ಡಿವಿಜಿ ಸುದ್ದಿ, ದಾವಣಗೆರೆ: ಶಿಕ್ಷಕ ವೃತ್ತಿ ಜೀವನ ಅತ್ಯಮೂಲ್ಯವಾದದ್ದು, ಈ ವೃತ್ತಿಯನ್ನು ಗೌರವಿಸಿ ನಿಮ್ಮ ಮುಂದಿನ ಜೀವನ ಉತ್ತಮವಾಗಿಸಿಕೊಳ್ಳಿ ಎಂದು ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ಕಾರ್ಯದರ್ಶಿ ಸಂಗಮೇಶ್ ಗೌಡ್ರು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.
ಶ್ರೀಮ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳ ಸಮಾರೋಪ ಸಮಾರಂಭ ಮತ್ತು ದೀಪದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಯಿಯೇ ಮೊದಲ ಗುರು, ಜೀವನದಲ್ಲಿ ಮೊದಲು ನಿಮ್ಮ ತಂದೆ- ತಾಯಿಗೆ ಒಳ್ಳೆಯ ಮಕ್ಕಳಾಗಿ. ನಂತರ ಶಾಲೆಯಲ್ಲಿ ಉತ್ತಮ ಶಿಕ್ಷಕರಾಗುತ್ತೀರಿ. ಶಾಲೆಯಲ್ಲಿ ಮಕ್ಕಳ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿ. ಶಿಕ್ಷಕ ವೃತ್ತಿ ಜೀವನದಲ್ಲಿ ಅಮೂಲ್ಯ ವಾದ ವೃತ್ತಿ. ಈ ವೃತ್ತಿಯನ್ನು ಗೌರವಿಸಿ, ಶ್ರದ್ಧೆಯಿಂದ ಕೆಲಸ ಮಾಡಿ. ಆಗ ನಿಮ್ಮ ಮುಂದಿನ ಜೀವನ ಸುಖಕರವಾಗಿ ಇರಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮುಖ್ಯ ಅಥಿತಿಗಳಾದ ಚಂದ್ರಶೇಖರ್ ಗೌಡರ್ ಮಾತನಾಡಿ, ಪ್ರಶಿಕ್ಷಣಾರ್ಥಿಗಳು ಬರೀ ಶಿಕ್ಷಕ ಆಗಬಾರದು. ಶಾಲೆಯ ಅತ್ಯುತ್ತಮ ಶಿಕ್ಷಕರಾಗಬೇಕು. ಶಿಕ್ಷಣ ಮಹತ್ವವಾದ ಮತ್ತು ಪವಿತ್ರತೆಯ ಕ್ಷೇತ್ರ. ನಿಮ್ಮ ಜವಾಬ್ದಾರಿ ಅರಿತು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾಗ ಉತ್ತಮ ಶಿಕ್ಷಕರಾಗಲಿದ್ದೀರಿ ಎಂದರು.
ಸಮಾರೋಪದ ಮಾತನಾಡಿದ ದಾವಣಗೆರೆ ವಿವಿ ಡೀನ್ ಡಾ. ಕೆ ವೆಂಕಟೇಶ್, ಬಿ.ಇಡಿ ಮುಖ್ಯ ತತ್ವಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಸಾಮಾಜಿಕ ಸಂಪರ್ಕ ಸಾಧನಗಳನ್ನು ಧನಾತ್ಮಕ ವಾಗಿ ಬಳಸಿಕೊಳ್ಳಿ. ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎ ಸ್ಟಡಿ ಆನ್ ಸೈಕೋ ಸೋಷಿಯಲ್ ಫ್ಯಾಕ್ಟರ್ಸ್ ಆಫ್ ಡೇ ಸ್ಕಾಲರ್ಸ್ ಅಂಡ್ ಡೆಸಿಡೆನ್ಷಿಯಲ್ ಸ್ಟುಡೆಂಟ್ಸ್ ಆಫ್ 10 ಸ್ಟಾಂಡರ್ಡ್ ಆಫ್ ದಾವಣಗೆರೆ ಸಿಟಿ ಇನ್ ರಲೇಷನ್ ಟು ದೆಯರ್ ಆಚೀವ್ ಮೆಂಟ್ ಇನ್ ಸೈನ್ಸ್ ವಿಷಯವಾಗಿ ಆಂಧ್ರ ಪ್ರದೇಶದ ಕೊಪ್ಪಂ ದ್ರಾವಿಡಿಯನ್ ವಿವಿಯಲ್ಲಿ ಪಿಎಚ್ ಡಿ ಪದವಿ ಪಡೆದ ಜಿ. ಅನಿತಾ ದೊಡ್ಡಗೌಡರ್ ಅವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮ ಪ್ರಾರ್ಥನೆಯನ್ನು ನಾಗೇಶ್, ಸ್ವಾಗತವನ್ನು ಶರ್ಮಿಳಾ ನರವೇರಿಸಿದರು. ಪ್ರಾಚಾರ್ಯರಾದ ಡಾ. ಪ್ರೇಮ ಪಿ.ಎಂ ಪ್ರಸ್ತಾವಿಕ ಮಾತನಾಡಿದರು. ಮಾಗನೂರು ಬಸಪ್ಪ ಪ್ರಾಥಮಿಕ ಶಾಲೆಯ ಮುಖ್ಯಸ್ಥ ಎಸ್.ಆರ್. ಶಿರಗಂಬಿ, ನಿರ್ದೇಶಕ ಡಾ. ಜಿ.ಎನ್.ಎಚ್. ಕುಮಾರ್, ಕುಸುಮಾ, ವಾಣಿಶ್ರೀ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.



