Connect with us

Dvg Suddi-Kannada News

ಒಂದು ರನ್ ನೀಡದೆ 6 ವಿಕೆಟ್ ಕಿತ್ತು ದಾಖಲೆ ಬರೆದ `ಮಹಿಳಾ ಕ್ರಿಕೆಟರ್’

ಕ್ರೀಡೆ

ಒಂದು ರನ್ ನೀಡದೆ 6 ವಿಕೆಟ್ ಕಿತ್ತು ದಾಖಲೆ ಬರೆದ `ಮಹಿಳಾ ಕ್ರಿಕೆಟರ್’

ಡಿವಿಜಿ ಸುದ್ದಿ, ನೇಪಾಳ:  ಒಂದು ರನ್ ನೀಡದೆ ಆರು ವಿಕೆಟ್ ಪಡೆಯುವ ಮೂಲಕ ನೇಪಾಳದ ಬೌಲರ್ ಮಹಿಳಾ ಕ್ರಿಕೆಟರ್ ಅಂಜಲಿ ಚಾಂದ್ ವಿಶ್ವ ದಾಖಲೆ ಬರೆದಿದ್ದಾರೆ.

ಸೌತ್ ಏಷ್ಯನ್ ಗೇಮ್ಸ್ ಟೂರ್ನಿಯಲ್ಲಿ ಸೋಮವಾರ ನಡೆದ ಮಾಲ್ಡೀವ್ಸ್  ತಂಡದ ವಿರುದ್ಧದ ಟಿ-20 ಪಂದ್ಯಾವಳಿಯಲ್ಲಿ  ಅಂಜಲಿ ಈ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ 8 ಜನರ ಆಟಗಾರರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದು ಇನ್ನೊಂದು ದಾಖಲೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಮಾಲ್ಡೀವ್ಸ್ ಆರಂಭಿಕ ಆಘಾತ ಅನುಭವಿಸಿತು. 10.1 ಓವರ್ ಆಡಿದ ಮಾಲ್ಡೀವ್ಸ್ , ಹಮ್ಜಾ ನಿಯಾಜ್ 9 ರನ್ , ಅಫ್ತಾ ಅಬ್ದುಲ್ಲಾ 4 ರನ್ ಸಹಾಯದಿಂದ 16 ಗಳಿಸಲು ಶಕ್ತವಾಯಿತು. ಅಂಜಲಿ ಚಾಂದ್ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದ್ದು, 2.1 ಓವರ್ ಹಾಕಿ ಒಂದೇ ಒಂದು ನೀಡದೆ ಎರಡು ಮೆಡನ್ ಸಹಿತ  6 ವಿಕೆಟ್ ಕಿತ್ತಿದ್ದಾರೆ. 16 ರನ್‍ಗಳ ಮೊತ್ತವನ್ನು ನೇಪಾಳ ತಂಡ ಕೇವಲ 5 ಎಸೆತಗಳಲ್ಲಿ ಪೇರಿಸಿ, 10 ವಿಕೆಟ್‍ಗಳಿಂದ ಭರ್ಜರಿ ಗೆಲವು ಸಾಧಿಸಿದೆ.

Click to comment

Leave a Reply

Your email address will not be published. Required fields are marked *

More in ಕ್ರೀಡೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top