Connect with us

Dvgsuddi Kannada | online news portal | Kannada news online

ಬೆಳಗ್ಗೆ 7 ರಿಂದ  ಮತದಾನ ಶುರು

ದಾವಣಗೆರೆ

ಬೆಳಗ್ಗೆ 7 ರಿಂದ  ಮತದಾನ ಶುರು

ಡಿವಿಜಿ ಸುದ್ದಿ, ದಾವಣಗೆರೆ: ತೀವ್ರ ಕುತೂಹಲ ಮೂಡಿಸಿದ್ದ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೇ  ಆರಂಭವಾಗಿದೆ.

ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಶುರುವಾಗಿದ್ದು, ಒಬ್ಬೊಬ್ಬರೇ ಬಂದು ಮತದಾನ ಮಾಡುತ್ತಿದ್ದಾರೆ.  ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಬೆಳಗ್ಗೆ ಮತದಾರರ ಸಂಖ್ಯೆ ವಿರಳವಾಗಿದ್ದು, ಮಧ್ಯಾಹ್ನದ ಹೊತ್ತಿಗೆ ಮತದಾನ ಪ್ರಕ್ರಿಯೆ ಚುರುಕುಗೊಳ್ಳಲಿದೆ. ಮತಗಟ್ಟೆ ಸುತ್ತಮುತ್ತಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್  ವ್ಯವಸ್ಥೆ ಕಲ್ಪಿಸಲಾಗಿದೆ.

ಒಟ್ಟು 45 ವಾರ್ಡ್ ಗಳಲ್ಲಿ 377 ಮತ ಗಟ್ಟೆಗಳಿವೆ. 111 ಸೂಕ್ಷ್ಮ, 28 ಅತಿ ಸೂಕ್ಷ್ಮ, 238 ಸಾಮಾನ್ಯ ಮತಗಟ್ಟೆಗಳಿವೆ. ಒಟ್ಟು 3, 80, 917 ಮತದಾರರಿದ್ದು, 1,90506 ಪುರುಷ, 1,90,347 ಮಹಿಳಾ ಮತದಾರರಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top