ಡಿವಿಜಿ ಸುದ್ದಿ, ದಾವಣಗೆರೆ: ಐತಿಹಾಸಿಕ ಪ್ರಸಿದ್ಧ ನಗರದೇವತೆ ದುರ್ಗಾಂಬಿಕಾ ದೇವಿಯ ಜಾತ್ರೆ ಮಾರ್ಚ್ 1ರಿಂದ 4 ನಡೆಸಲು ನಿರ್ಧರಿಸಲಾಗಿದೆ. ನಗರದ ದುರ್ಗಾಂಬಿಕಾದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ದುರ್ಗಾಂಬಿಕಾ ಶಾಲೆಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಜ.28 ರಂದು ಹಂದರಗಂಬದ ಪೂಜೆ ನಡೆಯಲಿದ್ದು, ಮಾರ್ಚ್ 1ರಂದು ದೇವಿಗೆ ಪಂಚಾಮೃತ ಅಭಿಷೇಕ, ರಾತ್ರಿ ಕಂಕಣಧಾರಣೆ ಹಾಗೂ ಸಾರು ಹಾಕುವುದು ನಡೆಯಲಿದೆ. ಮಾರ್ಚ್ 2ರಂದು ಸೋಮವಾರ ದೇವಿಗೆ ವಿಶೇಷ ಪೂಜೆ ನಡೆಯಲಿದ್ದು, ಮಾರ್ಚ್ 3ರಂದು ರಾತ್ರಿ ಭಕ್ತಿ ಸಮರ್ಪಣೆ ಕಾರ್ಯ ನಡೆಯಲಿದೆ. ಮಾರ್ಚ್ 4ರಂದು ಬೆಳಿಗ್ಗೆ ಚರಗ ಕಾರ್ಯಕ್ರಮ ನಡೆಯಲಿದೆ.
ದೇವಸ್ಥಾನ ಸಮಿತಿಯಲ್ಲಿ ಎಲ್ಲಾ ಸಮುದಾಯಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಯಿತು. ಸಭೆಯಲ್ಲಿ ಸ್ವಲ್ಪ ಹೊತ್ತು ಮಾತಿನ ಚಕಮುಕಿಯೂ ನಡೆಯಿತು. ಅಂತಿಮವಾಗಿ ಯಾರಲ್ಲ ಸೇರಿಸಿಕೊಳ್ಳಬೇಕು ಎಂಬ ಬಗ್ಗೆ 5 ಜನರ ಸಮಿತಿ ರಚಿಸಿಬೇಕು. ಯಾರನ್ನು ಸೇರಿಸಬೇಕು ಎಂಬುದರ ಪಟ್ಟಿ ಕೊಡಿ, ಮುಂದಿನ ಸಭೆಯಲ್ಲಿ ಆಯ್ಕೆ ಮಾಡಲಾಗುವುದು ಎಂದು ಮೋತಿ ವೀರಣ್ಣ ತಿಳಿಸಿದರು.
ಉಸ್ತುವಾರಿ ಸಮಿತಿ ರಚನೆ
ಸಾಂಸ್ಕೃತಿ ಸಮಿತಿ: ಹನುಮಂತ ರಾವ್ ಸಾವಂತ್,ಹನುಮಂತರಾವ್ ಜಾಧವ್,
ಕುಸ್ತಿ ಸಮಿತಿ: ಎಚ್.ಬಿ.ಗೋಣೆಪ್ಪ, ಕುರಿಕಾಳಗಕ್ಕೆ ಉಮೇಶ್ ಸಾಳಂಕಿ, ರಾಮಕೃಷ್ಣ
ಬಾಬುದಾರರ ಸಮಿತಿ: ಗೌಡ್ರು ಚನ್ನಬಸಪ್ಪ, ಗೌಡ್ರು ರೇವಣಸಿದ್ದಪ್ಪ,
ಉತ್ಸವ ಸಮಿತಿ: ಬಿ.ಎಚ್. ವೀರಭದ್ರಪ್ಪ, ಜೆ.ಕೆ.ಕೊಟ್ರಬಸಪ್ಪ
ಪೆಂಡಾಲ್ ಸಮಿತಿ: ಪಿಸಾಳೆ ಸತ್ಯನಾರಾಯಣ, ಎಸ್.ಎಂ. ಗುರುರಾಜ್

ಈ 10 ಜನರ ಉಪಸಮಿತಿ ರಚನೆ ಮಾಡಿದ್ದು, ದುಗ್ಗಮ್ಮ ಜಾತ್ರೆಗೆ ಬೇಕಾದ ಸಿದ್ದತೆ ಮಾಡಿಕೊಳ್ಳುವಂತೆ ಶಾಮನೂರು ಶಿವಶಂಕರಪ್ಪ ಸೂಚಿಸಿದರು. ಮುಖಂಡರಾದ ಅಥಣಿ ವೀರಣ್ಣ, ಯಜಮಾನ ಮೋತಿ ವೀರಣ್ಣ, ಜೆ.ಕೆ.ಕೊಟ್ರಬಸಪ್ಪ, ಪಿಸಾಳೆ ಸತ್ಯನಾರಾಯಣ, ಹನುಮಂತರಾವ್ ಸಾವಂತ್, ಗೌಡ್ರುಚನ್ನಬಸಪ್ಪ, ಎಚ್.ಬಿ.ಗೋಣೆಪ್ಪ, ಸಾಳಂಕಿ ಉಮೇಶ್, ಬಿ.ಕೆ.ರಾಮಕೃಷ್ಣ, ಎಸ್. ಎಂ.ಗುರುರಾಜ್, ಹನುಮಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಮಾಲತೇಶ್ ಜಾಧವ್ ಇತರರು ಇದ್ದರು.



