ಡಿವಿಜಿ ಸುದ್ದಿ, ಮಲ್ಪೆ: ಉತ್ತಮ ಕಬಡ್ಡಿ ಪಟುವಾಗಿದ್ದ ಯುವಕ ಮೀನುಗಾರಿಕೆಯಲ್ಲಿ ವಿಪರೀತ ನಷ್ಟ ಹಿನ್ನೆಲೆ ಮನನೊಂದು ಬೋಟ್ ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ಪಾವಂಜಿಗುಡ್ಡೆ ನಿವಾಸಿ ಭಾಗ್ಯರಾಜ್ (27) ಎಂದು ಗುರುತಿಸಲಾಗಿದೆ. ತನ್ನ ತಂದೆಯು ಎರಡು ಬೋಟ್ ನಲ್ಲಿ ರೈಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಭಾಗ್ಯರಾಜ್ ಇತ್ತೀಚೆಗೆ ಸಾಲ ಮಾಡಿ ಮನೆ ಮತ್ತು ಮೀನುಗಾರಿಕಾ ಬೋಟ್‌ನ್ನು ಖರೀದಿಸಿದ್ದನು. ಆದರೆ ಲಾಕ್ ಡೌನ್ ನಿಂದಾಗಿ ವ್ಯವಹಾರದಲ್ಲಿ ತೀರ ನಷ್ಟ ಉಂಟಾಗಿದ್ದರಿಂದ ಮಾನಸಿಕವಾಗಿ ಬಂದರಿನಲ್ಲಿ ಬೋಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಭಾಗ್ಯರಾಜ್ ಉತ್ತಮ ಕಬಡ್ಡಿ ಪಟುವಾಗಿದ್ದ.ಕಬಡ್ಡಿ ಆಟದಲ್ಲಿ ಆನೇಕ ಪ್ರಶಸ್ತಿಗಳನ್ನು ಪಡೆದಿದ್ದರು.ಆದರೆ ಮಂಗಳವಾರ ರಾತ್ರಿ 11 ಗಂಟೆಗೆ ಮನೆಯಿಂದ ಹೋಗಿ ಬೋಟ್‌ನಲ್ಲೇ ಆತ್ಮಹತ್ಯೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.



