Connect with us

Dvg Suddi-Kannada News

ಕನ್ನಡಿಗರನ್ನು ಹೊರ ಹಾಕುತ್ತಿರುವ ಐಟಿಸಿ ಕಂಪನಿ ವಿರುದ್ಧ ಪ್ರತಿಭಟನೆ

ದಾವಣಗೆರೆ

ಕನ್ನಡಿಗರನ್ನು ಹೊರ ಹಾಕುತ್ತಿರುವ ಐಟಿಸಿ ಕಂಪನಿ ವಿರುದ್ಧ ಪ್ರತಿಭಟನೆ

ಡಿವಿಜಿಸುದ್ದಿ.ಕಾಂ, ದಾವಣಗೆರೆ:

ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿರುವ ಐಟಿಸಿ ಕಂಪನಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಕಾರ್ಯಕರ್ತರು ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಐಟಿಸಿ ಕಂಪನಿಯಲ್ಲಿ  ನವೀನ್ ಮಲ್ಲೇನಹಳ್ಳಿ ಎಂಬ ಉದ್ಯೋಗಿ  ಕನ್ನಡ ರಾಜ್ಯೋತ್ಸವ ಆಚರಿಸಿದ್ದ ಎಂಬ ಏಕಾಏಕಿ ಕಾರಣಕ್ಕೆ,  ನೀಡದೆ ನವೀನ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಐಟಿಸಿ ಕಂಪನಿ ನಮ್ಮ ನಾಡಿನ ನೆಲ, ಜಲವನ್ನು ಉಪಯೋಗಿಸಿಕೊಳ್ಳುತ್ತಾರೆ. ಆದರೆ, ಕನ್ನಡಿಗರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ಕರ್ನಾಟಕ ರಕ್ಷಣ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ವಿಷಯದ ಬಗ್ಗೆ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕಾಗಿ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಜಯದೇವವೃತ್ತದಿಂದ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಬಿ.ಪರಮೇಶ್ ಮೇಟಿ, ಗೌರವಾಧ್ಯಕ್ಷ, ಮೈಲಪ್ಪ, ಹೆಚ್.ಎನ್, ಅನ್ವರ್, ಜಿಲಾನಿ ಮೌಲಿಮನಿ, ರವಿನಾಯಕ, ನಾಗರಾಜಪ್ಪ, ಫರಿದ್ ಖಾನ್, ಕೆ.ರಫೀಕ್, ಬಾಷಾ, ಕುಮಾರ್, ಶ್ರೇಯಸ್, ರೆಹಮತ್ ವುಲ್ಲಾ, ಹರೀಶ್, ಜೋಸೆಫ್ ಅಂಥೋನಿ, ಶಂಕರ್ ಎರೆಸೀಮೆ, ರಾಘವೇಂದ್ರ ರೆಡ್ಡಿ ಮತ್ತಿತರರಿದ್ದರು

 

 

 

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top