Connect with us

Dvgsuddi Kannada | online news portal | Kannada news online

ಹಿಂದೂ, ಮುಸ್ಲಿಂ ಸಾಮರಸ್ಯಕ್ಕೆ ರಾಜಕೀಯ ಅಡ್ಡಗೋಡೆ:ಸಾಣೇಹಳ್ಳಿ ಶ್ರೀ

ಚನ್ನಗಿರಿ

ಹಿಂದೂ, ಮುಸ್ಲಿಂ ಸಾಮರಸ್ಯಕ್ಕೆ ರಾಜಕೀಯ ಅಡ್ಡಗೋಡೆ:ಸಾಣೇಹಳ್ಳಿ ಶ್ರೀ

ಡಿವಿಜಿ ಸುದ್ದಿ, ಚನ್ನಗಿರಿ: ಹಿಂದೂ, ಮುಸ್ಲಿಂ ಸಾಮರಸ್ಯಕ್ಕೆ ರಾಜಕೀಯ ಅಡ್ಡಗೋಡೆಯಾಗಿದೆ. ಆ ಗೋಡೆ ಕೆಡವಿ ನಾವೆಲ್ಲರೂ ಒಂದು ಎಂದು ಸಮಾಜಕ್ಕೆ ತೋರಿಸಬೇಕಿದೆ ಎಂದು ಸಾಣೇಹಳ್ಳಿಯ  ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನವಿಲೇಹಾಳ್ ಗ್ರಾಮಸ್ಥರು ಹಾಗೂ ಕರವೇ ಸಂಘಟನೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ 2019ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಶಾಂತ ಗಂಗಾಧರ ಅವರಿಗೆ ಸನ್ಮಾನ ಕಾರ್ಯಕ್ರಮದ  ಸಾನಿಧ್ಯ ವಹಿಸಿ  ಆಶೀರ್ವಚನ ನೀಡಿದರು.

ಹಿಂದೂ , ಮುಸ್ಲಿಂ ಎಂಬ ಬೇದ-ಭಾವ ಮರೆಯಲು ರಾಜಕೀಯ ಅಡ್ಡಗೋಡೆಯಾಗಿದೆ.  ಆ ಗೋಡೆಯನ್ನು ಕೆಡವಿ  ನಾವೆಲ್ಲರೂ ಭಾರತೀಯರು ಒಂದಾಗಿ ಬಾಳಬೇಕೆನ್ನುವ ಭಾವ ಬಲಗೊಂಡರೆ  ಬದುಕಿಗೆ ನೆಮ್ಮದಿ ಸಿಗಲಿಕ್ಕೆ ಸಾಧ್ಯವಾಗುತ್ತದೆ ಎಂದರು. ಕನ್ನಡ ಶಾಲೆಗಳನ್ನು ನಾವೆಲ್ಲರೂ ಉಳಿಸಬೇಕಿದೆ. ಇಲ್ಲವಾದಲ್ಲಿ ನೀವುಗಳು ಪಡೆದಂತಹ ಪದವಿಗಳಿಗೆ ಯಾವುದೇ ಅರ್ಥ ಸಿಗುವುದಿಲ್ಲ ಎಂದರು.

ಶಾಂತಗಂಗಾಧರ ಮತ್ತು ನಾವು ಜೊತೆಯಲ್ಲಿ ಪದವಿ ವ್ಯಾಸಂಗ ಮಾಡಿದವರು. ಇವರೊಬ್ಬ ಪ್ರಗತಿಪರ, ಸಾಮಾಜಿಕ ಚಿಂತಕರಾಗಿದ್ದಾರೆ. ಯಾರಿಗೇನಾದರೂ ಅನ್ಯಾಯ ಆಗಿದ್ದು ಕಂಡರೆ ಪ್ರಶ್ನೆ ಮಾಡಿ ನ್ಯಾಯ ದೊರಕಿಸಿಕೊಡುವ ಉದಾರ ವ್ಯೆಕ್ತಿತ್ವ ಅವರದು ಎಂದರು.

ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಶಾಂತ ಗಂಗಾಧರ,  ನನಗೆ ಎರಡು ಜನ ತಾಯಾಂದಿರು. ಮೊದಲನೆ ತಾಯಿ ನನಗೆ ಜನ್ನಕೊಟ್ಟ ಶಾಂತವ್ವ, ಇನ್ನೊಬ್ಬ ತಾಯಿ ಬಾವಿಯಲ್ಲಿ ಬಿದ್ದಿದ್ದ ನನ್ನನ್ನು ರಕ್ಷಿಸಿ ಮರುಜನ್ಮ ನೀಡಿದ ತಾಯಿ ಗಂಗವ್ವ ಎಂದು ಬಾಲ್ಯದ ಜೀವನವನ್ನು ನೆನಪಿಸಿದರು.

ಸಿರಿಗೆರೆಯ ಮಠ  ಒಂದು ಜಾತಿಯ ಪೀಠ ಅಲ್ಲ, ಅದು ಸಮಗ್ರ ಜಾತಿ ಜನತೆಯ, ತುಳಿತಕ್ಕೆ ಒಳಗಾದವರ ಅಕ್ಷರ ಕಲಿಯದವರ ಪೀಠವಾಗಿದೆ. ಈ ಪೀಠದಲ್ಲಿ ಅಕ್ಷರ ಕಲಿತ ಲಕ್ಷಾಂತರ ವಿಧ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆ ಪದವಿಗಳನ್ನು ಪಡೆದಿದ್ದಾರೆ. ನನಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯಲಿಕ್ಕೆ ಕಾರಣ ಈ ಸಿರಿಗೆರೆಯ ಪೀಠ, ಸಿರಿಗೆರೆಗೂ ನವಿಲೇಹಾಳ್ ಗ್ರಾಮಕ್ಕೂ ಅವಿನಾಭಾವ ಸಂಬಂದವಿದೆ.  ನಮ್ಮ ಊರು ಒಬ್ಬರ ಮನೆಯ ದುಖಃಕ್ಕೆ ಮತ್ತೊಂದು ಮನೆಯ ಮನಸ್ಸುಗಳು ಶ್ರಮಿಸುತ್ತವೆ ಎಂದು ಗ್ರಾಮದ ಜನರ  ಪ್ರೀತಿಯ ಮನಸ್ಸುಗಳನ್ನು ಕೊಂಡಾಡಿದರು.

ತಹಶೀಲ್ದಾರ್  ಎನ್ ನಾಗರಾಜ್ , ಕನ್ನಡ ಧ್ವಜರೋಹಣವನ್ನು ನೇರವೇರಿಸಿದರು ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ  ಪಿ , ಹೆಚ್ , ಡಿ  ಪದವಿ ಪಡೆದ  ಎ. ಎಂ. ರವಿ, ಡಿ. ಹೆಚ್, ಹುಸೇನ್ ಮೀಯ್ಯ ಸಾಬ್, ಹಾಗೂ ಎಸ್. ಸಿ. ಸಂತೋಷ್ ಕುಮಾರ್ ಅವರನ್ನು  ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.  ಕಾರ್ಯಕ್ರಮದ ನಿರೂಪಣೆಯನ್ನು  ನಿವೃತ ಉಪನ್ಯಾಸಕ ಜೆ. ದಾದಪೀರ್ ವಹಿಸಿದ್ದರು.  ನಿವೃತ್ತ ಪ್ರಧ್ಯಾಪಕರಾದ ನಂದ್ಯಾಲ್ , ವಿಶ್ರಾಂತ  ಕುಲಪತಿ ಎ.ಹೆಚ್. ರಾಜಾಸಾಬ್,   ಕರವೇ ಅಧ್ಯಕ್ಷ ಜಿ ಮಹೇಶ್ವರಪ್ಪ , ಶಶಿಕಲಾ ನಲ್ಕುದುರೆ ಸೇರಿದಂತೆ ಗ್ರಾಮಸ್ಥರು ಮುಖಂಡರುಗಳು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

To Top
(adsbygoogle = window.adsbygoogle || []).push({});