Connect with us

Dvg Suddi-Kannada News

ಗೂಂಡಾ, ಗೂಂಡಾ ಅಂತಾ ಕರೆಯೋ ತಪ್ಪೇನು ಮಾಡಿದ್ದೇನೆ; ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಎಂದು ಕಣ್ಣಿರಿಟ್ಟ ನಲಪಾಡ್

ಪ್ರಮುಖ ಸುದ್ದಿ

ಗೂಂಡಾ, ಗೂಂಡಾ ಅಂತಾ ಕರೆಯೋ ತಪ್ಪೇನು ಮಾಡಿದ್ದೇನೆ; ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಎಂದು ಕಣ್ಣಿರಿಟ್ಟ ನಲಪಾಡ್

ಡಿವಿಜಿ ಸುದ್ದಿ, ಬೆಂಗಳೂರು: ಮೇಖ್ರಿ ಸರ್ಕಲ್ ಬಳಿ ನಡೆದಿದ್ದ ಕಾರು ಅಪಘಾತ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ.  ಆ ದಿನದ ನಾನು ಏನೂ ಮಾಡಿಲ್ಲ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ ಎಂದು ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಕೈ ಮುಗಿದು ಮನವಿ ಮಾಡಿಕೊಂಡಿದ್ದಾನೆ.

ಈ ಹಿಂದಿನ ಘಟನೆಯಿಂದ ನಾನು ತುಂಬಾ ನೊಂದಿದು, ಬದಲಾಗಿದ್ದೀನಿ. ಆದರೆ ಪತ್ರಿಕೆಯಲ್ಲಿ ಇಬ್ಬರನ್ನು ಕೊಲೆ ಮಾಡಿದ್ದಾರೆ ಎಂದು ಬರೆದಿದ್ದಾರೆ. ನಮ್ಮ ಮಾವ, ಪತ್ನಿಗೆ ಏನು ಎಂದು ಉತ್ತರ ಕೊಡಲಿ. ಏನು ಮಾಡಲು ಹೊರಟ್ಟಿದ್ದೀರಿ? ನಾನೇನು ಮನುಷ್ಯ ಅಲ್ವ, ನನಗೆ ಮನಸ್ಸಿಲ್ವ. ಗೂಂಡಾ, ಗೂಂಡಾ, ಗೂಂಡಾ ಎಂದರೆ ನಾನೇನು ಮಾಡಿದ್ದೀನಿ ಎಂದು ಕಣ್ಣೀರು ಹಾಕಿದನು.

ಪ್ರಕರಣ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿದ ನಲಪಾಡ್, ಭಾನುವಾರ ಘಟನೆ ನಡೆದಾಗ ನಾನು  ಹಿಂದಿನ ಕಾರಿನಲ್ಲಿನದ್ದೆ, ಅಪಘಾತವಾದ ತಕ್ಷಣ ನಾನೇ ಸಹಾಯ ಮಾಡಿ, ಅವರನ್ನು ಕಳುಹಿಸಿಕೊಟ್ಟಿದ್ದೇನೆ .  ಈ ಪ್ರಕರಣದ  ಹಿಂದೆ ಯಾರೂ ಏನೋ ಪ್ಲಾನ್ ಮಾಡಿದ್ದಾರೆ. ಅಪಘಾತ ಆಕಸ್ಮಿಕವಾಗಿ ನಡೆದಿದೆ ಎಂದಿದ್ದಾನೆ. ನಾನು ಗಾಡಿ ಓಡಿಸಿಲ್ಲ. ನನಗೆ 84 ವರ್ಷದ ತಾತ, ಅಜ್ಜಿ ಇದ್ದಾರೆ. ಪತ್ರಿಕೆಯಲ್ಲಿ ನನ್ನನ್ನು ಗುಂಡಾ, ಕೊಲೆಗಾರ  ಅಂತಾ ಬರೆಯುತ್ತಾರೆ. ಅಂತಹ ತಪ್ಪು ನಾನು ಏನು ಮಾಡಿದ್ದೇನೆ.  ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಎಂದು ಭಾವುಕರಾಗಿ ಕೈ ಮುಗಿದು ನಲಪಾಡ್ ಮನವಿ ಮಾಡಿದ್ದಾನೆ.

ನನ್ನ ಕಾರು ಓಡಿಸಿರುವುದು ಬಾಲು, ಅದು ಎಲ್ಲರಿಗೂ ಗೊತ್ತಿದೆ. ನಾನು ಎಲ್ಲೇ ಹೋದರು ಬಾಲುನೇ ಕಾರು ಓಡಿಸುವುದು. ಬೇಕಿದ್ದರೆ ವಿಡಿಯೋ ನೋಡಿ ಅವನೇ ಕಾರು ಓಡಿಸಿರುವುದು. ನಾನು ಕಾರು ಓಡಿಸಿಲ್ಲ. ಒಂದೇ ಒಂದು ಸಾಕ್ಷಿಯಿದ್ದರೂ ಸಾಬೀತುಪಡಿಸಿ, ನಾನು ನ್ಯಾಯಾಲಯಕ್ಕೆ ಹೋಗಿ ಅವರ ವಿರುದ್ಧ ಹೋರಾಟ ಮಾಡುತ್ತೇನೆ. ಇದರ ಹಿಂದೆ ಯಾರದ್ದೋ ಕೈವಾಡ ಇದೆ. ಮತ್ತೆ ನನ್ನನ್ನು ಜೈಲಿಗೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ. ಪರವಾಗಿಲ್ಲ ಜನರು ನೋಡಿದ್ದಾರೆ. ಅವರು ನನ್ನ ಜಾಮೀನು ಕ್ಯಾನ್ಸಲ್ ಮಾಡಿ ಜೈಲಿಗೆ ವಾಪಸ್ ಹೋಗುವಂತೆ ಮಾಡಿದರೂ ನಾನು ಹೋಗುತ್ತೇನೆ ಎಂದರು. ಕಾರು ಅಪಘಾತ ಆಗಿರುವುದು.  ಜಗತ್ತಿನಲ್ಲಿಯೇ  ಮೊದಲ ಕೇಸ್ ಅಲ್ಲ. ನಾವೇ ಆಸ್ಪತ್ರೆಗೆ ದಾಖಲಿಸಿದ್ದೇವೆ. ಅವರ ಖರ್ಚುನ್ನು ನಾವೇ ನೋಡಿಕೊಂಡಿದ್ದೇವೆ ಎಂದು ವಿವರಿಸಿದರು.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top