Connect with us

Dvgsuddi Kannada | online news portal | Kannada news online

ದಾಂಪತ್ಯ ಕಲಹಕ್ಕೆ ವಾಸ್ತು ಕೂಡಾ ಕಾರಣವಾಗಬಹುದು…. ಹೇಗೆ ಗೊತ್ತಾ?

ಪ್ರಮುಖ ಸುದ್ದಿ

ದಾಂಪತ್ಯ ಕಲಹಕ್ಕೆ ವಾಸ್ತು ಕೂಡಾ ಕಾರಣವಾಗಬಹುದು…. ಹೇಗೆ ಗೊತ್ತಾ?

ಓಂ “ಶ್ರೀ ಸಾಯಿ ಚಾಮುಂಡೇಶ್ವರಿ ದೇವಿಯ”
ತಮ್ಮ ಸಮಸ್ಯೆಗಳಾದ ಮದುವೆ, ಕುಟುಂಬ ಕಲಹ, ವ್ಯಾಪಾರದಲ್ಲಿ ನಷ್ಟ, ಪ್ರೇಮ ವಿವಾಹ , ಕುಟುಂಬದಲ್ಲಿ ಅಶಾಂತಿ , ಜೀವನದಲ್ಲಿ ಜಿಗುಪ್ಸೆ , ಜೀವನದಲ್ಲಿ ಪದೇ ಪದೇ ಸೋಲು ಕಾಣುವುದು , ಭಯ ಭೀತಿ ,ಶಿಕ್ಷಣ, ವಿದೇಶ ಪ್ರವಾಸ ಇನ್ನು ಹಲವಾರು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಪ್ರೀತಿ ಎನ್ನುವದು ಯಾರು ತಮ್ಮ ಸಂಗಾತಿ ಅಥವಾ ಪ್ರೇಮಿಯಿಂದ ಉತ್ತಮ ಪ್ರೀತಿಯನ್ನು ಪಡೆದುಕೊಳ್ಳುತ್ತಾನೋ ಅವನು ಮಾನಸಿಕವಾಗಿ ಸಾಕಷ್ಟು ಸಮಾಧಾನ ಹಾಗೂ ಚೈತನ್ಯಶೀಲ ಪ್ರವೃತ್ತಿಯನ್ನು ಒಳಗೊಂಡಿರುತ್ತಾನೆ. ತಾನು ಮಾಡುವ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಸಹ ತೋರುವನು.

ಪ್ರೀತಿ ಹಾಗೂ ದಾಂಪತ್ಯ ಜೀವನದಲ್ಲಿ ವಾಸ್ತು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಾಸ್ತು ಎನ್ನುವುದು ನಮ್ಮ ಮೇಲೆ ಗಮನಾರ್ಹ ಬದಲಾವಣೆಯನ್ನು ಬೀರುವುದು. ವಾಸ್ತು ದೋಷ ಉಂಟಾದರೆ ಅದು ನಮ್ಮ ದಾಂಪತ್ಯ ಮತ್ತು ಪ್ರೀತಿಯ ಜೀವನದ ಮೇಲೆ ಗಂಭೀರ ಪ್ರಭಾವ ಬೀರುವುದು. ಕೆಲವು ವಾಸ್ತುವಿನ ಸುಧಾರಣೆ ಹಾಗೂ ವಾಸ್ತುವನ್ನು ಅನುಸರಿಸುವುದರಿಂದ ಪ್ರೀತಿ ಹಾಗೂ ದಾಂಪತ್ಯ ಜೀವನದಲ್ಲಿ ಉಂಟಾಗುವ ಸಮಸ್ಯೆಗಳನ್ನು ತಡೆಯಬಹುದು. ಸಂತೋಷದಾಯಕ ಜೀವನವನ್ನು ಅನುಭವಿಸಬಹುದು ಎಂದು ಹೇಳಲಾಗುವುದು. ಹಾಗಾದರೆ ಆ ಸಂಗತಿಗಳು ಏನು? ಎನ್ನುವುದನ್ನು ತಿಳಿಯಲು ಮುಂದಿನ ವಿವರಣೆಯನ್ನು ಓದಿ.

ವಾಸ್ತುವಿನ ಪ್ರಮುಖ ದಿಕ್ಕುಗಳು

ವಾಸ್ತುವಿನಲ್ಲಿ ಪ್ರಮುಖವಾಗಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಎನ್ನುವ ನಾಲ್ಕು ದಿಕ್ಕುಗಳು ಬರುತ್ತವೆ. ಅವುಗಳಲ್ಲಿ ಆಗ್ನೇಯ, ನೈಋತ್ಯ, ವಾಯುವ್ಯ, ಈಶಾನ್ಯ ಎನ್ನುವ ನಾಲ್ಕು ಉಪ ದಿಕ್ಕುಗಳಿರುತ್ತವೆ. ಈ ದಿಕ್ಕುಗಳಿಗೆ ಅನುಗುಣವಾಗಿ ಮನೆಯ ನಿರ್ಮಾಣ ಹಾಗೂ ಪೀಠೋಪಕರಣಗಳ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ವಾಯು ಮೂಲೆ, ದೇವ ಮೂಲೆ, ಅಗ್ನಿ ಮೂಲೆ, ಕುಬೇರ ಮೂಲೆ ಎನ್ನುವ ಪ್ರಮುಖ ಸ್ಥಳಗಳಲ್ಲಿ ಆಯಾ ವ್ಯವಸ್ಥೆಗಳು ಬರಬೇಕು. ಅವುಗಳಲ್ಲಿ ಉಂಟಾಗುವ ದೋಷ ಅಥವಾ ತೊಂದರೆಯಿಂದಾಗಿ ಕುಟುಂಬದ ಸದಸ್ಯರು ಸಾಕಷ್ಟು ಅನುಚಿತ ಸ್ಥಿತಿಗಳನ್ನು ಎದುರಿಸಬೇಕಾಗುವುದು. ಅದರಲ್ಲೂ ನಾವು ಮಲಗುವ ಕೋಣೆಯ ವಾಸ್ತು ನಮ್ಮ ಮಿದುಳು ಹಾಗೂ ಭಾವನೆಗಳ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುವುದು.

ವೈವಾಹಿಕ ಜೀವನದ ಮೇಲೆ ಪ್ರಭಾವ

ಮನೋಶಾಸ್ತ್ರದ ಪ್ರಕಾರ ವ್ಯಕ್ತಿಯ ಮೆದುಳು ಪ್ರಮುಖವಾಗಿ ಎರಡು ಭಾಗವನ್ನು ಒಳಗೊಂಡಿರುತ್ತದೆ. ಅದರಲ್ಲಿ ಒಂದು ಬಲ ಮೆದುಳು ಮತ್ತು ಎಡ ಮೆದುಳು ಎಂದು. ಬಲ ಮೆದುಳು ಕಲ್ಪನೆ, ಯೋಚನೆ, ವೀಕ್ಷಣೆ, ಕಲೆ, ಸನ್ನೆ, ಶಬ್ದ, ಭಾವನೆ, ಸಂವೇದನೆ ಮತ್ತು ಹಗಲುಗನಸು ಕಾಣುವುದರ ಕೆಲಸವನ್ನು ನಿರ್ವಹಿಸುತ್ತದೆ. ಎಡ ಮೆದುಳು- ತರ್ಕ, ಅನುಕರಣೆ, ಗಣಿತ, ಶಬ್ದಗಳ ಸಂಗ್ರಹಣೆ, ಯೋಚನೆ, ಚಿಂತನೆ ಮತ್ತು ಸತ್ಯ ಸಂಗತಿಗಳ ವಿಚಾರವಾಗಿ ಕೆಲಸ ನಿರ್ವಹಿಸುವುದು. ವಾಸ್ತು ದೋಷದಿಂದಾಗಿ ಮೆದುಳಿನ ಮೇಲೆ ಹಾಗೂ ನಮ್ಮ ಸುಪ್ತ ಮನಸ್ಸಿನ ಮೇಲೆ ಪರಿಣಾಮ ಉಂಟಾಗುವುದು. ಅದು ನಮ್ಮಲ್ಲಿ ನಕಾರಾತ್ಮಕ ಭಾವನೆ ಮೂಡಿಸುವುದರ ಮೂಲಕ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ಹೇಳಲಾಗುವುದು.

ಮಲಗುವ ಕೋಣೆಯ ಸ್ಥಳ
ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ-ಆಗ್ನೇಯ ವಲಯದಲ್ಲಿ ಮಲಗುವ ಕೋಣೆಗೆ ಎಂದಿಗೂ ಆದ್ಯತೆ ನೀಡಬಾರದು. ಅದು ವ್ಯಕ್ತಿಯ ಪ್ರೀತಿಯ ಜೀವನದ ಮೇಲೆ ನಕಾರಾತ್ಮಕ ಪ್ರಭಾವ ಬೀರುವುದು. ಸಂಬಂಧವನ್ನು ಉತ್ತಮವಾಗಿ ಇರಿಸಲು ಪೂರ್ವ ಮತ್ತು ಆಗ್ನೇಯ ಸ್ಥಳವನ್ನು ಆದಷ್ಟು ಸ್ಚಚ್ಛತೆಯಿಂದ ಇರುವಂತೆ ನೋಡಿಕೊಳ್ಳಬೇಕು. ಕುಬೇರ ಮೂಲೆ ಮತ್ತು ದಕ್ಷಿಣದ ವಲಯ ಮಲಗುವ ಕೋಣೆಗೆ ಉತ್ತಮ ಸ್ಥಳವಾಗುವುದು.
ಮಲಗುವ ಕೋಣೆಯಲ್ಲಿ ಒಣಗಿದ ಹೂವುಗಳು

ಮಲಗುವ ಕೋಣೆ 
ಎಂದಿಗೂ ಸ್ವಚ್ಛವಾಗಿ ಹಾಗೂ ಆಹ್ಲಾದ ನೀಡುವಂತಹ ಮನಃಸ್ಥಿತಿಯನ್ನು ಪ್ರೇರೇಪಿಸಬೇಕು. ಹಾಗಾಗಿ ಯಾವುದೇ ಕಾರಣಕ್ಕೂ ಒಣಗಿದ ಹೂವು ಅಥವಾ ಪ್ಲಾಸ್ಟಿಕ್ ಹೂವನ್ನು ಕೋಣೆಯಲ್ಲಿ ಇಡಬಾರದು. ಅವು ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಪ್ರೀತಿಯ ಜೀವನದಲ್ಲಿ ಕಲಹ ಹಾಗೂ ಬೇಸರವನ್ನು ಮೂಡಿಸುವುದು. ಆದಷ್ಟು ತಾಜಾ ಹೂವುಗಳನ್ನು ಮಾತ್ರ ಕೋಣೆಯಲ್ಲಿ ಇಡುವ ಪದ್ಧತಿಯನ್ನು ಮಾಡಿಕೊಳ್ಳಿ.

ಮಲಗುವ ಕೋಣೆಯ ,ಗಾಳಿ ಬೆಳಕು
ಮಲಗುವ ಕೋಣೆಯಲ್ಲಿ ಸದಾ ಕಾಲ ಉತ್ತಮ ಗಾಳಿ-ಬೆಳಕು ಇರುವಂತೆ ನೋಡಿಕೊಳ್ಳಬೇಕು. ಸೂರ್ಯನ ಕಿರಣ ಮಲಗುವ ಕೋಣೆಯಲ್ಲಿ ಸ್ವಲ್ಪ ಸಮಯವಾದರೂ ಬಿದ್ದರೆ ಅದು ಉತ್ತಮ ಸಂಗತಿಯಿಂದ ಕೂಡಿರುತ್ತದೆ. ವೈವಾಹಿಕ ಜೀವನವು ಉತ್ತಮ ಸ್ಥಿತಿಯಲ್ಲಿ ಇರುತ್ತದೆ. ಮಲಗುವಾಗ ತಲೆಯು ದಕ್ಷಿಣ ದಿಕ್ಕಿಗೆ ಇರುವಂತೆ ನೋಡಿಕೊಳ್ಳಿ. ದೇವರ ಚಿತ್ರ ಅಥವಾ ಮೂರ್ತಿಯನ್ನು ಮಲಗುವ ಕೋಣೆಯಲ್ಲಿ ಇಟ್ಟು ಪೂಜಿಸಬಾರದು.

ಅನಗತ್ಯ ವಸ್ತುಗಳಿಂದ ತುಂಬಬೇಡಿ

ಮನೆಯಲ್ಲಿ ಅಗತ್ಯ ಇರುವ ವಸ್ತುಗಳನ್ನು ಮಾತ್ರ ಇರಿಸಿ. ಅನಗತ್ಯವಾಗಿ ಎಲ್ಲಾ ವಸ್ತುಗಳನ್ನು ತಂದು ತುಂಬಿಕೊಂಡರೆ, ಮನೆಯಲ್ಲಿ ಧನಾತ್ಮಕ ಶಕ್ತಿ ಇರುವುದಿಲ್ಲ. ಋಣಾತ್ಮಕ ಶಕ್ತಿಯ ವಾಸವಾಗುವುದು. ಹಾಗಾಗಿ ಆದಷ್ಟು ಮನೆಯನ್ನು ಸ್ವಚ್ಛವಾಗಿರಿಸಿ, ಉತ್ತಮ ಗಾಳಿ-ಬೆಳಕಿನ ಹರಿವು ಇರುವಂತೆ ನೋಡಿಕೊಳ್ಳಿ. ಅದು ನಿಮ್ಮ ಜೀವನವನ್ನು ಸುಧಾರಿಸುವುದು. ಪ್ರೀತಿಯ ಜ್ಯೋತಿಯು ಬೆಳಗುವುದು.

ಮಲಗುವ ಕೋಣೆಯ ಒಳಗೆ ನಿಮ್ಮ ಪ್ರೀತಿ ಪಾತ್ರರು ಆಗಮಿಸಿದಾಗ ಅವರ ಮಾನಸಿಕ ಭಾವನೆ ಹಾಗೂ ಸಂವೇದನೆಗಳು ಉತ್ತಮ ಹಾಗೂ ಶಾಂತಿ ದಾಯಕವಾಗಿ ಇರಬೇಕು. ಹಾಗೆ ಮಾಡಲು ನೀವು ಮಲಗುವ ಕೋಣೆಯನ್ನು ಸುಗಂಧದಿಂದ ಕೂಡಿರುವಂತೆ ಮಾಡಿ. ಮಲಗುವ ಹಾಸಿಗೆಯ ಮೇಲೆ ಸದಾ ಕಾಲ ಎರಡು ತಲೆ ದಿಂಬು ಇರಿಸುವುದನ್ನು ಮರೆಯದಿರಿ. ಮಲಗುವ ಹಾಸಿಗೆಗೆ ಬರುವಾಗ ಕೈ ಕಾಲುಗಳನ್ನು ತೊಳೆದು ಬರುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ನಮಗೆ ಅಂಟಿದ್ದ ಋಣಾತ್ಮಕ ಶಕ್ತಿಯು ಹಾಸಿಗೆಯನ್ನು ಪ್ರವೇಶಿಸದು.

ಮಲಗುವ ಕೋಣೆಯಲ್ಲಿ ಸ್ನಾನ ಗೃಹ
ಇತ್ತೀಚಿನ ದಿನದಲ್ಲಿ ಮಲಗುವ ಕೋಣೆಯಲ್ಲಿಯೇ ಸ್ನಾನ ಗೃಹ ಹಾಗೂ ಶೌಚಾಲಯವನ್ನು ಹೊಂದುವುದು ಸಾಮಾನ್ಯವಾದ ಸಂಗತಿಯಾದೆ. ಇದು ಕೆಲವು ವಾಸ್ತು ದೋಷವನ್ನು ಉಂಟುಮಾಡುತ್ತವೆ. ಇದರಿಂದ ವ್ಯಕ್ತಿ ತನ್ನ ಪ್ರೀತಿ ಅಥವಾ ವೈವಾಹಿಕ ಜೀವನದಲ್ಲಿ ನಕಾರಾತ್ಮಕ ಫಲವನ್ನು ಪಡೆದುಕೊಳ್ಳುವನು. ಕೋಣೆಯೊಳಗೆ ಇರುವ ಶೌಚಾಲಯದ ಬಾಗಿಲನ್ನು ಸದಾ ಕಾಲ ತೆರೆದಿಡದಿರಿ. ಶೌಚಾಲಯ ಹಾಗೂ ಸ್ನಾನ ಗೃಹದ ಒಳಗೆ ಇರುವ ಋಣಾತ್ಮಕ ಶಕ್ತಿಯ ಹರಿವು ಮಲಗುವ ಕೋಣೆಯ ವಾತಾವರಣವನ್ನು ಕೆಡಿಸುತ್ತವೆ. ಅದರ ನಕಾರಾತ್ಮಕ ಪರಿಣಾಮಕಾರಿಯಾಗುವುದು.

ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top