ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಆ.16 ವರಂದು 16 ಮಿ.ಮೀ ಸರಾಸರಿ ಮಳೆಯಾಗಿದ್ದು, ಮಳೆಯಿಂದ ಜಿಲ್ಲೆಯಲ್ಲಿ 12 ಲಕ್ಷ ರೂಐಪಾಯಿ ನಷ್ಟ ಸಂಭವಿಸಿದೆ.
ಜಿಲ್ಲೆಯಲ್ಲಿ ಮಳೆಯ ವಿವರ
- ಚನ್ನಗಿರಿ- 18.0 ಮಿ.ಮೀ
- ದಾವಣಗೆರೆ -14.0 ಮಿ.ಮೀ
- ಹರಿಹರ- 14.0 ಮಿ.ಮೀ
- ಹೊನ್ನಾಳಿ – 25.0 ಮಿ.ಮೀ
- ಜಗಳೂರು- 5.0 ಮಿ.ಮೀ
- ನ್ಯಾಮತಿ-31.0 ಮಿ.ಮೀ
ಜಿಲ್ಲೆಯ ಸರಾಸರಿ 4.0 ಮಿ.ಮೀ ವಾಡಿಕೆಗೆ 16.0 ವಾಸ್ತವ ಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 2 ಮನೆ ಹಾನಿಯಾಗಿದ್ದು, 25 ಸಾವಿರ ನಷ್ಟ ಸಂಭವಿಸಿರುತ್ತದೆ. ಹೊನ್ನಾಳಿ ತಾಲ್ಲೂಕಿನಲ್ಲಿ 10 ಮನೆಗಳು ಭಾಗಶಃ ಹಾನಿಯಾಗಿದ್ದು, 5 ಲಕ್ಷ ನಷ್ಟ ಸಂಭವಿಸಿರುತ್ತದೆ. ನ್ಯಾಮತಿ ತಾಲ್ಲೂಕಿನಲ್ಲಿ 2 ಮನೆಗಳು ಭಾಗಶಃ ಹಾನಿಯಾಗಿದ್ದು ರೂ. 50 ಸಾವಿರ ನಷ್ಟ ಸಂಭವಿಸಿದೆ.
ಚನ್ನಗಿರಿ ತಾಲ್ಲೂಕಿನಲ್ಲಿ 3 ಮನೆಗಳು ತೀವ್ರ ಹಾನಿಗೊಳಗಾಗಿದ್ದು 2.10 ಲಕ್ಷ, 5 ಮನೆಗಳು ಭಾಗಶಃ ಹಾನಿಯಾಗಿದ್ದು ರೂ.2.15 ಲಕ್ಷ ಹಾಗೂ 3 ದನದ ಕೊಟ್ಟಿಗೆ ಹಾನಿಯಾಗಿದ್ದು ರೂ.70 ಸಾವಿರ ನಷ್ಟ ಸಂಭವಿಸಿರುತ್ತದೆ. ಜಿಲ್ಲೆಯಲ್ಲಿ ಒಟ್ಟಾರೆ ರೂ.12 ಲಕ್ಷ ನಷ್ಟ ಸಂಭವಿಸಿದೆ.



