Connect with us

Dvg Suddi-Kannada News

ಅದ್ದೂರಿಯಾಗಿ ಕನ್ನಡ ರಾಜೋತ್ಸ ಆಚರಿಸೋಣ: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ 

ಮುಖಪುಟ

ಅದ್ದೂರಿಯಾಗಿ ಕನ್ನಡ ರಾಜೋತ್ಸ ಆಚರಿಸೋಣ: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ 

 ಡಿವಿಜಿ ಸುದ್ದಿ, ದಾವಣಗೆರೆ: ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸೋಣವೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ನವೆಂಬರ್ 1 ರಂದು ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಚರ್ಚಿಸಲು ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೆ.೧ ರಿಂದ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧವಾಗಿದ್ದು, ರಾಜ್ಯೋತ್ಸವ ಧ್ವಜಗಳು, ಫ್ಲೆಕ್ಸ್ ಗಳಲ್ಲಿ  ಪ್ಲಾಸ್ಟಿಕ್ ಬಳಸದೇ ಬಟ್ಟೆಯಿಂದ ತಯಾರಿಸಿ ಪ್ರದರ್ಶಿಸಬೇಕು. ಪ್ಲಾಸ್ಟಿಕ್ ಬಳಕೆ ಕಂಡು ಬಂದಲ್ಲಿ ದಂಡ ಮತ್ತು ಪ್ರಕರಣ ದಾಖಲಿಸಲಾಗುವುದು ಎಂದು ಸೂಚನೆ ನೀಡಿದರು.

ಎಲ್ಲಾ ಸರ್ಕಾರಿ ಕಚೇರಿ ಸೇರಿದಂತೆ ಸಂಘ, ಸಂಸ್ಥೆಗಳ ಕಚೇರಿಯಲ್ಲಿ ಸ್ವಯಂ ಪ್ರೇರಿತರಾಗಿ  ಕನ್ನಡ ಧ್ವಜಗಳನ್ನು ಹಾರಿಸಬೇಕು ಹಾಗೂ ವಿದ್ಯುದೀಪಾಲಂಕಾರ ಮಾಡಬೇಕು. ಕನ್ನಡ ಪರ ಸಂಘಟನೆಗಳು  ಆದಷ್ಟು ಬೇಗ  ತಮ್ಮ ತಮ್ಮ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ಜಿಲ್ಲಾಡಳಿತದ ವತಿಯಿಂದ ನಡೆಸುವ ಭುವನೇಶ್ವರಿ ಮೆರವಣಿಗೆಯಲ್ಲಿ  ಭಾಗಿಯಾಗಬೇಕು. ಬೆಳಗ್ಗೆ 8.30 ರಿಂದ ಮೆರವಣಿಗೆ ಹೊಡಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ- ಅತ್ಯುತ್ತಮ ಕಲಾತಂಡಗಳಿಂದ ಪ್ರದರ್ಶನ ಏರ್ಪಡಿಸುವಂತೆ ಸೂಚಿಸಿದರು.

ವಿವಿಧ ಸ್ಥಬ್ತಚಿತ್ರಗಳ ಪ್ರದರ್ಶನ

ಜಿಲ್ಲಾ ಪಂಚಾಯತ್-  ಸ್ವಚ್ಚ ಭಾರತ್ ಮಿಷನ್

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ- ಬಾಲಕಾರ್ಮಿಕ ಪದ್ದತಿ ವಿರೋಧಿ ಪದ್ಧತಿ

ಪ್ರಭಾರ ಜಿಲ್ಲಾಧಿಕಾರಿ ನಜ್ಮಾ ಜಿ ಮಾತನಾಡಿ, ನ.೧ ರಂದು ಮೆರವಣಿಗೆ ನಂತರ ಬೆಳಿಗ್ಗೆ ೧೦ ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕನ್ನಡ ಧ್ವಜಾರೋಹಣ ನೆರವೇರಿಸುವರು. ನಂತರ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಕನ್ನಡ ಸಂಘ ಸಂಸ್ಥೆಗಳಿಂದ ಕನ್ನಡ ನಾಡು ನುಡಿ ಕುರಿತಾದ ಸ್ತಬ್ದಚಿತ್ರ ಪ್ರದರ್ಶನವಿರುತ್ತದೆ. ಸಂಜೆ ಜಯದೇವ ಸರ್ಕಲ್‌ನಲ್ಲಿರುವ ಶಿವಯೋಗಿ ಬಯಲುಮಂದಿರದಲ್ಲಿ ಕನ್ನಡ ರಾಜ್ಯೋತ್ಸದ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದರು.

ಜಿಲ್ಲಾ ಪಂಚಾಯತಿ ಸಿಇಒ ಅಧ್ಯಕ್ಷತೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ನಡೆಯಲಿದೆ. ಉಪ ವಿಭಾಗಾಧಿಕಾರಿ, ಪಾಲಿಕೆ ಆಯುಕ್ತರನ್ನೊಗೊಂಡ ಸಮಿತಿಯಲ್ಲಿ ಇರಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಕನ್ನಡ ಅಭಿವೃದ್ಧಿಗೆ ಶ್ರಮಿಸಿದ  ಸಾಧಕರನ್ನು ಗುರುತಿಸಿ ಆಯ್ಕೆ ಮಾಡಲಾಗುವುದು. ಒದೊಂದು ಕ್ಷೇತ್ರದಿಂದ 3 ರಂತೆ 15 ಕ್ಷೇತ್ರದಿಂದ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.

ನವೆಂಬರ್ ತಿಂಗಳಲ್ಲಿ ಪರಭಾಷಾ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬಾರದು, ನಾಮಫಲಕಗಳನ್ನು ಕನ್ನಡದಲ್ಲಿಯೇ ಹಾಕಬೇಕು, ಕನ್ನಡ ರಾಜೋತ್ಸವ ನವೆಂಬರ್ ಗೆ ಮಾತ್ರ ಸೀಮಿತವಾಗಬಾದರು, ಗ್ರಾಮೀಣಭಾಗದ ಕಲಾವಿಧರನ್ನು ಗೌರವಿಸಬೇಕು ಎಂದು ವಿವಿಧ ಸಂಘಟನೆ ಮುಖಂಡರು ಮನವಿ ಮಾಡಿದರು.

ಜಿಲ್ಲಾಧಿಕಾರಿ ಮಾಂತೇಶ್ ಬೀಳಗಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಮೇಗೌಡ, ಮಹಾನಗರಪಾಲಿಕೆಯ ಆಯುಕ್ತ ಮಂಜುನಾಥ್ ಬಳ್ಳಾರಿ, ಮಹಿಳಾ ಘಟಕದ ಅಧ್ಯಕ್ಷ ಬಸಮ್ಮ, ಉಪಾಧ್ಯಕ್ಷ ಮಂಜುಳಾ ಮಾಂತೇಶ್, ಸಹ ಕಾರ್ಯದರ್ಶಿ ನೇತ್ರಾವತಿ, ಸರೋಜಮ್ಮ, ಕರುನಾಡು ಕನ್ನಡ ಸೇನೆ ರಾಜ್ಯಾಧ್ಯಕ್ಷ ಗೋಪಾಲಗೌಡರು, ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಾರ್ಗೆಟ್ ಅಸ್ಲಾಂ, ಯಾಖುಬ್ ಕೊಟ್ಟೂರು ಉಪಸ್ಥಿತರಿದ್ದರು.

ಕರುನಾಡು ಕನ್ನಡ ಸೇನೆ ರಾಜ್ಯಾಧ್ಯಕ್ಷ ಗೋಪಾಲಗೌಡ, ಜಿಲ್ಲಾ ಕರವೇ ಅಧ್ಯಕ್ಷ ರಾಮೇಗೌಡ,  ಕನ್ನಡ ಪರ ಸಂಘಟನೆ ಕೆ.ಜಿ.ಶಿವಕುಮಾರ್, ವಿಶ್ವಕನ್ನಡ ವೇದಿಯ ಜಿಲ್ಲಾ ಅಧ್ಯಕ್ಷ ಕೆ.ಜಿ.ಯಲ್ಲಪ್ಪ, ಬಯಲು ನಾಟಕ ಅಕಾಡೆಮಿಯ ಸದಸ್ಯ ಎನ್.ಎಸ್.ರಾಜು, ಕರ್ನಾಟಕ ಜನಮನ ವೇದಿಕೆ ನಾಗೇಂದ್ರ ಬಂಡೀಕರ್, ಪತ್ರಕರ್ತರ ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ಎನ್. ಮಲ್ಲೇಶ್,  ಸ.ರಂ.ಗಂಗಪ್ಪ, ಕಿ.ಮಂಜನಾಯ್ಕ, ಡಿ.ಪರಮೇಶ್ವರಪ್ಪ, ಪ್ರವೀಣ್, ರಾಜುನಾಯ್ಕ, ಎಸ್.ಕೆ.ಕುಲಕರ್ಣಿ, ಶಿವಾನಂದಯ್ಯ ಹೆಚ್.ಎಂ, ಮಂಜುನಾಥ ಬಾಳೆಕಾಯಿ, ಜಗದೀಶ್ ಎಸ್.ಪಿ, ಕೆ.ಬಿ.ರುದ್ರೇಶ್, ನಾರಾಯಣಮೂರ್ತಿ, ಮಂಜುನಾಥ್ ಎಸ್, ಎನ್.ರವಿಕುಮಾರ್, ಟಿ.ಮಂಜುನಾಥಗೌಡ, ಸುಧಾಕರ್, ಉಪವಿಭಾಗಾಧಿಕಾರಿ ಕುಮಾರಸ್ವಾಮಿ ಮಹಾನಗರಪಾಲಿಕೆ ಆಯುಕ್ತ ಮಂಜುನಾಥ ಆರ್.ಬಳ್ಳಾರಿ, ಎಸ್‌ಎಲ್‌ಎಓ ರೇಷ್ಮಾ ಹಾನಗಲ್, ಡಿಹೆಚ್‌ಓ ಡಾ.ರಾಘವೇಂದ್ರಸ್ವಾಮಿ, ಡಿಡಿಪಿಐ ಪರಮೇಶ್ವರಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Click to comment

Leave a Reply

Your email address will not be published. Required fields are marked *

More in ಮುಖಪುಟ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top