ಸ್ವಿಜರ್ಲೆಂಡ್: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧೂ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಚಿನ್ನ ಗೆದ್ದ ಭಾರತದ ಮೊದಲ ಆಟಗಾರ್ತಿಯಾಗಿ ಹೊರ

ಭಾನುವಾರ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಡೆದ ಫೈನಲ್ ಮುಖಾಮುಖಿಯಲ್ಲಿ ಜಪಾನ್‌ನ ಜಪಾನ್ ನಿನ ನಜೊಮಿ ಒಕುಹರಾ ಅವರ ವಿರುದ್ಧ 21-7, 21-7ರ ಅಂತರದ ಗೆಲುವು ದಾಖಲಿಸಿ ಇತಿಹಾಸ ನಿರ್ಮಿಸಿದ್ರು.
ಪಿ.ವಿ ಸಿಂಧೂ, ಸತತವಾದ ಐದನೇ ಪ್ರಯತ್ನದಲ್ಲಿ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಹೈದರಾಬಾದ್ ಆಟಗಾರ್ತಿ 2017 ಮತ್ತು 2018ರ ಆವೃತ್ತಿಗಳಲ್ಲಿ ಫೈನಲ್ ಪ್ರವೇಶಿಸಿ ಸೋತು ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟಿದ್ದರು.2017ರ ಫೈನಲ್‌ನಲ್ಲಿ ಜಪಾನ್‌ನ ನಜೊಮಿ ಒಕುಹರಾ ವಿರುದ್ಧ ಕೇವಲ ಎರಡು ಅಂಕಗಳ ಹಿನ್ನಡೆಯೊಂದಿಗೆ ಸೋತು ನಿರಾಸೆ ಅನುಭವಿಸಿದ್ದರು.

ಸಿಂಧೂ ಪಂದ್ಯದ ಆರಂಭದಿಂದಲೇ ಎದುರಾಳಿ ಮೇಲೆ ಪ್ರಹಾರ ನಡೆಸಿದ್ರು. ಸಿಂಧೂ ಹೊಡೆತಕ್ಕೆ ಓಕುಹರಾ ಬಳಿ ಉತ್ತರವೇ ಇರಲಿಲ್ಲ. ನಿಖರ ಹೊಡೆತ ಮೂಲಕ ಮೊದಲ ಸುತ್ತನ್ನು 21-7 ರ ಅಂತರದ ಸುಲಭವಾಗಿ ವಶಪಡಿಸಿಕೊಂಡರು. ಇನ್ನು ದ್ವಿತೀಯ ಸುತ್ತಿನಲ್ಲೂ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಸಿಂಧೂ 21-7ರ ಅಂತರದಲ್ಲಿ ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದರು.
<iframe width=”560″ height=”315″ src=”https://www.youtube.com/embed/CIJ2yqUBPZ0″ frameborder=”0″ allow=”accelerometer; autoplay; encrypted-media; gyroscope; picture-in-picture” allowfullscreen></iframe>
Congratulations to @PVSindhu1 on winning Gold in #BWFWorldChampionships women's singles. You are an epitome of hard work and determination.
Congratulations India 🇮🇳 #PVSindhu pic.twitter.com/3At1O90bdF— Sadananda Gowda (@DVSadanandGowda) August 25, 2019



