Connect with us

Dvg Suddi-Kannada News

ಗೀತ ಗಾಯನ ಸ್ಪರ್ಧೆ

ಮುಖಪುಟ

ಗೀತ ಗಾಯನ ಸ್ಪರ್ಧೆ

ಡಿವಿಜಿ ಸುದ್ದಿ, ದಾವಣಗೆರೆ:

ಸೋಮೇಶ್ವರ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ನ. 30 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಮಟ್ಟದ ಅಂತರ್ ಶಾಲಾ ಗೀತ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ.  ಸ್ಪರ್ಧೆಯಲ್ಲಿ ವಿಜೇತರಾದವರಿಗೆ‘ಸೋಮೇಶ್ವರ ಗಾನಸಿರಿ’ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸ್ಪರ್ಧೆಯಲ್ಲಿ ಈ ಕೆಳಗಿನ 2 ವಿಭಾಗದಲ್ಲಿದ್ದು, ಕಿರಿಯರ ವಿಭಾಗದಲ್ಲಿ  5 ರಿಂದ 7 ನೇ ತರಗತಿ ವರೆಗೆ ಹಿರಿಯರ ವಿಭಾಗದಲ್ಲಿ 8 ರಿಂದ 10 ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಭಾಗಿಯಾಗಬಹುದು. ಆರ್. ಎನ್. ಜಯಗೋಪಾಲ್ ವಿರಚಿತಗೀತೆ ಮಾತ್ರ ಗಾಯನಕ್ಕೆ ಅವಕಾಶ. ಪ್ರತಿ ವಿಭಾಗಕ್ಕೆಒಂದು ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶವಿದೆ. ಆ ವಿದ್ಯಾರ್ಥಿಗಳು ಕಡ್ಡಾಯವಾಗಿ ಆಯಾ ವಿಭಾಗಕ್ಕೆ ಆಯೋಜಿಸಿದ ಗೀತೆಗಳನ್ನೇ ಹಾಡಬೇಕು. ಪ್ರತಿ ಸ್ಪರ್ಧಿಗೂ ಹಾಡಲು 5 ನಿಮಿಷ ಕಾಲಾವಕಾಶವಿರುತ್ತದೆ. ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ ಹಾಗೂ ಸಂಗೀತ ವಾದ್ಯಗಳ ಬಳಕೆಗೆ ಅವಕಾಶವಿರುವುದಿಲ್ಲ.

ಪ್ರಥಮ ಬಹುಮಾನ :- 3000 ರೂ. ನಗದು ಹಾಗೂ “ಸೋಮೇಶ್ವರ ಗಾನಸಿರಿ” ಪ್ರಶಸ್ತಿ ಫಲಕ

ದ್ವಿತೀಯ ಬಹುಮಾನ :- 2000 ರೂ. ನಗದು ಹಾಗೂ ಪ್ರಶಸ್ತಿ ಪತ್ರ

ತೃತೀಯ ಬಹುಮಾನ:-  ಪ್ರಶಸ್ತಿ ಪತ್ರ.

ಆಸಕ್ತ ಸ್ಪರ್ಧಿಗಳು ನ.20 ರೊಳಗಾಗಿ ಶಾಲೆಯ ಮುಖ್ಯಸ್ಥರ ಅನುಮತಿ ಪತ್ರದೊಂದಿಗೆ ಹೆಸರು ನೋಂದಾಯಿಸಿಕೊಳ್ಳಬಹುದು.

 

Click to comment

Leave a Reply

Your email address will not be published. Required fields are marked *

More in ಮುಖಪುಟ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top