Connect with us

Dvg Suddi-Kannada News

ಡಿ. 16 ರಂದು ವಿಶ್ವಬಂಧು ಶ್ರೀ ಮರುಳಸಿದ್ಧೇಶ್ವರ  ಕಾರ್ತಿಕೋತ್ಸವ

ದಾವಣಗೆರೆ

ಡಿ. 16 ರಂದು ವಿಶ್ವಬಂಧು ಶ್ರೀ ಮರುಳಸಿದ್ಧೇಶ್ವರ  ಕಾರ್ತಿಕೋತ್ಸವ

ಡಿವಿಜಿ ಸುದ್ದಿ, ದಾವಣಗೆರೆ:

ವಿಶ್ವಬಂಧು ಶ್ರೀ ಮರುಳಸಿದ್ಧೇಶ್ವರ ಕಾರ್ತಿಕೋತ್ಸವ  ಸಮಿತಿಯಿಂದ  ಡಿ. 16 ರಂದು ಸೋಮವಾರ ಸಂಜೆ 6.30ಕ್ಕೆ  ವಿಶ್ವಬಂಧು ಶ್ರೀ ಮರುಳಸಿದ್ಧೇಶ್ವರ ಸ್ವಾಮಿಗೆ  ಕಾರ್ತಿಕೋತ್ಸ  ನಡೆಯಲಿದೆ.

ಇದೇ ಸಂದರ್ಭದಲ್ಲಿ  ದಾವಣಗೆರೆ ನಗರದ  ತರಳಬಾಳು ಬಡಾವಣೆಯ  ಶಿವಕುಮಾರ ಸ್ವಾಮಿ ಮಹಾಮಂಟಪದಲ್ಲಿ  ಸ್ಥಾಪಿತಗೊಂಡಿರುವ  ಶ್ರೀ ಸ್ವಾಮಿಯ ಶಿಲಾಮೂರ್ತಿಗೆ ಅಭಿಷೇಕ ಹಾಗೂ ನಂದಾ ದೀಪವನ್ನು  ಸರ್ವ ಭಕ್ತರು ಬೆಳಗಿಸುವುದರ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿ, ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು. ಇದೇ ವೇಳೆ  ವಿಶ್ವಬಂಧು ಶ್ರೀ  ಮರುಳಸಿದ್ಧರ  ಜೀವನಾದರ್ಶ ಕುರಿತು ಡಾ. ನಾ. ಲೋಕೇಶ್ ಒಡೆಯರ್  ಉಪನ್ಯಾಸ ನೀಡಲಿದ್ದಾರೆ.

ಕದಳಿ ಮಹಿಳಾ ತಂಡ ಅನುಭವ ಮಂಟಪ ದಾವಣಗೆರೆ ಹಾಗೂ  ಶ್ರೀಮತಿ ರುದ್ರಾಕ್ಷಿಬಾಯಿ  ಮತ್ತು ವೃಂದದವರು  ದಾವಣಗೆರೆ ಇವರಿಂದ ಸಂಗೀತ ಸೌರಭ ಜರುಗಲಿದೆ.

 

 

 

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top