Connect with us

Dvg Suddi-Kannada News

ನಿಮಗೆ ಇಷ್ಟಪಟ್ಟವರ ಜೊತೆ ಮದುವೆ ಆಗುತ್ತಿಲ್ಲವೇ?

ಪ್ರಮುಖ ಸುದ್ದಿ

ನಿಮಗೆ ಇಷ್ಟಪಟ್ಟವರ ಜೊತೆ ಮದುವೆ ಆಗುತ್ತಿಲ್ಲವೇ?

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಎಲ್ಲರ ಜೀವನದ ಒಂದು ಪ್ರಮುಖ ಅಂಶ ಮದುವೆ. ವಿವಾಹ ತಡವಾಗಲು ಜನ್ಮಜಾತಕದಲ್ಲಿ ಜನ್ಮ ಲಗ್ನ ಅಥವಾ ಜನ್ಮ ರಾಶಿಯಿಂದ ಎಳನೇ ಮನೆಯಲ್ಲಿ ಶನಿ ಇರುವುದು ಅಥವಾ ಏಳನೇ ಮನೆಯ ಅಧಿಪತಿ ಶನಿ ಆಗಿರುವುದು. ಇಂಥ ಪರಿಸ್ಥಿತಿಗಳಲ್ಲಿ ವಯಸ್ಸು ಮೂವತ್ತು ದಾಟುವ ತನಕ ವಿವಾಹ ಕಷ್ಟಸಾಧ್ಯ ಇಲ್ಲಿ ನಾವು ಶನಿಗ್ರಹ ದೋಷಪರಿಹಾರ ಹೊರತುಪಡಿಸಿ ಇನ್ಯಾವ ಪರಿಹಾರಗಳನ್ನು ಮಾಡಿದರೂ ಫಲ ದುರ್ಲಭ. ಶನೈಶ್ಚರ ದೋಷ ಪರಿಹಾರಕ್ಕಾಗಿ ಶಮೀಸಮಿತ್ತು ಹಾಗು ಕೃಸರಾನ್ನ ದ್ರವ್ಯದಲ್ಲಿ ಶನಿವಾರದಂದು ಶನಿ ಶಾಂತಿ ಹವನ ಮಾಡಿಸುವುದು. ಆದರೆ ಯಾವುದೇ ಕಾರಣಕ್ಕೂ ಸಪ್ತಮಾಧಿಪತಿಮ ರತ್ನವನ್ನು ಧರಿಸಬಾರದು.

ಇನ್ನೂ ವಿವಾಹಕ್ಕೆ ವಿಘ್ನ ಮಾಡುವ ಇನ್ನೊಂದು ಪ್ರಮುಖ ಕಾರಣ ಜಾತಕದಲ್ಲಿ ಬರುವ ಸರ್ಪದೋಷ ಸರ್ಪದೋಷಗಳಲ್ಲಿ ಹತ್ತು ಹಲವು ವಿಧಿಗಳಿವೆ. ಆದರೆ ಅವುಗಳಲ್ಲಿ ವಿವಾಹಕ್ಕೆ ವಿಘ್ನ ಮಾಡುವ ಸರ್ಪದೋಷವೇ ಕಾಳ ಸರ್ಪದೋಷ. ಇಲ್ಲಿ ಗಮನಿಸಲೇ ಬೇಕಾದ ಅಂಶ ಎಂದರೆ ಆಶ್ಲೇಷಾ ಬಲಿ ಪೂಜೆ ಅಥವಾ ಸರ್ಪ ಸಂಸ್ಕಾರ ಕಾಳಸರ್ಪ ದೋಷಕ್ಕೆ ಪರಿಹಾರ ಅಲ್ಲ. ಅಷ್ಟೇ ಅಲ್ಲ ಕ್ಷೇತ್ರಗಳಲ್ಲಿ ಕೇವಲ ರಾಹುಗ್ರಹಕ್ಕೆ ಹಾಗೂ ಕೇತುಗ್ರಹಕ್ಕೆ ಒಂದು ಅಷ್ಟೋತ್ತರ ಪೂಜೆ ಮಾಡಿದರೆ ಕಾಳಸರ್ಪದೋಷಕ್ಕೆ ಪರಿಹಾರ ಆಗೊದಿಲ್ಲ. ತಾವಾಗಲೀ ತಮ್ಮ ಕುಟುಂಬದವರಿಂದಾಗಲೀ ಸರ್ಪ ವಧೆ ಆಗಿದ್ದಲ್ಲಿ ಸರ್ಪಸಂಸ್ಕಾರದ ಅವಶ್ಯಕತೆ ಇರುತ್ತದೆ ಹಾಗೂ ನಾಗದೇವತಾ ಆರಾಧನೆಗಳಲ್ಲಿ ಆಶ್ಲೇಷಾ ಬಲಿ ಪೂಜಾ ಬರುತ್ತದೆ. ಕಾಳ ಸರ್ಪ ದೋಷ ಪರಿಹಾರವಾಗಿ ವಿವಾಹ ಸಿದ್ಧಿಯಾಗಲು ವೇದೋಕ್ತ ಮಂತ್ರಗಳಿಂದ ಕಾಳಸರ್ಪದೋಷ ಪರಿಹಾರ ಶಾಂತಿ ಹವನ ಮಾಡಿಸಬೇಕು.

ಇನ್ನೂ ಮಾತುಕತೆ ಹಂತದಲ್ಲೇ ಮದುವೆಗಳು ಮುರಿದು ಬೀಳಲು ಮತ್ತೊಂದು ಪ್ರಮುಖವಾದ ಕಾರಣ ಜನ್ಮಲಗ್ನ ಅಥವಾ ರಾಶಿಯಿಂದ ಏಳನೇ ಮನೆಯಲ್ಲಿ ಕೇತುಗ್ರಹ ಕುಟುಂಬದಲ್ಲಿ ಇರುವ ಪ್ರೇತಭಾಧೆಗಳಿಂದ ವಿವಾಹದಲ್ಲಿ ತೊಂದರೆಗಳನ್ನು ಸಪ್ರಮದ ಕೇತು ತಿಳಿಸುತ್ತಾನೆ. ಇದಕ್ಕಾಗಿ ಗೋಕರ್ಣಾದಿ ಕ್ಷೇತ್ರಗಳಲ್ಲಿ ಪ್ರೇತೋದ್ಧಾರ-ಮೋಕ್ಷನಾರಾಯಣ ಬಲಿಪೂಜಾ ಆಚರಿಸುವುದು ಪರಿಹಾರ. ಇಲ್ಲಿ ತಿಳಿಯಬೇಕಾದ ಇನ್ನೊಂದು ಅಂಶ ಎಂದರೆ ಕೇತುಗ್ರಹ ಅಭಿಮಾನಿ ದೇವತೆ ಮಹಾಗಣಪತಿ ಆಗಿರುವುದರಿಂದ ಅಷ್ಟದ್ರವ್ಯ ಮಹಾಗಣಪತಿ ಹವನದಿಂದಲೂ ಸಹ ನಿರ್ವಘ್ನವಾಗಿ ವಿವಾಹ ಸಿದ್ಧಿಯಾಗುತ್ತದೆ.
ಇನ್ನೂ ಸರ್ವರಿಗೂ ಅನ್ವಯಿಸುವಂತೆ ಹೇಳಬೇಕಾದರೆ ಉತ್ತಮ ವಿವಾಹ ಸಿದ್ಧಿ ಆಗಬೇಕು ಎಂದಾದಲ್ಲಿ ಅವರ ಜನ್ಮಲಗ್ನ ಹಾಗು ಜನ್ಮರಾಶಿಯ ಏಳನೇ ಮನೆಯ ಅಧಿಪತಿ ಗ್ರಹವನ್ನು ಹಾಗೂ ಆಗ್ರಹದ ಅಭಿಮಾನಿ ದೇವತೆಯ ಆರಾಧನೆ ಮಾಡಬೇಕು. ಹೇಗೆ ಅಂದರೆ

ಮೇಷ-ವೃಶ್ಚಿಕ ಲಗ್ನ ಅಥವಾ ರಾಶಿಯವರು ಶುಕ್ರಗ್ರಹದ ಆರಾಧನೆ, ಲಕ್ಷ್ಮಿನಾರಾಯಣ ಹೃದಯ ಪಾರಾಯಣ ದುರ್ಗಾ ಆರಾಧನೆ, ಚಂಡಿಕಾ ಪಾರಾಯಣ ಮಾಡಿಸಬಹುದು.
.
ವೃಷಭ- ತುಲಾ ರಾಶಿ ಅಥವಾ ಲಗ್ನದವರು ಕುಜ ಜಪ, ಹವನ, ಸುಬ್ರಹ್ಮಣ್ಯ ಕ್ಷೇತ್ರ ದರ್ಶನ ಹಾಗೂ ಆರಾಧನೆ, ತೊಗರಿಬೆಳೆ ದಾನ ಇತ್ಯಾದಿಗಳನ್ನು ಮಾಡಬಹುದು
.
ಮಿಥನ-ಕನ್ಯಾ ರಾಶಿ ಹಾಗೂ ಲಗ್ನದವರು ಗುರು ಮಂತ್ರ ಜಪ-ಹವನ, ರಾಘವೇಂದ್ರ ಸ್ವಾಮಿಗಳ ಆರಾಧನೆ, ಶಿರಡಿ ಸಾಯಿಬಾಬಾ ಪೂಜೆ, ಕಡಲೆ ದಾನ ಮಾಡುವುದು ಉತ್ತಮ.

ಧನು ಹಾಗೂ ಮೀನ ರಾಶಿ ಲಗ್ನಕ್ಕೆ ಸೇರಿದವರು ಬುಧ ಮಂತ್ರ ಜಪ, ಹವನ, ವಿಷ್ಣು ಸಹಸ್ರನಾಮ ಪಾರಾಯಣ, ಪುರುಷ ಸೂಕ್ತ ಹವನ, ಹೆಸರು ಕಾಳು ದಾನ ಮಾಡಬಹುದು.

ಕರ್ಕಟ ಹಾಗು ಸಿಂಹ ರಾಶಿ ಲಗ್ನಕ್ಕೆ ಸೇರಿದವರು ಅವಶ್ಯವಾಗಿ ಶನೈಶ್ವರನ ಆರಾಧನೆ ಮಾಡಬೇಕು. ಅದರಲ್ಲೂ ವಿಶೇಷವಾಗಿ ಶನಿ ಶಾಂತಿ ಹವನ, ಶನೈಶ್ವರ ವ್ರತ, ರುದ್ರದೇವರ ಆರಾಧನೆ ಮಾಡುವುದು, ಕರಿ ಎಳ್ಳು ಹಾಗೂ ಉತ್ತಮವಾದ ಶುದ್ಧವಾದ ಎಳ್ಳೆಣ್ಣೆ ದಾನ ಮಾಡಬೇಕು.

ಮಕರ ರಾಶಿ, ಲಗ್ನಕ್ಕೆ ಸೇರಿದವರು ಚಂದ್ರ ಜಪ-ಹವನ, ದುರ್ಗಾ ದೀಪ ನಮಸ್ಕಾರ, ಪೂಜೆ, ಮುತೈದೆಯರ ಆರಾಧನೆ ಮಾಡಬಹುದು.

ಕುಂಭ ಲಗ್ನ, ರಾಶಿಗೆ ಸೇರಿದವರು ಆದಿತ್ಯ ಹೃದಯ ಪರಣ, ಗೋದಿ ದಾನ, ಸೂರ್ಯ ಮಂತ್ರ ಜಪ, ಹವನ, ಈಶ್ವರನ ಆರಾಧನೆ ಮಾಡಬಹುದು.
ವಿವಾಹ ಸಿದ್ಧಿಗಾಗಿ ರತ್ನಧಾರಣೆ ಮಾಡುವವರೂ ಜನ್ಮ ಲಗ್ನ ಅಥವಾ ರಾಶಿಯ ಪಂಚಮಾಧಿಪತಿ ಭಾಗ್ಯಾಧಿಪತಿ ಅಥವಾ ಲಾಭಾಧಿಪತಿ ಗ್ರಹದ ರತ್ನಕ್ಕೆ ಜಲ, ಕ್ಷೀರ ಹಾಗೂ ಆ ಗ್ರಹದ ಧಾನ್ಯದಿಂದ ಸಂಸ್ಕರಿಸಿ ಧಾರಣೆ ಮಾಡಿದರೆ ಉತ್ತಮ ಫಲ ಸಿಗುವುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿರಿ.

ಸೋಮಶೇಖರ್B.Sc
Mob.9353488403

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top