ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಿಜೆ ಬಡಾವಣೆಯ 17 ನೇ ವಾರ್ಡ್ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್ ನಿಂದ ದಿನೇಶ್. ಕೆ ಶೆಟ್ಟಿ ಹಾಗೂ ಬಿಜೆಪಿಯಿಂದ ಅಜಯ್ ಕುಮಾರ್ ಕಣದಲ್ಲಿದ್ದಾರೆ.
ಇಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಭಾರೀ ಕುತೂಹಲ ಕೆರಳಿಸಿದೆ. ಎರಡು ಪಕ್ಷದಿಂದಲೂ ಅಬ್ಬರದ ಪ್ರಚಾರ ನಡೆಯುತ್ತಿದೆ. ಈ ಇಬ್ಬರಲ್ಲಿ ಗೆಲುವು ಯಾರದ್ದು ಎನ್ನುವುದನ್ನು ನಿರೀಕ್ಷೆ ಮಾಡುವುದು ಕಷ್ಟವಾಗುತ್ತಿದೆ.ಈ ಬಗ್ಗೆ ಬಿಜೆಪಿ ಅಭ್ಯರ್ಥಿ ಬಿ.ಜೆ ಅಜಯ್ ಕುಮಾರ್ ಡಿವಿಜಿ ಸುದ್ದಿ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಜನರು ಯಾರು ಕೆಲಸ ಮಾಡುತ್ತಾರೆ ಅನ್ನೋದನ್ನು ನೋಡಿ ಮತ ನೀಡಲಿ. ಸಸತವಾಗಿ ಗೆದ್ದಿರೋವರು ಏನು ಕೆಲಸ ಮಾಡಿದ್ದಾರೆ. ಕಳೆದ ಎರಡು ಬಾರಿ ಸೋತರೂ, ಏನು ಕೆಲಸ ಮಾಡಿದ್ಧೇನೆ ಎಂಬುದನ್ನು ಜನರ ಬಳಿ ಕೇಳಿ. ಈ ಬಾರಿ ನನ್ನ ಪರವಾಗಿ ಜನರಿದ್ದು, ಪಿಜೆ ಬಡಾವಣೆಯಲ್ಲಿ ಬಿಜೆಪಿ ಗೆಲುವುದು ನಿಶ್ಚಯ ಎಂದರು.
ಭ್ರಷ್ಟಾಚಾರ ರಹಿತ ಆಡಳಿತದ ಗುರಿ: ಎ



