ಡಿವಿಜಿ ಸುದ್ದಿ, ದಾವಣಗೆರೆ: ಬೇತೂರು ಗ್ರಾಮದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ರವರ ಹುಟ್ಟುಹಬ್ಬದ ಪ್ರಯುಕ್ತ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅಭಿಮಾನಿ ಬಳಗದ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಬೇತೂರು ಸುತ್ತಮುತ್ತಲಿನ ಗ್ರಾಮಸ್ಥರು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ರೇಣುಕ , ಬಿ. ಕರಿಬಸಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಪರಸಪ್ಪ, ಎಪಿಎಂಸಿ ನಿರ್ದೇಶಕ ಟಿ. ರಾಜಣ್ಣ, ವಿ ಎಸ್ ಎಸ್ ಎನ್ ಅಧ್ಯಕ್ಷ ಗುರು ಪ್ರಸಾದ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಿ, ಕರಿಬಸಪ್ಪ, ಡಿ.ಎಚ್.ಓ ಡಾ. ರಾಘವೇಂದ್ರ ಸ್ವಾಮಿ, ವೈದ್ಯರಾದ ಮುರಳಿಧರ್, ಗೀತಾ, ಮೀನಾಕ್ಷಿ, ಆಶಾ ಭಾನುಪ್ರಕಾಶ್, ಮುಖಂಡರಾದ ಬಸವರಾಜಯ್ಯ, ಚೇತನ್ ಕುಮಾರ್ , ನಾಗರಾಜ್, ಮುರಳೀಧರ್, ರಮೇಶ್, ಮಾರ್ಕುಂಟಿ ಮಂಜುನಾಥ್, ಕರಿಬಸಪ್ಪ, ಅಶೋಕ್, ಮಧು ಮುಂತಾದವರು ಉಪಸ್ಥಿತರಿದ್ದರು.




