Connect with us

Dvgsuddi Kannada | online news portal | Kannada news online

ಮಕ್ಕಳ ಪ್ರತಿಭೆ ಅನಾವರಣಕ್ಕೆ ಕಾರಂಜಿ ಸಹಕಾರಿ: ಕರುಣಾಕರ ರೆಡ್ಡಿ

ಹರಪನಹಳ್ಳಿ

ಮಕ್ಕಳ ಪ್ರತಿಭೆ ಅನಾವರಣಕ್ಕೆ ಕಾರಂಜಿ ಸಹಕಾರಿ: ಕರುಣಾಕರ ರೆಡ್ಡಿ

ಡಿವಿಜಿ ಸುದ್ದಿ, ಹರಪನಹಳ್ಳಿ: ಮೊದಲು ಕೇರಳದಲ್ಲಿ ಪ್ರಾರಂಭವಾದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ರಾಜ್ಯದಲ್ಲಿ ಜಾರಿಗೆ ತಂದರು. ಮಕ್ಕಳು ಬರೀ ಪಾಠಕ್ಕೆ ಸೀಮಿತವಾಗದೇ ಅವರಲ್ಲಿ ಅಡಗಿಸುವ ಸುಪ್ತ ಪ್ರತಿಭೆ ಹೊರ ತೆಗೆಯಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.

ಪಟ್ಟಣದ ರಾಜಸೋಮಶೇಖರ ನಾಯಕ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ಸಾರ್ವಜಯ ಶಿಕ್ಷಣ ಇಲಾಖೆವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಾ ಉತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಗುಲ್ವರ್ಗಾ ವಿಭಾಗದಲ್ಲಿ ಶೈಕ್ಷಣಿಕವಾಗಿ ಹರಪನಹಳ್ಳಿ ತಾಲೂಕು ಪ್ರಥಮ ಸ್ಥಾನದಲ್ಲಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100ಕ್ಕೆ ನೂರು ಅಂಕ ಪಡೆಯುವ ಶಾಲೆಗಳ ಸಂಖ್ಯೆ ಇನ್ನೂ ಹೆಚ್ಚಾಗಬೇಕು. ತಾಲೂಕಿನಲ್ಲಿ ವಿವಿಧ ಶಾಲೆಗಳಲ್ಲಿ 150 ಹೊಸ ಕೊಠಡಿ ನಿರ್ಮಾಣದ ಹಂತದಲ್ಲಿವೆ. ಇನ್ನೂ ಹೊಸ ಕೊಠಡಿಗಳ ನಿರ್ಮಾಣದ ಚಿಂತನೆಯಲ್ಲಿದ್ದು, ಶಿಕ್ಷಕರು ಮಕ್ಕಳಿಗೆ ಉತ್ತಮ ಬೋಧನೆ ಮಾಡಬೇಕು. ಮಕ್ಕಳಲ್ಲಿಯೂ ಸರ್ಕಾದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಉತ್ತಮವಾಗಿ ಓದುವ ಛಲ ಬರಬೇಕು ಎಂದರು.

ಕ್ರೀಡೆ, ಚಿತ್ರಕಲೆ, ಗಾಯನ, ಭಾಷಣ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಕಾರ್ಯಕ್ರಮಗಳ ಮೂಲಕ ಪ್ರತಿಭಾವಂತರು ಹೊರ ಬರುತ್ತಿದ್ದಾರೆ. ಶಿಕ್ಷಕರು ಕೇವಲ ಪಾಠಕ್ಕೆ ಅದ್ಯತೆ ನೀಡದೇ ಪ್ರತಿ ಶನಿವಾರ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಜಿ.ಪಂ‌ ಸದಸ್ಯೆ ಕೆ.ಅರ್.ಜಯಶೀಲಾ ,ತಾ.ಪಂ ಅಧ್ಯಕ್ಷೆ, ಜಿ.ಪಂ‌ ಸದಸ್ಯ ಉತ್ತಂಗಿ ಮಂಜುನಾಥ, ತಾ.ಪಂ ಉಪಾಧ್ಯಕ್ಷ ಎಲ್.ಮಂಜ್ಯನಾಯ್ಕ, ಜಿ.ಪದ್ಮಲತಾ, ತಾ.ಪಂ ಸದಸ್ಯ ನಾಗರಾಜ್, ಎಂ.ಕೆ.ಜಾವೀದ್, ಕೆ.ಸಿದ್ದಲಿಂಗಗೌಡ, ಬ,ಸವರಾಜ್ ಸಂಗಪ್ಪನವರ್,  ರೇಣುಕಾಬಾಯಿ, ಬಿಇಒ ವೀರಭದ್ರಯ್ಯ, ಕೆ.ಅಂಜಿನಪ್ಪ, ಇಸ್ಮಾಯಿಲ್ ಯಲಿಗಾರ್, ಮಂಜುನಾಥ, ಹೂವಣ್ಣ, ಎಂ.ಆಂಜನೇಯ, ಬಿ.ರಾಜ ಶೇಖರ್, ಎ.ಕೆ‌.ಹುಚ್ಚಪ್ಪ, ಬಂಕಾಪುರ್‌ ಇತರರು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಹರಪನಹಳ್ಳಿ

To Top