Connect with us

Dvgsuddi Kannada | online news portal | Kannada news online

ಆಂಧ್ರಪ್ರದೇಶದಲ್ಲಿನ ತಮ್ಮ ಮನೆಯನ್ನು ಕಂಚಿ ಮಠಕ್ಕೆ ದಾನ ಮಾಡಿದ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ

ಪ್ರಮುಖ ಸುದ್ದಿ

ಆಂಧ್ರಪ್ರದೇಶದಲ್ಲಿನ ತಮ್ಮ ಮನೆಯನ್ನು ಕಂಚಿ ಮಠಕ್ಕೆ ದಾನ ಮಾಡಿದ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ

ಹೈದರಾಬಾದ್: ಪ್ರಸಿದ್ಧ ಬಹುಭಾಷಾ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಆಂದ್ರಪ್ರದೇಶದಲ್ಲಿರುವ ತಮ್ಮ ಮನೆಯನ್ನು ಕಂಚಿ ಮಠದ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿಗೆ ದಾನ ಮಾಡಿದ್ದಾರೆ.

ಆಂಧ್ರ ಪ್ರದೇಶದ ನೆಲ್ಲೂರ್ ನಲ್ಲಿರುವ ತಮ್ಮ ಮನೆಯನ್ನು ದಾನ ಮಾಡುತ್ತೇನೆ ಎಂದು ಈ ಮುಂಚೆಯೇ ಹೇಳಿಳಿದ್ದರು. ಅದರಂತೆ ಈಗ ಕಂಚಿ ಮಠಕ್ಕೆ ಮನೆಯನ್ನು ದಾನ ಮಾಡಿದ್ದಾರೆ. ತಮ್ಮ  ಮನೆಯಲ್ಲಿ ಸಂಸ್ಕೃತ ಹಾಗೂ ವೇದ ಪಾಠ ಶಾಲೆ ಮಾಡಬೇಕು ಎಂಬುದು ಎಸ್‍ಪಿಬಿ ಅವರ ಆಸೆಯಾಗಿತ್ತು. ಧಾರ್ಮಿಕ ವಿಚಾರಗಳ ಬಗ್ಗೆ ಎಸ್‍ಪಿಬಿ ಅವರು ಹೆಚ್ಚು ಆಸಕ್ತಿ ಹೊಂದಿದ್ದು, ಸಂಸ್ಕೃತ ಮೇಲೆ ಸಾಕಷ್ಟು ಪ್ರೀತಿ ಇದೆ. ಹೀಗಾಗಿ ತಮ್ಮ ಮನೆಯನ್ನು ದಾನ ಮಾಡಿದ್ದಾರೆ. ಈ ವಿಷಯ ತಿಳಿದ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯ್ಕತಪಡಿಸಿದ್ದಾರೆ.

ಎಸ್‍ಪಿಬಿ  ಅವರು ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ಅತಿ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಒಟ್ಟು 16 ಭಾಷೆಯಲ್ಲಿ 40,000 ಹಾಡನ್ನು ಹಾಡಿದ್ದಾರೆ. ಸಿನಿಮಾಗಳಲ್ಲಿ ಅತಿ ಹೆಚ್ಚು ಹಾಡನ್ನು ಹಾಡಿ ಗಿನ್ನಿಸ್ ದಾಖಲೆ ಬರೆದಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top