Connect with us

Dvg Suddi-Kannada News

ಹೊಸ ವರ್ಷಕ್ಕೆ ರೈಲ್ವೆ ದರ ಏರಿಕೆ ಶಾಕ್

ರಾಷ್ಟ್ರ ಸುದ್ದಿ

ಹೊಸ ವರ್ಷಕ್ಕೆ ರೈಲ್ವೆ ದರ ಏರಿಕೆ ಶಾಕ್

ಹೊಸದಿಲ್ಲಿಹೊಸವರ್ಷ 2020 ಸಂಭ್ರಮದ ಮುನ್ನದಿನ ಕೇಂದ್ರ ಸರ್ಕಾರ ರೈಲು ಪ್ರಯಾಣಿಕರಿಗೆ ಶಾಕ್‌ ನೀಡಿದ್ದು, ರೈಲ್ವೆ ಸೇವೆಗಳ ಶುಲ್ಕ ಹೆಚ್ಚಳ ಮಾಡಿದೆ. ಉಪ ನಗರ ರೈಲ್ವೆ ಸೇವೆಗಳ ಶುಲ್ಕ ಹೊರತುಪಡಿಸಿ ಉಳಿದ ಶುಲ್ಕಗಳು ಇಂದಿನಿಂದಲೇ ಹೆಚ್ಚಳವಾಗಲಿದೆ.

ರೈಲ್ವೆ ಇಲಾಖೆ  ಮಂಗಳವಾರ ರಾತ್ರಿ ಈ ಆದೇಶ ಹೊರಡಿಸಿದೆ.  ಸಾಮಾನ್ಯ, ಹವಾನಿಯಂತ್ರಿತೇತರ ರೈಲು ದರಗಳು ಪ್ರತಿ ಕಿಲೋ ಮೀಟರ್‌ ಪ್ರಯಾಣಕ್ಕೆ 1 ಪೈಸೆ ಏರಿಕೆಯಾಗಲಿದೆ. ಮೇಲ್‌, ಎಕ್ಸ್‌ಪ್ರೆಸ್‌, ಎಸಿ ರೈಲುಗಳಲ್ಲಿ ಪ್ರಯಾಣ ದರ 2 ಪೈಸೆ, ಹವಾನಿಯಂತ್ರಿತ ರೈಲುಗಳಲ್ಲಿ ಪ್ರತಿ ಕಿಲೋ ಮೀಟರ್‌ಗೆ 4 ಪೈಸೆ ಏರಿಕೆಯಾಗಲಿದೆ.

ಶತಾಬ್ಧಿ, ರಾಜಧಾನಿ, ತುರಂತ್ ರೈಲುಗಳ ಸೇವಾ ಶುಲ್ಕವೂ ಹೆಚ್ಚಾಗಲಿದೆ. ಮುಂಗಡ ಟಿಕೆಟ್‌ ಮತ್ತು ಸೂಪರ್‌ ಫಾಸ್ಟ್‌ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top