲ್ಲರ ಅಭಿವೃದ್ಧಿಯನ್ನು ಬಯಸುತ್ತದೆ. ಜನರನ್ನು ಒಂದುಗೂಡಿಸುವ ಕೆಲಸವನ್ನು ಸಂಘ ಮಾಡುತ್ತದೆ. ಕಾರ್ಯಕರ್ತರು ಪ್ರತಿದಿನ ಒಂದು ಗಂಟೆಯನ್ನು ಧರ್ಮ ವಿಜಯಕ್ಕಾಗಿ ಮೀಸಲಿಡಬೇಕು. ಕಾರ್ಯಕರ್ತರು ಮನೆ ಮನೆಗೆ ತೆರಳಿ ಸಂಘದ ಉದ್ದೇಶವನ್ನು ತಿಳಿಸಬೇಕು ಎಂದು ಹೇಳಿದರು.



