Connect with us

Dvgsuddi Kannada | online news portal | Kannada news online

ಸ್ಟಾರ್ ಹೆಲ್ತ್ ನಿಂದ ಉಚಿತ  ಆರೋಗ್ಯ ಶಿಬಿರ

ದಾವಣಗೆರೆ

ಸ್ಟಾರ್ ಹೆಲ್ತ್ ನಿಂದ ಉಚಿತ  ಆರೋಗ್ಯ ಶಿಬಿರ

ಡಿವಿಜಿ ಸುದ್ದಿ.ಕಾಂ, ದಾವಣಗೆರೆ: ಸ್ಟಾರ್ ಹೆಲ್ತ್  ಅಂಡ್ ಇನ್ ಶ್ಯೂರೆನ್ಸ್ ಕಂಪನಿಯಿಂದ ಅ.04 ರಂದು ಬೆಳಗ್ಗೆ 10 ರಿಂದ ಸಂಜೆ 04 ಗಂಟೆ ವರೆಗೆ ಕುವೆಂಪು ಕನ್ನಡ ಭವನದಲ್ಲಿ ಉಚಿತ ಉಚಿತ  ಆರೋಗ್ಯ ಶಿಬಿರ ಆಯೋಜಿಸಿದೆ.

ಈ ಬಗ್ಗೆ ಸುದ್ಧಿಗೋಷ್ಠಿ ನಡೆಸಿದ ಕಂಪನಿಯ ಶಾಖಾ ವ್ಯವಸ್ಥಾಪಕ ಎನ್. ಇ ರಮೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.  ತಜ್ಞ ವೈದ್ಯರಾದ ಡಾ. ಶಿವಕುಮಾರ್, ಲೈಫ್ ಲೈನ್ ಬ್ಲೇಡ್ ಬ್ಯಾಂಕ್  ಸಹ  ಆರೋಗ್ಯ ಶಿಬಿರಕ್ಕೆ ಸಹಕಾರ ನೀಡಿದ್ದಾರೆ ಎಂದರು.

ಕಣ್ಣು, ದಂತ, ಕಿವಿ, ಮೂಗು ಗಂಟಲು, ಮೂಳೆ ರಕ್ತ ಉಚಿತ ತಪಾಸಣೆ ನಡೆಸಿ ಸೂಕ್ತ ವೈದ್ಯಕೀಯ ಸಲಹೆ ನೀಡಲಾಗುವುದು. ದಾವಣಗೆರೆ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.  ಸ್ಟಾರ್ ಹೆಲ್ತ್ ಕಂಪನಿ ರಾಜ್ಯದಾದ್ಯಂತ 17 ಕಡೆ ಇಂತಹ ಕ್ಯಾಂಪ್ ಗಳನ್ನು ನಡೆಸಿದ್ದು, ದಾವಣಗೆರೆಯಲ್ಲಿ  ಇದೇ ಮೊದಲ ಬಾರಿ ನಡೆಸಲಾಗುತ್ತಿದೆ. ಈ ಶಿಬಿರಕ್ಕೆ 1000 ಜನ ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಕ್ರಮ್ ಜೋಷಿ ,ಬಸವರಾಜ , ಸುದೀರ್ ಉಪಸ್ಥಿತರಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top