ಡಿವಿಜಿ ಸುದ್ದಿ, ದಾವಣಗೆರೆ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ನಗರದ ಹಸ್ಕೂಲ್ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮೊದಲು ರಾಷ್ಟ್ರ ಗೀತೆ ಗೌರವ ಸಲ್ಲಿಸಲಾಯಿತು. ನಂತರ ಪೌರತ್ವ ಕಾಯ್ದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಂಖಡರು ತೀವ್ರ ವಾಗ್ದಾಳಿ ನಡೆಸಿದರು. ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಚ್ ಆಂಜನೇಯ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಭಾಗಿಯಾಗಿದ್ರು.
ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಪೌರತ್ವ ಕಾಯ್ದೆಯನ್ನು ಇಡೀ ದೇಶಾದ್ಯಂತ ವಿರೋಧ ಮಾಡುಲಾಗುತ್ತಿದೆ. ಸ್ವಾತಂತ್ರ್ಯಕ್ಕಾಗಿ ಯಾವ ರೀತಿ ಆಂದೋಲನ ನಡೆಯಿತೋ, ಅದೇ ರೀತಿ ಪೌರತ್ವ ಕಾಯ್ದೆಗೆ ಹೋರಾಟ ನಡೆಯುತ್ತಿದ್ದು, ದೇವರು ಬಿಜೆಪಿ ಅವರಿಗೆ ಒಳ್ಳೆಯ ಬುದ್ದಿ ಕೊಟ್ಟು ಪೌರತ್ವ ಕಾಯ್ದೆ ವಾಪಸ್ಸು ಪಡೆಯುವಂತಾಗಲಿ.
ಜನಗಳ ವಿರೋಧ ಲೆಕ್ಕಿಸದೇ ತಮ್ಮ ಹಠಕ್ಕೆ ಬಿದ್ದರೆ, ಬಿಜೆಪಿ ಸರ್ಕಾರ ಹೋಗುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಸಾಕಷ್ಟು ಜನರನ್ನು ಬಲಿ ಪಡೆದಿದ್ದಾರೆ, ನಾವೇ ಸರ್ವಾಧಿಕಾರಿಗಳೂ ಎಂಬುದನ್ನು ಬಿಟ್ಟು ಪೌರತ್ವ ಕಾಯ್ದೆಯನ್ನು ವಾಪಸ್ಸು ಪಡೆಯಬೇಕು. ಬಿಜೆಪಿ ಮುಕ್ತ ಭಾರತ ಆಗಬೇಕು, ನಾವೆಲ್ಲ ಒಂದಾದರೆ ಅದು ಸಾಧ್ಯ ಎಂದರು.
ಮಾಜಿ ಸಚಿವ ಎಸ್.ಆಂಜನೇಯ ಮಾತನಾಡಿ, ಹಿಂದೂ ಮುಸ್ಲಿಂ ಇಬ್ಬರೂ ಒಂದೇ, ಆದರೇ ನಮ್ಮನ್ನು ಬೇರ್ಪಡಿಸುವ ಕೆಲಸ ಪ್ರಧಾನಿ ಮೋದಿ, ಷಾ ಮಾಡಬಾರದು. ಇದು ಜನ ವಿರೋಧಿ ಕೆಲಸ.ಆರ್ ಎಸ್ ಎಸ್ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಉದಾಹರಣೆ ಇಲ್ಲ. ಅಮೆರಿಕಾದಲ್ಲಿ ಪೌರತ್ವ ಕಾಯ್ದೆ ಜಾರಿ ಬಂದು ಅಲ್ಲಿರುವ ಭಾರತಿಯರು ವಾಪಸ್ಸು ಬಂದರೆ ಅವರಿಗೆ ಪಕೋಡ ಮಾರೋಕೆ ಬಿಡ್ತೀರಾ ಎಂದು ಪ್ರಶ್ನಿಸಿದರು.



